Ram Charan: ರಾಮ್ ಚರಣ್ಗೆ ಪತ್ನಿ ಉಪಾಸನಾ ಕೊಡುವ ದುಬಾರಿ ಗಿಫ್ಟ್ಗಳೇನು?
ರಾಮ್‌ಚರಣ್ ಮತ್ತು ಉಪಾಸನಾ ಅವರ ಪ್ರೀತಿಯ ಕಥೆ ಮತ್ತು ಅವರ ಸರಳ ಜೀವನಶೈಲಿಯ ಬಗ್ಗೆ ಈ ಲೇಖನ ತಿಳಿಸುತ್ತದೆ. ರಾಮ್‌ಚರಣ್ ಅವರ ಹುಟ್ಟುಹಬ್ಬದಂದು ಉಪಾಸನಾ ಅವರು ನೀಡಿದ ಉಡುಗೊರೆಗಳ ಬಗ್ಗೆಯೂ ಮಾಹಿತಿ ಇದೆ. ದುಬಾರಿ ಉಡುಗೊರೆಗಳಿಗಿಂತ ಸಣ್ಣ ಸಣ್ಣ ವಿಷಯಗಳಲ್ಲಿ ಅವರು ಹೆಚ್ಚು ಸಂತೋಷ ಪಡುತ್ತಾರೆ ಎಂದು ತಿಳಿದುಬಂದಿದೆ.

ರಾಮ್ ಚರಣ್ (Ram Charan) ಹಾಗೂ ಉಪಾಸನಾ ಟಾಲಿವುಡ್ನ ಪವರ್ ಕಪಲ್ ಎನಿಸಿಕೊಂಡಿದ್ದಾರೆ. ಈ ದಂಪತಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ರಾಮ್ ಚರಣ್ ಅವರಿಗೆ ಇಂದು (ಮಾರ್ 27) ಜನ್ಮದಿನ. ಅವರಿಗೆ ಪತ್ನಿ ಕಡೆಯಿಂದ ಶುಭಾಶಯ ಬಂದಿದೆ. ಪತಿಯ ಬರ್ತ್ಡೇನ ಉಪಾಸನಾ ವಿಶೇಷವಾಗಿ ಆಚರಿಸಿದ್ದಾರೆ. ಹಾಗಾದರೆ ದಂಪತಿ ಎಕ್ಸ್ಚೇಂಜ್ ಮಾಡಿಕೊಳ್ಳುವ ದುಬಾರಿ ಉಡುಗೊರೆಗಳು ಏನು? ಆ ಬಗ್ಗೆ ರಾಮ್ ಚರಣ್ ಅವರು ಈ ಮೊದಲು ಮಾತನಾಡಿದ್ದರು.
ರಾಮ್ ಚರಣ್ ಅವರಿಗೆ ದುಬಾರಿ ಉಡುಗೊರೆಗಳ ಬಗ್ಗೆ ಯಾವುದೇ ನಂಬಿಕೆ ಇಲ್ಲ. ಹೀಗಾಗಿ, ಹೆಚ್ಚು ಹಣ ಇದೆ, ಆಸ್ತಿ ಇದೆ ಎಂದ ಮಾತ್ರಕ್ಕೆ ದುಬಾರಿ ಉಡುಗೊರೆಗಳನ್ನೇ ಕೊಡಬೇಕು ಎಂದು ಅವರು ಎಂದಿಗೂ ಭಾವಿಸಿಲ್ಲ. ಈ ಬಗ್ಗೆ ಅವರು ಈ ಮೊದಲು ಮಾತನಾಡಿದ್ದರು. ಸಣ್ಣ ಪುಟ್ಟ ವಿಚಾರಗಳಲ್ಲೇ ಹೆಚ್ಚು ಖುಷಿ ಕಾಣೋದಾಗಿ ಅವರು ಹೇಳಿಕೊಂಡಿದ್ದರು.
‘ಉಪಾಸನಾ ಏನನ್ನಾದರೂ ಉಡುಗೊರೆಯಾಗಿ ನೀಡುತ್ತಾಳೆ. ಕಾಫಿ ಮಗ್, ಚಪ್ಪಲಿ ಗಿಫ್ಟ್ ಆಗಿ ಕೊಡುತ್ತಾಳೆ. ಕೆಲವೊಮ್ಮೆ ಕೇಕ್ ಮಾಡುತ್ತಾಳೆ. ಅದು ಕೂಡ ಉಡುಗೊರೆಯೇ. ನಾವು ದುಬಾರಿ ಉಡುಗೊರೆಗಳನ್ನು ಕೊಟ್ಟುಕೊಳ್ಳುವುದಿಲ್ಲ. ನಮಗೆ ಅದರ ಮೇಲೆ ನಂಬಿಕೆ ಇಲ್ಲ. ಸಣ್ಣ ವಸ್ತು ಆದರೂ ಸರಿ ಅದು ಮುಖ್ಯ ಆಗಬೇಕು. ಅದರ ಮೇಲೆ ನಮಗೆ ನಂಬಿಕೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಗೆದ್ದಿದ್ದು ಕಡಿಮೆ ಸಿನಿಮಾ ಆದರೂ ರಾಮ್ ಚರಣ್ ಆಸ್ತಿ 1,300 ಕೋಟಿ ರೂ.; ಸಾಧ್ಯವಾಗಿದ್ದು ಹೇಗೆ?
ಲವ್ ಸ್ಟೋರಿ
ರಾಮ್ ಚರಣ್ ಹಾಗೂ ಉಪಾಸನಾ ಕಾಲೇಜ್ನಲ್ಲಿ ಭೇಟಿ ಆದರು. ಆರಂಭದಲ್ಲಿ ಇಬ್ಬರೂ ಒಳ್ಳೆಯ ಗೆಳೆಯರಾಗಿದ್ದರು. ಆ ಬಳಿಕ ಇವರ ಮಧ್ಯೆ ಪ್ರೀತಿ ಮೂಡಿತು. ‘ಮಗಧೀರ’ ಸಿನಿಮಾ ಶೂಟ್ ಕಾರಣಕ್ಕೆ ರಾಮ್ ಚರಣ್ ಹೊರಗಿದ್ದರು. ಆಗ ಅವರು ಉಪಾಸನಾ ಅವರನ್ನು ಮಿಸ್ ಮಾಡಿಕೊಂಡರು. ಇದರಿಂದ ಅವರಿಗೆ ಉಪಾಸನಾ ಅವರ ಬೆಲೆ ಗೊತ್ತಾಯಿತು. 2012ರಲ್ಲಿ ಇವರು ಮದುವೆ ಆದರು. ವಿವಾಹ ಆದ 11 ವರ್ಷಗಳ ಬಳಿಕ ಇಬ್ಬರೂ ಮಗುವನ್ನು ಪಡೆದರು. 2023ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಅದಕ್ಕೆ ಕ್ಲಿನ್ಕಾರ ಎಂದು ಹೆಸರು ಇಟ್ಟಿದ್ದಾರೆ. ರಾಮ್ ಚರಣ್ ನಟನೆಯ 19ನೇ ಚಿತ್ರದ ಟೈಟಲ್ ಇಂದು ರಿವೀಲ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.