- Kannada News Photo gallery Shivani Naveen Life Changed After Tamil Saregamapa Here are her Cute photos
ತಮಿಳು ಸರಿಗಮಪ ಬಳಿಕ ಹೇಗಿದೆ ಶಿವಾನಿ ನವೀನ್ ಲೈಫ್?
ಶಿವಾನಿ ನವೀನ್ ಅವರು ಮೂಲತಃ ಚಿಕ್ಕಮಗಳೂರಿನವರು. ಅವರು ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುವ ಕನಸು ಕಾಣುತ್ತಿದ್ದಾರೆ. ಅವರು ಇತ್ತೀಚೆಗೆ ತಮಿಳು ಸರಿಗಮಪದ ಭಾಗ ಆಗಿದ್ದರು. ಫಿನಾಲೆವರೆಗೆ ತೆರಳಿದ್ದ ಅವರಿಗೆ ಗೆಲುವು ಕಾಣಲು ಸಾಧ್ಯವಾಗಲೇ ಇಲ್ಲ. ಆ ಬಳಿಕ ಅವರು ಸಾಕಷ್ಟು ಶೋಗಳನ್ನು ನೀಡುತ್ತಿದ್ದಾರೆ.
Updated on:Jan 07, 2026 | 12:34 PM

ಶಿವಾನಿ ನವೀನ್ ಅವರು ಕಳೆದ ವರ್ಷ ತಮಿಳುನಾಡಿನಲ್ಲಿ ಮಿಂಚು ಹರಿಸಿದ್ದರು, ಇದಕ್ಕೆ ಕಾರಣ ಆಗಿದ್ದು ತಮಿಳಿನ ಸರಿಗಮಪ ಶೋ. ಅಲ್ಲಿ ಅವರು ಭಾಗವಹಿಸಿ ಸಾಕಷ್ಟು ಗಮನ ಸೆಳೆದಿದ್ದರು. ಈಗ ಶಿವಾನಿ ಅವರು ವಿವಿಧ ಶೋಗಳನ್ನು ನೀಡುತ್ತಿದ್ದಾರೆ.

ಶಿವಾನಿ ಅವರು ಜೀ ಕನ್ನಡದ ‘ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19’ರಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರು ಮೊದಲ ರನ್ನರ್-ಅಪ್ ಆಗಿದ್ದರು. ಅವರಿಗೆ ಸಂಗೀತದ ಬಗ್ಗೆ ಅಪಾರ ಪ್ರೀತಿ ಇದೆ. ಪ್ರತಿ ಹಂತದಲ್ಲೂ ಕಲಿಕೆ ಮಾಡುತ್ತಾ ಸಾಗುತ್ತಿದ್ದಾರೆ.

ತಮಿಳಿನ ಸರಿಗಮಪ ಸೀನಿಯರ್ಸ್ ಸೀಸನ್ 5’ರಲ್ಲಿ ಶಿವಾನಿ ಫಿನಾಲೆ ತಲುಪಿದ್ದರು. ಆದರೆ, ಗೆಲುವು ಸಿಕ್ಕಿಲ್ಲ ತಮ್ಮ ಗಾಯನದ ಮೂಲಕ ಕನ್ನಡ ಹಾಗೂ ತಮಿಳು ವೀಕ್ಷಕರ ಮನಗೆದ್ದಿದ್ದಾರೆ. ಅವರ ಅಭಿಮಾನಿ ಬಳಗ ಈಗ ಹಿರಿದಾಗಿದೆ.

ಶಿವಾನಿ ನವೀನ್ ಅವರು ವಿವಿಧ ಕಡೆಗಳಲ್ಲಿ ಶೋಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಪಾಂಡಿಚೇರಿಗೆ ತೆರಳಿ ಶೋ ಕೊಟ್ಟಿದ್ದಾರೆ. ಈ ಮೂಲಕ ಬೇರೆ ಭಾಷೆ, ರಾಜ್ಯಗಿಂದಲೂ ಅವರಿಗೆ ಆಫರ್ಗಳು ಬರುತ್ತಿರುವುದು ಸ್ಪಷ್ಟವಾಗಿದೆ.

ಶಿವಾನಿ ನವೀನ್ ಮೂಲತಃ ಚಿಕ್ಕಮಗಳೂರಿನವರು. ಅವರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಅವರು ವಿವಿಧ ಆಲ್ಬಂಗಳಲ್ಲಿ ಹಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಅವರ ಖ್ಯಾತಿ ಮತ್ತಷ್ಟು ಹೆಚ್ಚಲಿ ಎಂಬುದು ಅಭಿಮಾನಿಗಳ ಕೋರಿಕೆ,
Published On - 12:33 pm, Wed, 7 January 26




