AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಸ್ಟಾರ್ ಆಗಲು ಸಲ್ಮಾನ್ ಖಾನ್ ತಂದೆ ಕಾರಣ ಎಂದಿದ್ದ ಶಾರುಖ್

Shah Rukh Khan: ಹಿಂದೆ ಸಂದರ್ಶನವೊಂದರಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರನ್ನು ಕೊಂಡಾಡಿದ್ದರು. ಯಾವ ಮಟ್ಟಿಗೆಂದರೆ, ‘ನಾನು ಇಂದು ಏನಾಗಿದ್ದೇನೊ ಅದಕ್ಕೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಕಾರಣ’ ಎಂದಿದ್ದರು. ಇಂದು ಆಸ್ಪತ್ರೆಯಲ್ಲಿ ಮಲಗಿರುವ ಸಲೀಂ ಖಾನ್, ಶಾರುಖ್ ಖಾನ್​​ಗೆ ಮಾಡಿದ್ದ ಸಹಾಯ ಎಂಥಹದ್ದು?

ನಾನು ಸ್ಟಾರ್ ಆಗಲು ಸಲ್ಮಾನ್ ಖಾನ್ ತಂದೆ ಕಾರಣ ಎಂದಿದ್ದ ಶಾರುಖ್
Shah Rukh Khan Salim Khan
ಮಂಜುನಾಥ ಸಿ.
|

Updated on: Feb 19, 2026 | 5:52 PM

Share

ಶಾರುಖ್ ಖಾನ್ (Shah Rukh Khan) ಈಗ ಬಾಲಿವುಡ್​ನ ಸೂಪರ್ ಸ್ಟಾರ್ ನಟ. ಕಳೆದ ಕೆಲವ ವರ್ಷಗಳಲ್ಲಿ ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಅವರುಗಳನ್ನು ಸಹ ಹಿಂದಿಕ್ಕಿ ನಂಬರ್ 1 ಎನಿಸಿಕೊಂಡಿದ್ದಾರೆ. ಸಲ್ಮಾನ್ ಮತ್ತು ಆಮಿರ್ ಅವರಂತೆ ಚಿತ್ರರಂಗದ ಹಿನ್ನೆಲೆ ಇಲ್ಲದೆ ಕೇವಲ ಪ್ರತಿಭೆಯ ಆಧಾರದ ಮೇಲೆ ಅವಕಾಶ ಗಿಟ್ಟಿಸಿಕೊಂಡು ಸ್ಟಾರ್ ಆಗಿ ಬೆಳೆದವರು ಶಾರುಖ್ ಖಾನ್. ಆದರೆ ಹಿಂದೆ ಸಂದರ್ಶನವೊಂದರಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಅವರ ತಂದೆಯನ್ನು ಕೊಂಡಾಡಿದ್ದರು. ಯಾವ ಮಟ್ಟಿಗೆಂದರೆ, ‘ನಾನು ಇಂದು ಏನಾಗಿದ್ದೇನೊ ಅದಕ್ಕೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಕಾರಣ’ ಎಂದಿದ್ದರು. ಇಂದು ಆಸ್ಪತ್ರೆಯಲ್ಲಿ ಮಲಗಿರುವ ಸಲೀಂ ಖಾನ್, ಶಾರುಖ್ ಖಾನ್​​ಗೆ ಮಾಡಿದ್ದ ಸಹಾಯ ಎಂಥಹದ್ದು?

ಶಾರುಖ್ ಖಾನ್ ಮೂಲತಃ ದೆಹಲಿಯವರು. ಅವರು ನಟನಾಗಲೆಂದೇ ಮುಂಬೈಗೆ ಬಂದರು ಅದೂ ಬಹಳ ಸಣ್ಣ ವಯಸ್ಸಿನಲ್ಲಿ. ಕೇವಲ 15ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡಿದ್ದ ಶಾರುಖ್ ಖಾನ್​​ 19ರ ವಯಸ್ಸಿನಲ್ಲೇ ಮುಂಬೈಗೆ ಬಂದಿದ್ದರು. ಕುಟುಂಬವನ್ನು ಬಿಟ್ಟು ಬಂದಿದ್ದ ಶಾರುಖ್ ಖಾನ್​​ ಅವರಿಗೆ ಕುಟುಂಬ ಎಂದು ದೊರೆತಿದ್ದು ಸಲ್ಮಾನ್ ಖಾನ್ ಅವರ ಕುಟುಂಬ. ಅವರೇ ಹೇಳಿಕೊಂಡಿದ್ದಂತೆ ಶಾರುಖ್ ಖಾನ್ ಅವರು ಸಲೀಂ ಖಾನ್ ಅವರ ಮನೆಯಲ್ಲಿ ಹಲವು ಸಮಯ ನೆಲೆಸಿದ್ದರಂತೆ. ಸಲೀಂ ಖಾನ್ ಅವರು ನನ್ನ ವೃತ್ತಿ ಜೀವನದ ಆರಂಭದ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದ್ದರು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ತಮ್ಮದೇ ಹಳೆ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಲಿದ್ದಾರೆ ಶಾರುಖ್ ಖಾನ್

ಇತ್ತೀಚೆಗೆ ಸಹ ಸಂದರ್ಶನವೊಂದರಲ್ಲಿ, ‘ಸಿನಿಮಾ ಹಿನ್ನೆಲೆ ಇಲ್ಲದ ಕುಟುಂಬದವನು ಎಂದು ನನಗೆ ಹೇಳಬೇಡಿ, ನಾನು ಸಲ್ಮಾನ್ ಖಾನ್ ಕುಟುಂಬದ ಸದಸ್ಯ’ ಎಂದಿದ್ದರು. ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದರೂ ಸಹ ಅತ್ಯುತ್ತಮ ಗೆಳೆಯರಾಗಿದ್ದರು. ಆಮಿರ್ ಖಾನ್ ಸಹ ಇವರ ಆತ್ಮೀಯ ಗೆಳೆಯರೇ ಆಗಿದ್ದರು. ಅದರೆ ಕತ್ರಿನಾ ಕೈಫ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಲ್ಮಾನ್ ಮತ್ತು ಶಾರುಖ್ ಖಾನ್ ಪರಸ್ಪರ ಜಗಳ ಮಾಡಿಕೊಂಡು ದೂರಾಗಿದ್ದರು. ಆದರೆ ಬಳಿಕ ಇಬ್ಬರೂ ಮತ್ತೆ ಮುನಿಸು ಮರೆತು ಒಂದಾದರು. ಶಾರುಖ್ ಖಾನ್ ಪುತ್ರ ಡ್ರಗ್ಸ್ ಕೇಸಿನಲ್ಲಿ ಬಂಧನಕ್ಕೆ ಒಳಗಾದಾಗ ಸಲ್ಮಾನ್ ಖಾನ್ ಖುದ್ದು ಶಾರುಖ್ ಖಾನ್ ಮನೆಗೆ ಭೇಟಿ ನೀಡಿ, ಸಂಕಷ್ಟದ ಸಮಯದಲ್ಲಿ ಗೆಳೆಯನ ಜೊತೆಗೆ ನಿಂತಿದ್ದರು.

ಶಾರುಖ್ ಖಾನ್, ತಂದೆಯಂತೆ ಕಂಡಿದ್ದ ಸಲೀಂ ಖಾನ್ ಅವರು ಇದೀಗ ಆಸ್ಪತ್ರೆಯಲ್ಲಿದ್ದಾರೆ. ಸಲೀಂ ಖಾನ್ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವ ಆಗಿದೆ ಎನ್ನಲಾಗಿದ್ದು, ಸಣ್ಣ ಶಸ್ತ್ರಚಿಕಿತ್ಸೆ ಸಹ ಮಾಡಲಾಗಿದೆಯಂತೆ. ಇತ್ತೀಚೆಗಿನ ವರದಿಗಳ ಪ್ರಕಾರ, ಸಲೀಂ ಖಾನ್ ಅವರು ಸುಧಾರಿಸಿಕೊಳ್ಳುತ್ತಿದ್ದು, ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ