ರಾಮ್ ಚರಣ್ ಜಿಮ್ ಫೋಟೋ ವೈರಲ್; ‘ಪೆದ್ದಿ’ ಸಿನಿಮಾಗಾಗಿ ಇಷ್ಟೆಲ್ಲ ವರ್ಕೌಟ್
‘ಗೇಮ್ ಚೇಂಜರ್’ ಬಳಿಕ ನಟ ರಾಮ್ ಚರಣ್ ಅವರು ‘ಪೆದ್ದಿ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡರು. ಈ ಸಿನಿಮಾ ಗೆಲ್ಲಲೇಬೇಕಿದೆ. ಅದಕ್ಕಾಗಿ ಅವರು ತುಂಬ ಕಷ್ಟಪಡುತ್ತಿದ್ದಾರೆ. ‘ಪೆದ್ದಿ’ ಸಿನಿಮಾದ ಪಾತ್ರಕ್ಕಾಗಿ ರಾಮ್ ಚರಣ್ ಅವರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿದೆ.

ಟಾಲಿವುಡ್ ನಟ ರಾಮ್ ಚರಣ್ ಅವರು ‘ಪೆದ್ದಿ’ (Peddi Movie) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ತುಂಬಾ ನಿರೀಕ್ಷೆ ಇದೆ. ಈ ಮೊದಲು ಬಿಡುಗಡೆ ಆಗಿದ್ದ ಟೀಸರ್ನಲ್ಲಿ ರಾಮ್ ಚರಣ್ (Ram Charan) ಅವರು ಅಬ್ಬರಿಸಿದ್ದೇ ಆ ನಿರೀಕ್ಷೆಗೆ ಕಾರಣ. ಈಗ ಜನರ ನಿರೀಕ್ಷೆಯನ್ನು ಡಬಲ್ ಮಾಡುವ ರೀತಿಯಲ್ಲಿ ರಾಮ್ ಚರಣ್ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋ ಇದಾಗಿದೆ. ‘ಪೆದ್ದಿ’ ಸಿನಿಮಾಗಾಗಿ ರಾಮ್ ಚರಣ್ ಅವರು ಬಾಡಿ (Ram Charan Body) ಹುರಿಗೊಳಿಸಿಕೊಳ್ಳುತ್ತಿದ್ದಾರೆ. ಈ ಫೋಟೋ ಕಂಡು ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ.
ಬುಚ್ಚಿ ಬಾಬು ಸನಾ ಅವರು ‘ಪೆದ್ದಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಹೈಪ್ ಹೆಚ್ಚಾಗಿದೆ. ಅದರ ಜೊತೆಗೆ ರಾಮ್ ಚರಣ್ ಅವರ ಬಾಡಿ ಟ್ರಾನ್ಸ್ಫಾರ್ಮೇಷನ್ ನೋಡಿ ಅಭಿಮಾನಿಗಳಿಗೆ ಥ್ರಿಲ್ ಆಗಿದೆ. ಕಮೆಂಟ್ ಮೂಲಕ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಇದು ಇನ್ನೂ ಆರಂಭ ಮಾತ್ರ. ಪಾತ್ರಕ್ಕಾಗಿ ರಾಮ್ ಚರಣ್ ಅವರು ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಅಂತಿಮವಾಗಿ ಅವರು ತೆರೆ ಮೇಲೆ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ಸೆಲೆಬ್ರಿಟಿ ಟ್ರೇನರ್ ಶಿವೋಹಂ ಅವರು ರಾಮ್ ಚರಣ್ ಅವರಿಗೆ ತರಬೇತಿ ನೀಡುತ್ತಿದ್ದಾರೆ. ರಾಮ್ ಚರಣ್ ಅವರ ಹೇರ್ ಸ್ಟೈಲ್ ಕೂಡ ಗಮನ ಸೆಳೆಯುತ್ತಿದೆ.
View this post on Instagram
2026ರ ಮಾರ್ಚ್ 27ಕ್ಕೆ ‘ಪೆದ್ದಿ’ ಸಿನಿಮಾ ಬಿಡುಗಡೆ ಆಗಲಿದೆ. ಅಂದು ರಾಮ್ ಚರಣ್ ಹುಟ್ಟುಹಬ್ಬ. ಆ ಕಾರಣದಿಂದ ಅಭಿಮಾನಿಗಳ ಪಾಲಿಗೆ ‘ಪೆದ್ದಿ’ ಸಿನಿಮಾದ ಬಿಡುಗಡೆ ಸಖತ್ ಸ್ಪೆಷಲ್ ಆಗಿರಲಿದೆ. ಇದೇ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ಕುಮಾರ್ ಕೂಡ ಅಭಿನಯಿಸುತ್ತಿದ್ದಾರೆ. ಹಾಗಾಗಿ ಕರ್ನಾಟಕದಲ್ಲೂ ಈ ಸಿನಿಮಾ ಮೇಲೆ ನಿರೀಕ್ಷೆ ಜೋರಾಗಿದೆ.
ಇದನ್ನೂ ಓದಿ: ಬಹಿರಂಗ ಪತ್ರದ ಮೂಲಕ ನಿರ್ಮಾಪಕರಿಗೆ ಎಚ್ಚರಿಕೆ ಕೊಟ್ಟ ರಾಮ್ ಚರಣ್ ಅಭಿಮಾನಿಗಳು
‘ಪೆದ್ದಿ’ ಸಿನಿಮಾಗೆ ಎ.ಆರ್. ರೆಹಮಾನ್ ಅವರು ಸಂಗೀತ ನೀಡುತ್ತಿದ್ದಾರೆ. ವೆಂಕಟ ಸತೀಶ್ ಕಿಲಾರು ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ‘ಪೆದ್ದಿ’ ಸಿನಿಮಾ ತಯಾರಾಗುತ್ತಿದೆ. ಈ ಚಿತ್ರದಲ್ಲಿ ನಟಿಸಲು ಜಾನ್ವಿ ಕಪೂರ್ ಅವರು ಬರೋಬ್ಬರಿ 6 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಮಾಹಿತಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








