AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ದಕ್ಷಿಣದ ನಿರ್ದೇಶಕನ ಕೈ ಹಿಡಿದ ಸಲ್ಲು, ಈ ಬಾರಿ ರಾಷ್ಟ್ರಪ್ರಶಸ್ತಿ ವಿಜೇತನ ಜೊತೆ

Salman Khan: ಅತ್ತ ಶಾರುಖ್ ಖಾನ್ ದೊಡ್ಡ ದೊಡ್ಡ ಹಿಟ್ ನೀಡುತ್ತಿದ್ದಾರೆ. ಸಲ್ಲು ಅವರಿಂಗತಲೂ ಕಿರಿಯರಾದ ರಣ್​​ಬೀರ್ ಕಪೂರ್, ರಣ್ವೀರ್ ಸಿಂಗ್, ವಿಕ್ಕಿ ಕೌಶಲ್ ಅವರುಗಳು 1000 ಕೋಟಿ ಕಲೆಕ್ಷನ್ ತೆಗೆಯುತ್ತಿದ್ದಾರೆ ಆದರೆ ಸಲ್ಲು ಸಿನಿಮಾಗಳು ಮಾತ್ರ ಫ್ಲಾಪ್ ಮೇಲೆ ಫ್ಲಾಪ್ ಆಗುತ್ತಿವೆ. ಇದೀಗ ಸೋಲಿನ ಸುಳಿಯಿಂದ ಹೊರಬರಲು ಸಲ್ಮಾನ್ ಖಾನ್ ಮತ್ತೊಮ್ಮೆ ದಕ್ಷಿಣದ ನಿರ್ದೇಶಕನ ಕೈ ಹಿಡಿದಿದ್ದಾರೆ. ಅದೂ ಕೇವಲ ನಿರ್ದೇಶಕ ಮಾತ್ರವಲ್ಲ ನಿರ್ಮಾಪಕರೂ ದಕ್ಷಿಣದವರೇ ಆಗಿದ್ದಾರೆ.

ಮತ್ತೆ ದಕ್ಷಿಣದ ನಿರ್ದೇಶಕನ ಕೈ ಹಿಡಿದ ಸಲ್ಲು, ಈ ಬಾರಿ ರಾಷ್ಟ್ರಪ್ರಶಸ್ತಿ ವಿಜೇತನ ಜೊತೆ
Salman Khan
ಮಂಜುನಾಥ ಸಿ.
|

Updated on: Mar 08, 2026 | 10:46 PM

Share

ಸಲ್ಮಾನ್ ಖಾನ್ (Salman Khan) ಬಾಲಿವುಡ್​​ನ ಸೂಪರ್ ಸ್ಟಾರ್. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅವರಿಗೆ ದೊಡ್ಡ ಬಾಕ್ಸ್ ಆಫೀಸ್​​ ಗೆಲುವು ಸಿಕ್ಕೇ ಇಲ್ಲ. ಅತ್ತ ಶಾರುಖ್ ಖಾನ್ ದೊಡ್ಡ ದೊಡ್ಡ ಹಿಟ್ ನೀಡುತ್ತಿದ್ದಾರೆ. ಸಲ್ಲು ಅವರಿಂಗತಲೂ ಕಿರಿಯರಾದ ರಣ್​​ಬೀರ್ ಕಪೂರ್, ರಣ್ವೀರ್ ಸಿಂಗ್, ವಿಕ್ಕಿ ಕೌಶಲ್ ಅವರುಗಳು 1000 ಕೋಟಿ ಕಲೆಕ್ಷನ್ ತೆಗೆಯುತ್ತಿದ್ದಾರೆ ಆದರೆ ಸಲ್ಲು ಸಿನಿಮಾಗಳು ಮಾತ್ರ ಫ್ಲಾಪ್ ಮೇಲೆ ಫ್ಲಾಪ್ ಆಗುತ್ತಿವೆ. ಇದೀಗ ಸೋಲಿನ ಸುಳಿಯಿಂದ ಹೊರಬರಲು ಸಲ್ಮಾನ್ ಖಾನ್ ಮತ್ತೊಮ್ಮೆ ದಕ್ಷಿಣದ ನಿರ್ದೇಶಕನ ಕೈ ಹಿಡಿದಿದ್ದಾರೆ. ಅದೂ ಕೇವಲ ನಿರ್ದೇಶಕ ಮಾತ್ರವಲ್ಲ ನಿರ್ಮಾಪಕರೂ ದಕ್ಷಿಣದವರೇ ಆಗಿದ್ದಾರೆ.

ಸಲ್ಮಾನ್ ಖಾನ್ ಅವರಿಗಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ ದಕ್ಷಿಣದ ಖ್ಯಾತ ನಿರ್ಮಾಪಕ ದಿಲ್ ರಾಜು. ತೆಲುಗು ಸಿನಿಮಾ ರಂಗದ ದೊಡ್ಡ ನಿರ್ಮಾಪಕರಲ್ಲಿ ಒಬ್ಬರಾಗಿರುವ ದಿಲ್ ರಾಜು ಇದೀಗ ಮೂರನೇ ಹಿಂದಿ ಸಿನಿಮಾಣಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ತೆಲುಗಿನ ರೀಮೇಕ್​​ಗಳಾದ ಹಿಂದಿಯ ‘ಜೆರ್ಸಿ’ ಮತ್ತು ‘ಹಿಟ್’ ಸಿನಿಮಾಗಳನ್ನು ದಿಲ್ ರಾಜು ನಿರ್ಮಿಸಿದ್ದರು. ಇದೀಗ ಮೊದಲ ಬಾರಿಗೆ ಹಿಂದಿಯ ಸೂಪರ್ ಸ್ಟಾರ್ ನಟನೊಟ್ಟಿಗೆ ಕೆಲಸ ಮಾಡಲು ಮುಂದಾಗಿದ್ದಾರೆ.

ಸಲ್ಮಾನ್ ಖಾನ್ ಅವರ ಈ ಸಿನಿಮಾಕ್ಕಾಗಿ ದಿಲ್ ರಾಜು, ತೆಲುಗಿನ ಪ್ರತಿಭಾವಂತ ಜೊತೆಗೆ ಕಮರ್ಶಿಯಲ್ ಸಿನಿಮಾ ನಿರ್ದೇಶಕರೂ ಎನಿಸಿಕೊಂಡಿರುವ ವಂಶಿ ಪೈಡಪಲ್ಲಿ ಅವರನ್ನು ಜೊತೆಗೆ ಕರೆದೊಯ್ದಿದ್ದಾರೆ. ಈ ಹಿಂದೆ ‘ಮಹರ್ಶಿ’, ದಳಪತಿ ವಿಜಯ್ ನಟನೆಯ ‘ವಾರಿಸು’, ಜೂ ಎನ್​​ಟಿಆರ್ ನಟನೆಯ ‘ಬೃಂದಾವನಂ’, ರಾಮ್ ಚರಣ್ ನಟನೆಯ ‘ಯೆವುಡು’ ಸಿನಿಮಾಗಳನ್ನು ನಿರ್ದೇಶಿಸಿರುವ ವಂಶಿ ಪೈಡಪಲ್ಲಿ, ಸ್ಟಾರ್ ನಟರಿಗಾಗಿ ಸಾಮಾಜಿಕ ಸಂದೇಶವುಳ್ಳ ಅಥವಾ ಕೌಟುಂಬಿಕ ಕತೆಗಳುಳ್ಳ ಸಿನಿಮಾಗಳನ್ನು ಮಾಡುವುದರಲ್ಲಿ ನಿಸ್ಸೀಮರು. ವಂಶಿ ನಿರ್ದೇಶನದ ಮಹೇಶ್ ಬಾಬು ನಟನೆಯ ‘ಮಹರ್ಷಿ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಸಹ ದೊರೆತಿದೆ.

ಇದನ್ನೂ ಓದಿ:ನಾನು ಸ್ಟಾರ್ ಆಗಲು ಸಲ್ಮಾನ್ ಖಾನ್ ತಂದೆ ಕಾರಣ ಎಂದಿದ್ದ ಶಾರುಖ್

ಇದೀಗ ಸಲ್ಮಾನ್ ಖಾನ್ ಅವರಿಗಾಗಿ ಸಾಮಾಜಿಕ ಸಂದೇಶವುಳ್ಳ ಆಕ್ಷನ್ ಸಿನಿಮಾ ಕತೆಯನ್ನು ವಂಶಿ ಪೈಡಪಲ್ಲಿ ಹೆಣೆದಿದ್ದು, ಸಿನಿಮಾದ ಚಿತ್ರೀಕರಣ ಏಪ್ರಿಲ್ ತಿಂಗಳಲ್ಲಿ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಸಲ್ಮಾನ್ ಖಾನ್ ಈ ಹಿಂದೆಯೂ ಸಹ ಹಲವು ದಕ್ಷಿಣದ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ. ಪ್ರಭುದೇವ ನಿರ್ದೇಶನದ ‘ವಾಂಟೆಡ್’, ‘ರಾಧೆ’, ‘ದಬಂಗ್ 3’ ಸಿನಿಮಾಗಳಲ್ಲಿ ಸಲ್ಲು ನಟಿಸಿದ್ದರು. ಮುರುಗದಾಸ್ ನಿರ್ದೇಶನದ ‘ಸಿಖಂಧರ್’ ಸಿನಿಮಾನಲ್ಲಿ ನಟಿಸಿದರು, ಅದು ಧಾರುಣವಾಗಿ ಫ್ಲಾಪ್ ಆಯ್ತು. ಮಲಯಾಳಂ ನಿರ್ದೇಶಕ ಸಿದ್ಧಿಕ್ ಅವರೊಟ್ಟಿಗೆ ‘ಬಾಡಿಗಾರ್ಡ್’ ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಮತ್ತೊಮ್ಮೆ ದಕ್ಷಿಣದ ನಿರ್ದೇಶಕನ ಜೊತೆಗೆ ಕೆಲಸ ಮಾಡಲಿದ್ದಾರೆ.

ಸಲ್ಮಾನ್ ಖಾನ್ ಇದೀಗ ‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾ ಮುಗಿಸಿದ್ದಾರೆ. ಗಲ್ವಾನ್​​ನಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಗಲಾಟೆಯ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿದೆ. ಇದಾದ ಬಳಿಕ ರಾಜ್ ಮತ್ತು ಡಿಕೆ ನಿರ್ಮಿಸಿ, ನಿರ್ದೇಶಿಸುತ್ತಿರುವ ಕಾಮಿಡಿ-ಆಕ್ಷನ್ ಸಿನಿಮಾನಲ್ಲಿ ನಟಿಸಲಿದ್ದಾರೆ. ಇದೇ ಸಿನಿಮಾದ ಜೊತೆಗೆ ವೈಂಶಿ ಪೈಡಪಲ್ಲಿಯ ಸಿನಿಮಾ ಸಹ ಚಿತ್ರೀಕರಣಗೊಳ್ಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us