AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮದೇ ಹಳೆ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಲಿದ್ದಾರೆ ಶಾರುಖ್ ಖಾನ್

Shah Rukh Khan next movie: ಶಾರುಖ್ ಖಾನ್ ಇದೀಗ ‘ಕಿಂಗ್’ ಸಿನಿಮಾ ಮೂಲಕ ಅದೇ ಮ್ಯಾಜಿಕ್ ಅನ್ನು ಪುನರಾವರ್ತನೆ ಮಾಡುವ ಭರವಸೆಯಲ್ಲಿದ್ದಾರೆ. ಸಿನಿಮಾದ ಸಣ್ಣ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸಿದೆ. ಇದೀಗ ‘ಕಿಂಗ್’ ಬಳಿಕ ಶಾರುಖ್ ಖಾನ್ ನಟಿಸಲಿರುವ ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿದ್ದು, ತಮ್ಮದೇ ಕಲ್ಟ್ ಕ್ಲಾಸಿಕ್ ಸಿನಿಮಾದ ಸೀಕ್ವೆಲ್​ನಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ತಮ್ಮದೇ ಹಳೆ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಲಿದ್ದಾರೆ ಶಾರುಖ್ ಖಾನ್
Shah Rukh Khan
ಮಂಜುನಾಥ ಸಿ.
|

Updated on:Feb 06, 2026 | 6:54 PM

Share

ಶಾರುಖ್ ಖಾನ್ (Shah Rukh Khan) ಪ್ರಸ್ತುತ ‘ಕಿಂಗ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳ ಮೂಲಕ ಸತತ ಮೂರು ಬ್ಲಾಕ್ ಬಸ್ಟರ್ ನೀಡಿದ ಶಾರುಖ್ ಖಾನ್ ಇದೀಗ ‘ಕಿಂಗ್’ ಸಿನಿಮಾ ಮೂಲಕ ಅದೇ ಮ್ಯಾಜಿಕ್ ಅನ್ನು ಪುನರಾವರ್ತನೆ ಮಾಡುವ ಭರವಸೆಯಲ್ಲಿದ್ದಾರೆ. ಸಿನಿಮಾದ ಸಣ್ಣ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸಿದೆ. ಇದೀಗ ‘ಕಿಂಗ್’ ಬಳಿಕ ಶಾರುಖ್ ಖಾನ್ ನಟಿಸಲಿರುವ ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿದ್ದು, ತಮ್ಮದೇ ಕಲ್ಟ್ ಕ್ಲಾಸಿಕ್ ಸಿನಿಮಾದ ಸೀಕ್ವೆಲ್​ನಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

2004ರ ಬ್ಲಾಕ್‌ಬಸ್ಟರ್ ಸಿನಿಮಾ ‘ಮೈ ಹೂ ನಾ’ ಶಾರುಖ್ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದು. ಆ ಸಿನಿಮಾ ಕಲ್ಟ್ ಎನಿಸಿಕೊಂಡಿದೆ. ಆ ಸಿನಿಮಾದ ಹಾಸ್ಯ, ಪಾತ್ರಗಳ ಸ್ಟೈಲ್, ಹಾಡುಗಳಂತೂ ಇಂದಿಗೂ ಜನಪ್ರಿಯ. ಶಾರುಖ್ ಖಾನ್ ಅವರ ಆಪ್ತ ಗೆಳತಿ ಫರಾಹ್ ಖಾನ್ ನಿರ್ದೇಶಿಸಿದ್ದ ‘ಮೈ ಹೂ ನಾ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಮ್ಯಾಜಿಕ್ಕನ್ನೇ ಮಾಡಿತ್ತು. ಇದೀಗ ಶಾರುಖ್ ಖಾನ್ ‘ಮೈ ಹೂ ನ 2’ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಕೇಳಿ ಬರುತ್ತಿವೆ.

ಈಗ ಹರಿದಾಡುತ್ತಿರುವ ವರದಿಗಳ ಪ್ರಕಾರ, ಫರಾಹ್ ಖಾನ್ ‘ಮೈ ಹೂ ನಾ 2’ ಸಿನಿಮಾಕ್ಕಾಗಿ ಕಥೆಯನ್ನು ಸಿದ್ಧಪಡಿಸಿದ್ದಾರೆ. ವಿಶೇಷವೆಂದರೆ ಈ ಬಾರಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. 2004ರ ‘ಮೈ ಹೂ ನಾ’ ಅಣ್ಣ-ತಮ್ಮನ ಕತೆ ಆಗಿತ್ತು. ಆದರೆ ಈ ಬಾರಿಯ ಸಿನಿಮಾನಲ್ಲಿ ಶಾರುಖ್ ಖಾನ್ ಅವರೇ ಎರಡು ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಎರಡು ವಿಭಿನ್ನ ಶೇಡ್‌ಗಳಿರುವ ಪಾತ್ರಗಳನ್ನು ಫರಾಹ್ ಖಾನ್ ಸೃಷ್ಟಿಸಿದ್ದು, ಈಗಾಗಲೇ ಕಿಂಗ್ ಖಾನ್‌ಗೆ ಈ ಐಡಿಯಾವನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಶಾರುಖ್ ಕೂಡ ಈ ಹೊಸ ಪ್ರಯೋಗಕ್ಕೆ ಅತೀವ ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತದೆ. ಆಕಾಶ್ ಕೌಶಿಕ್ ಅವರು ಸಿನಿಮಾದ ಚಿತ್ರಕತೆ ರಚಿಸುತ್ತಿದ್ದಾರೆ.

ಇದನ್ನೂ ಓದಿ:ಶಾರುಖ್ ಖಾನ್ ಮಗಳ ವರ್ಕೌಟ್ ವಿಡಿಯೋ ವೈರಲ್

2004ರ ‘ಮೈ ಹೂ ನಾ’ ಸಿನಿಮಾದ ರೀತಿಯೇ ಸೀಕ್ವೆಲ್ ಸಹ ದೇಶಭಕ್ತಿಯ ಹಿನ್ನೆಲೆಯನ್ನೇ ಹೊಂದಿರುತ್ತದೆ. ಭಾರತಕ್ಕೆ ಎದುರಾಗುವ ಹೊಸ ಸವಾಲು ಮತ್ತು ಅದನ್ನು ಎದುರಿಸುವ ಮೇಜರ್ ರಾಮ್ ಪ್ರಸಾದ್ ಶರ್ಮಾ ಅವರ ಸಾಹಸಗಾಥೆ ಸಿನಿಮಾದಲ್ಲಿ ಇರಲಿದೆ. ಆದರೆ ಈ ಬಾರಿ ಸಾಹಸದ ಜೊತೆಗೆ ಹಾಸ್ಯ ಮತ್ತು ಭಾವನಾತ್ಮಕ ಸನ್ನಿವೇಶಗಳು ಇಮ್ಮಡಿಯಾಗಿರಲಿವೆ. ಜೊತೆಗೆ ಹಾಡುಗಳು ಸಹ ಸಖತ್ ಆಗಿಯೇ ಇರಲಿವೆ ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಶಾರುಖ್ ಖಾನ್ ಸದ್ಯ ತಮ್ಮ ’ಕಿಂಗ್’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಕೆಲಸಗಳು 2026ರ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಆನಂತರವೇ ಅವರು ‘ಮೈ ಹೂ ನಾ 2’ ಚಿತ್ರದ ಸಂಪೂರ್ಣ ಸ್ಕ್ರಿಪ್ಟ್ ಕೇಳಲಿದ್ದಾರೆ. ಸ್ಕ್ರಿಪ್ಟ್ ಅಂತಿಮಗೊಂಡ ಬಳಿಕವೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:48 pm, Fri, 6 February 26

ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ
ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ
ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ
ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ
ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ
ಯತೀಂದ್ರ ಕಾಂಗ್ರೆಸ್ ಪಕ್ಷದ ಹೈಕಮಾಂಡ್: ಡಿಕೆ ಶಿವಕುಮಾರ್ ಮಾತಿನ ಮರ್ಮಾವೇನು?
ಯತೀಂದ್ರ ಕಾಂಗ್ರೆಸ್ ಪಕ್ಷದ ಹೈಕಮಾಂಡ್: ಡಿಕೆ ಶಿವಕುಮಾರ್ ಮಾತಿನ ಮರ್ಮಾವೇನು?
ಸತೀಶ್ ಜಾರಕಿಹೊಳಿಯನ್ನು ‘ಕ್ಲೀನ್ ಬೋಲ್ಡ್’ ಮಾಡಿದ ಲಕ್ಷ್ಮೀ ಹೆಬ್ಬಾಳಕರ್..!
ಸತೀಶ್ ಜಾರಕಿಹೊಳಿಯನ್ನು ‘ಕ್ಲೀನ್ ಬೋಲ್ಡ್’ ಮಾಡಿದ ಲಕ್ಷ್ಮೀ ಹೆಬ್ಬಾಳಕರ್..!
3 ಭಾಷೆಯಲ್ಲಿ ತಾನೇ ಬರೆದ ಗೀತೆ ಹಾಡಿದ ಬಾಲಕಿ; ಪ್ರಧಾನಿ ಮೋದಿ ಮೆಚ್ಚುಗೆ
3 ಭಾಷೆಯಲ್ಲಿ ತಾನೇ ಬರೆದ ಗೀತೆ ಹಾಡಿದ ಬಾಲಕಿ; ಪ್ರಧಾನಿ ಮೋದಿ ಮೆಚ್ಚುಗೆ
ಕಳೆದು ಹೋದ ಸಮಯದ ಬಗ್ಗೆ ಚಿಂತೆ ಬೇಡ, ಭವಿಷ್ಯದ ಬಗ್ಗೆ ಗಮನಕೊಡಿ: ಮೋದಿ
ಕಳೆದು ಹೋದ ಸಮಯದ ಬಗ್ಗೆ ಚಿಂತೆ ಬೇಡ, ಭವಿಷ್ಯದ ಬಗ್ಗೆ ಗಮನಕೊಡಿ: ಮೋದಿ
ಇಂದು ನಾನು ಕಷ್ಟಪಟ್ಟು 'ವಿಕಸಿತ ಭಾರತ'ದ ಬುನಾದಿ ಹಾಕುತ್ತಿರುವುದು ನಿಮಗಾಗಿ
ಇಂದು ನಾನು ಕಷ್ಟಪಟ್ಟು 'ವಿಕಸಿತ ಭಾರತ'ದ ಬುನಾದಿ ಹಾಕುತ್ತಿರುವುದು ನಿಮಗಾಗಿ
ಎಎಪಿ ನಾಯಕನ ಮೇಲೆ ಗುಂಡಿನ ದಾಳಿ, ಹಾಡಹಗಲೇ ನಡೆಯಿತು ಕೊಲೆ
ಎಎಪಿ ನಾಯಕನ ಮೇಲೆ ಗುಂಡಿನ ದಾಳಿ, ಹಾಡಹಗಲೇ ನಡೆಯಿತು ಕೊಲೆ