ಸಲ್ಮಾನ್ ನಟಿಸಬೇಕಿದ್ದ 3 ಬಿಗ್ ಬಜೆಟ್ ಚಿತ್ರಗಳಿಗೆ ಬ್ರೇಕ್; ಕುಸಿದು ಹೋಯ್ತಾ ಭಾಯಿಜಾನ್ ಮಾರ್ಕೆಟ್?
ಸಲ್ಮಾನ್ ಖಾನ್ ನಟನೆಯ ಹಲವು ಬೃಹತ್ ಬಜೆಟ್ ಚಿತ್ರಗಳು ನಿರ್ಮಾಣ ಹಂತದಲ್ಲೇ ನಿಂತುಹೋಗಿವೆ. ಅತಿ ಹೆಚ್ಚು ಬಜೆಟ್ ಮತ್ತು ನಿರೀಕ್ಷಿತ ಯಶಸ್ಸು ಸಾಧಿಸಲು ವಿಫಲವಾಗುತ್ತಿರುವುದು ನಿರ್ಮಾಪಕರನ್ನು ಆತಂಕಕ್ಕೀಡು ಮಾಡಿದೆ. 'ಸಿಕಂದರ್' ಚಿತ್ರದ ಯಶಸ್ಸು ಸಲ್ಮಾನ್ ಖಾನ್‌ರ ಭವಿಷ್ಯದ ಚಿತ್ರಗಳ ಮೇಲೆ ಪ್ರಮುಖ ಪರಿಣಾಮ ಬೀರಲಿದೆ.

ಸಲ್ಮಾನ್ ಖಾನ್ (Salman Khan) ಸಿನಿಮಾ ಎಂದರೆ ನಿರ್ಮಾಪಕರು ಕಣ್ಣು ಮುಚ್ಚಿಕೊಂಡು ಹಣ ಹಾಕುತ್ತಿದ್ದ ಕಾಲ ಒಂದಿತ್ತು. ಏಕೆಂದರೆ ಅವರ ಸಿನಿಮಾಗಳು ಒಂದಷ್ಟು ಬಿಸ್ನೆಸ್ ಮಾಡಿಯೇ ಮಾಡುತ್ತವೆ ಎನ್ನುವ ನಂಬಿಕೆ ನಿರ್ಮಾಪಕರಿಗೆ ಇತ್ತು. ಆದರೆ, ಇತ್ತೀಚೆಗೆ ಸಲ್ಮಾನ್ ಖಾನ್ ಸಿನಿಮಾಗಳಿಂದ ನಿರ್ಮಾಪಕ ನಷ್ಟ ಅನುಭವಿಸುತ್ತಾ ಇದ್ದಾನೆ. ಇದು ನಿರ್ಮಾಪಕರನ್ನು ಚಿಂತೆಗೆ ಒಡ್ಡಿದೆ. ಈ ಕಾರಣಕ್ಕೆ ಒಂದಲ್ಲ ಬರೋಬ್ಬರಿ ಮೂರು ಬಿಗ್ ಬಜೆಟ್ ಚಿತ್ರಗಳು ಅರ್ಧಕ್ಕೆ ನಿಂತು ಹೋಗಿವೆ. ಇದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.
ಅಟ್ಲಿ ಅವರ ಜೊತೆ ಸಲ್ಮಾನ್ ಖಾನ್ ಸಿನಿಮಾ ಮಾಡಬೇಕಿತ್ತು. ಆದರೆ, ಇದು ಸಾಧ್ಯವಾಗಿಲ್ಲ. ‘ಈ ಸಿನಿಮಾ ಸದ್ಯಕ್ಕೆ ಸೆಟ್ಟೇರುತ್ತಿಲ್ಲ. ಈ ಸಿನಿಮಾ ಮಾಡಲು ತುಂಬಾನೇ ಪ್ರಯತ್ನಿಸಿದೆವು. ಸಿನಿಮಾ ನಿಲ್ಲಲು ಕಾರಣ ಸರಿಯಾಗಿ ತಿಳಿದಿಲ್ಲ. ಚಿತ್ರದ ಬಜೆಟ್ ಹೆಚ್ಚಿದ್ದು ಇದಕ್ಕೆ ಕಾರಣ ಎಂದು ನಾನು ಅಂದುಕೊಂಡಿದ್ದೇನೆ. ಚಿತ್ರದ ಬಜೆಟ್ ತುಂಬಾನೇ ಹೆಚ್ಚಿತ್ತು’ ಎಂದಿದ್ದಾರೆ ಸಲ್ಮಾನ್. ಈ ಚಿತ್ರಕ್ಕೆ 600 ಕೋಟಿ ರೂಪಾಯಿ ಅವಶ್ಯಕತೆ ಇತ್ತು ಎನ್ನಲಾಗಿದೆ.
‘ಭಜರಂಗಿ ಭಾಯಿಜಾನ್’ ಚಿತ್ರಕ್ಕೆ ಸೀಕ್ವೆಲ್ ಬರುತ್ತದೆ ಎನ್ನಲಾಗಿತ್ತು. ಆದರೆ, ಈ ಬಗ್ಗೆಯೂ ಅಪ್ಡೇಟ್ ಇಲ್ಲ. ‘ಸ್ಕ್ರಿಪ್ಟ್ ರೆಡಿ ಆದ ಬಳಿಕ ಮುನ್ನಿ ಈ ಬಗ್ಗೆ ಮಾತನಾಡುತ್ತಾರೆ’ ಎಂದಿದ್ದಾರೆ ಸಲ್ಲು. ಮತ್ತೊಂದು ನಿರೀಕ್ಷಿತ ಚಿತ್ರಗಳಲ್ಲಿ ‘ಟೈಗರ್ vs ಪಠಾಣ್’ ಇದೆ. ಆದರೆ, ಅದು ಕೂಡ ಆಗುತ್ತಿಲ್ಲ. ಇದಕ್ಕೂ ಹೆಚ್ಚಿನ ಸಮಯದ ಅಗತ್ಯವಿದೆ ಎನ್ನಲಾಗಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಂತೆ ಕಂತೆ ನಕಲಿ ನೋಟು ಬಳಕೆ; ಇಲ್ಲಿದೆ ಸಾಕ್ಷಿ
ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರ ಮಾರ್ಚ್ 30ರಂದು (ಭಾನುವಾರ) ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಸಲ್ಲುಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ, ಕಾಜಲ್ ಅಗರ್ವಾಲ್ ನಟಿಸಿದ್ದಾರೆ. ಈ ಸಿನಿಮಾಗೆ ಎಆರ್ ಮುರುಗದಾಸ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಹಿಟ್ ಆದರೆ, ಸಲ್ಲು ಮೇಲೆ ಮತ್ತೆ ಭರವಸೆ ಹುಟ್ಟಿಕೊಳ್ಳಲಿದೆ. ಇಲ್ಲವಾದಲ್ಲಿ ಸಲ್ಮಾನ್ ಖಾನ್ ಅವರ ಮತ್ತೊಂದಷ್ಟು ಸಿನಿಮಾ ಅರ್ಧಕ್ಕೆ ನಿಲ್ಲಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.