AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕದಿನ ವಿಶ್ವಕಪ್​ಗೆ 10 ತಂಡಗಳು ನೇರ ಆಯ್ಕೆ

ODI World Cup 2027: 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯು 2027ರ ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ನಡೆಯಲಿದೆ. ಮುಂಬರುವ ಟೂರ್ನಿಗೆ ಆಫ್ರಿಕಾ ಖಂಡದ ಪ್ರಮುಖ ಮೂರು ದೇಶಗಳಾದ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯವಹಿಸಲಿದೆ.

ಝಾಹಿರ್ ಯೂಸುಫ್
|

Updated on: Aug 01, 2026 | 10:36 AM

Share
ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಜಂಟಿಯಾಗಿ ನಡೆಯಲಿರುವ 2027ರ ಏಕದಿನ ವಿಶ್ವಕಪ್ ಟೂರ್ನಿಗೆ 10 ತಂಡಗಳು ನೇರ ಅರ್ಹತೆ ಪಡೆದುಕೊಂಡಿವೆ. ಈ ಹತ್ತು ತಂಡಗಳಲ್ಲಿ 8 ತಂಡಗಳು ಐಸಿಸಿ ಏಕದಿನ ಶ್ರೇಯಾಂಕದ ಆಧಾರದ ಮೇಲೆ ನೇರವಾಗಿ ಅರ್ಹತೆ ಪಡೆದರೆ, ಉಳಿದ 2 ತಂಡಗಳು ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ಆತಿಥೇಯ ರಾಷ್ಟ್ರಗಳಾಗಿ ನೇರ ಅರ್ಹತೆ ಗಿಟ್ಟಿಸಿಕೊಂಡಿವೆ. (PC: ICC)

1 / 12
ಇನ್ನುಳಿದ 4 ಸ್ಥಾನಗಳಿಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಅಲ್ಲಿಂದ ಒಟ್ಟು ನಾಲ್ಕು ತಂಡಗಳು ವಿಶ್ವಕಪ್ ಮುಖ್ಯ ಟೂರ್ನಿಗೆ ಲಗ್ಗೆ ಇಡಲಿವೆ. ಆ ಬಳಿಕ ಆರಂಭವಾಗುವ ವಿಶ್ವಕಪ್‌ನ ಒಟ್ಟು 14 ತಂಡಗಳಲ್ಲಿ, ಕೊನೆಯ 3 ಶ್ರೇಯಾಂಕದ ತಂಡಗಳು ಮಾತ್ರ ಮೊದಲ ಹಂತದಲ್ಲಿ 'ಸೂಪರ್ ಸಿರೀಸ್' ಪಂದ್ಯಗಳನ್ನಾಡಲಿವೆ. ಇವುಗಳಲ್ಲಿ 2 ತಂಡಗಳು ಹೊರಬಿದ್ದು, ಅಗ್ರಸ್ಥಾನ ಪಡೆಯುವ ಕೇವಲ 1 ತಂಡ ಮಾತ್ರ ಮುಂದಿನ ಮುಖ್ಯ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಇದಾದ ಬಳಿಕ ಒಟ್ಟು 12 ತಂಡಗಳ ನಡುವಣ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಇನ್ನು ವಿಶ್ವಕಪ್​ಗೆ ನೇರ ಅರ್ಹತೆ ಪಡೆದಿರುವ 10 ತಂಡಗಳ ಪಟ್ಟಿ ಈ ಕೆಳಗಿನಂತಿದೆ... (PC: ICC)

2 / 12
ಭಾರತ: ಐಸಿಸಿ ಏಕದಿನ ತಂಡಗಳ ರ್ಯಾಂಕಿಂಗ್​​ನಲ್ಲಿ ನಂಬರ್ 1 ತಂಡವಾಗಿರುವ ಟೀಮ್ ಇಂಡಿಯಾ 2027ರ ಏಕದಿನ ವಿಶ್ವಕಪ್​ಗೆ ನೇರ ಅರ್ಹತೆ ಪಡೆದ ಮೊದಲ ತಂಡವಾಗಿದೆ.  (PC: Getty Images)

3 / 12
ನ್ಯೂಝಿಲೆಂಡ್: ಐಸಿಸಿ ಟೂರ್ನಿಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುವ ‘ಬ್ಲಾಕ್‌ಕ್ಯಾಪ್ಸ್’ ಪಡೆ, ಭಾರತದ ಬೆನ್ನಿಗೇ ಎರಡನೇ ಸ್ಥಾನದಲ್ಲಿದ್ದು ಸುಲಭವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. (PC: Getty Images)

4 / 12
ಆಸ್ಟ್ರೇಲಿಯಾ: ವಿಶ್ವಕಪ್ ಇತಿಹಾಸದ ಅತ್ಯಂತ ಯಶಸ್ವಿ ತಂಡ ಹಾಗೂ ಹಾಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ, ತನ್ನ ಬಲಿಷ್ಠ ಶ್ರೇಯಾಂಕದ ಬಲದೊಂದಿಗೆ ನೇರ ಪ್ರವೇಶ ಪಡೆದಿದೆ. (PC: Getty Images)

5 / 12
ಸೌತ್ ಆಫ್ರಿಕಾ: ಈ ತಂಡವು ಶ್ರೇಯಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದರ ಜೊತೆಗೆ 2027ರ ವಿಶ್ವಕಪ್‌ನ ಮುಖ್ಯ ಜಂಟಿ ಆತಿಥೇಯ ರಾಷ್ಟ್ರವಾಗಿರುವುದರಿಂದ ಆತಿಥ್ಯದ ಹಕ್ಕಿನ ಅಡಿಯಲ್ಲೂ ಸೌತ್ ಆಫ್ರಿಕಾ ನೇರ ಅರ್ಹತೆ ಪಡೆದಿದೆ. (PC: Getty Images)

6 / 12
ಪಾಕಿಸ್ತಾನ್: ಏಕದಿನ ಕ್ರಿಕೆಟ್‌ನ ಮತ್ತೊಂದು ಬಲಿಷ್ಠ ತಂಡವಾದ ಪಾಕಿಸ್ತಾನ್, ಅಗ್ರ 5 ರ ಶ್ರೇಯಾಂಕದೊಳಗಿದ್ದು 2027ರ ವಿಶ್ವಕಪ್‌ಗೆ ನೇರವಾಗಿ ಲಗ್ಗೆ ಇಟ್ಟಿದೆ. (PC: Getty Images)

7 / 12
ಶ್ರೀಲಂಕಾ: ಮಾಜಿ ವಿಶ್ವ ಚಾಂಪಿಯನ್ಸ್ ಶ್ರೀಲಂಕಾ ತಂಡವು ಇತ್ತೀಚಿನ ಏಕದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಶ್ರೇಯಾಂಕ ಸುಧಾರಿಸಿಕೊಂಡಿದ್ದು, 6ನೇ ಸ್ಥಾನದೊಂದಿಗೆ ಅರ್ಹತೆ ಖಚಿತಪಡಿಸಿದೆ. (PC: Getty Images)

8 / 12
ಇಂಗ್ಲೆಂಡ್: ಆಧುನಿಕ ಆಕ್ರಮಣಕಾರಿ ಕ್ರಿಕೆಟ್‌ಗೆ ಹೆಸರಾಗಿರುವ ಇಂಗ್ಲೆಂಡ್, 7ನೇ ಶ್ರೇಯಾಂಕದ ಆಧಾರದ ಮೇಲೆ ವಿಶ್ವಕಪ್‌ನ ರೇಸ್‌ಗೆ ನೇರ ಎಂಟ್ರಿ ಕೊಟ್ಟಿದೆ. (PC: Getty Images)

9 / 12
ಅಫ್ಘಾನಿಸ್ತಾನ್: ಇತ್ತೀಚಿನ ವರ್ಷಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅಫ್ಘಾನ್ ಪಡೆ, ಬಲಿಷ್ಠ ತಂಡಗಳನ್ನು ಹಿಂದಿಕ್ಕಿ 8ನೇ ರ್ಯಾಂಕ್ ಪಡೆಯುವ ಮೂಲಕ ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದೆ. (PC: Getty Images)

10 / 12
ಬಾಂಗ್ಲಾದೇಶ್: ಬಾಂಗ್ಲಾದೇಶ್ ತಂಡವು ಏಕದಿನ ಕ್ರಿಕೆಟ್​ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರೂ ಏಕದಿನ  ಶ್ರೇಯಾಂಕದಲ್ಲಿ 9ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬಾಂಗ್ಲಾದೇಶ ತಂಡ ಕೂಡ ವಿಶ್ವಕಪ್​ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ. (PC: Getty Images)

11 / 12
ಝಿಂಬಾಬ್ವೆ: ಪ್ರಸ್ತುತ ಟಾಪ್-10 ಶ್ರೇಯಾಂಕದಿಂದ ಹೊರಗಿದ್ದರೂ (11ನೇ ಸ್ಥಾನ), 2027ರ ವಿಶ್ವಕಪ್‌ನ ಜಂಟಿ ಆತಿಥೇಯ ರಾಷ್ಟ್ರವಾಗಿರುವುದರಿಂದ ಆತಿಥ್ಯದ ವಿಶೇಷ ಕೋಟಾದಡಿ ಝಿಂಬಾಬ್ವೆ ನೇರ ಅರ್ಹತೆ ಪಡೆದಿದೆ. (PC: Getty Images)

12 / 12
Follow Us
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು

ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ

ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ

ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!

ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು

ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ

ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ

ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ

ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ

ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ