Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂಮಿ ಮೇಲಿನ ಮೂರು ವಿಶೇಷ ಪ್ರದೇಶಗಳಲ್ಲಿ ಮನೆ ಹೊಂದಿದ್ದಾರೆ ಪ್ರಕಾಶ್ ರಾಜ್

ಪ್ರಕಾಶ್ ರಾಜ್ ಅವರು ನಗರದ ಬದಲು ಮೂರು ವಿಶೇಷ ಸ್ಥಳಗಳಲ್ಲಿ ಮನೆಗಳನ್ನು ಹೊಂದಿದ್ದಾರೆ. ನಗರದಲ್ಲಿ ಹೂಡಿಕೆ ಮಾಡುವ ಬದಲು, ಅವರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಮೂರು ವಿಶೇಷ ಸ್ಥಳಗಳನ್ನು ಆಯ್ಕೆ ಮಾಡಿದ್ದಾರೆ. ಶ್ರೀರಂಗಪಟ್ಟಣದ ಫಾರ್ಮ್ ಹೌಸ್, ಕೊಡೈಕೆನಲ್ ಮತ್ತು ಚೆನ್ನೈನ ಮನೆಗಳು ಅವರ ವಿಶಿಷ್ಟ ಜೀವನಶೈಲಿಯನ್ನು ತೋರಿಸುತ್ತವೆ.

ಭೂಮಿ ಮೇಲಿನ ಮೂರು ವಿಶೇಷ ಪ್ರದೇಶಗಳಲ್ಲಿ ಮನೆ ಹೊಂದಿದ್ದಾರೆ ಪ್ರಕಾಶ್ ರಾಜ್
ಪ್ರಕಾಶ್ ರಾಜ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 26, 2025 | 7:45 AM

ಪ್ರಕಾಶ್ ರಾಜ್ ಅವರು ಬಹುಭಾಷಾ ನಟ. ಅವರಿಗೆ ಕನ್ನಡ, ತೆಲುಗು, ತಮಿಳು, ಹಿಂದಿ ಮೊದಲಾದ ಭಾಷೆಗಳಲ್ಲಿ ಬೇಡಿಕೆ ಇದೆ. ಅವರು ಹಲವು ಭಾಷೆಗಳನ್ನು ಸುಲಲಿತವಾಗಿ  ಮಾತನಾಡ ಬಲ್ಲರು. ಪ್ರಕಾಶ್ ರಾಜ್ (Prakash Raj) ಅವರನ್ನು ತಮ್ಮ ರಾಜಕೀಯ ಚಿಂತನೆಗಳ ಕಾರಣದಿಂದ ಆಗಾಗ ಟೀಕೆ ಆಗುತ್ತಲೇ ಇರುತ್ತಾರೆ. ಅವರು ಈ ಮೊದಲು ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತು ಸೋತಿದ್ದರು. ಇಂದು (ಮಾರ್ಚ್ 26) ಅವರಿಗೆ ಜನ್ಮದಿನ. ಭೂಮಿ ಮೇಲಿನ ಮೂರು ವಿಶೇಷ ಪ್ರದೇಶಗಳಲ್ಲಿ ಪ್ರಕಾಶ್ ರಾಜ್  ಮನೆ ಹೊಂದಿದ್ದಾರೆ. ಆ ಬಗ್ಗೆ ನಾವು ಹೇಳುತ್ತಿದ್ದೇವೆ.

ಎಲ್ಲರಿಗೂ ನಗರ ಭಾಗದಲ್ಲಿ ಮನೆ ಹೊಂದಬೇಕು ಎಂಬ ಆಸೆ ಇರುತ್ತದೆ. ಇದಕ್ಕೆ ಕಾರಣ ಮಾಡಿರುವ ಹೂಡಿಕೆ ದ್ವಿಗುಣ ಆಗುತ್ತದೆ. ಇವತ್ತು ಇರುವ ಬೆಲೆ ನಾಳೆ ಹೆಚ್ಚುತ್ತದೆ. ಈ ಕಾರಣದಿಂದಲೇ ಅನೇಕರು ನಗರ ಭಾಗದಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಪ್ರಕಾಶ್ ರಾಜ್ ಅವರು ಇದಕ್ಕೆ ಭಿನ್ನ. ಅವರು ನಗರದಲ್ಲಿ ಹೂಡಿಕೆ ಮಾಡಿಲ್ಲ. ಬದಲಿಗೆ ಅವರು ವಿಶೇಷವಾದ ಮೂರು ಪ್ರದೇಶಗಳಲ್ಲಿ ಜಾಗ ಖರೀದಿ ಮಾಡಿದ್ದಾರೆ.

ಪ್ರಕಾಶ್ ರಾಜ್ ಅವರಿಗೆ ನಗರ ಎಂದರೆ ಯಾವಾಗಲೂ ಇಷ್ಟವಿಲ್ಲ. ಈ ಕಾರಣದಿಂದಲೇ ಮೈಸೂರು ಸಮೀಪದ ಶ್ರೀರಂಗಪಟ್ಟಣದಲ್ಲಿ  ಫಾರ್ಮ್​ಹೌಸ್ ಖರೀದಿ ಮಾಡಿದ್ದು, ಅಲ್ಲಿ ವಾಸವಿರುತ್ತಾರೆ. ಸಿನಿಮಾ ಕೆಲಸ ಮುಗಿಸಿ ಅವರು ನೇರವಾಗಿ ಇಲ್ಲಿಯೇ ತೆರಳುತ್ತಾರೆ. ಈ ರೀತಿ ಮನೆ ಹೊಂದುವುದು ಅವರ ಕನಸಾಗಿತ್ತಂತೆ.

ಇದನ್ನೂ ಓದಿ
Image
ಪೊಲೀಸರ ದಾರಿ ತಪ್ಪಿಸಿಲ್ಲ; ರಬ್ಬರ್ ಮಚ್ಚು ಕೊಟ್ಟಿದ್ದಕ್ಕೆ ರಜತ್ ಸ್ಪಷ್ಟನೆ
Image
ವಿನಯ್, ರಜತ್​ಗೆ ಹೆಚ್ಚಿದ ಸಂಕಷ್ಟ; ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್
Image
ಮಚ್ಚು ಎಲ್ಲಿದೆ ಎಂದು ಪೊಲೀಸರ ಎದುರು ಬಾಯಿಬಿಡದ ರಜತ್‌ ಕಿಶನ್, ವಿನಯ್‌ ಗೌಡ
Image
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ

ಪ್ರಕಾಶ್ ರಾಜ್​ಗೆ ಸಮುದ್ರ, ಗುಡ್ಡ ಪ್ರದೇಶ ಹಾಗೂ ಕಾಡು ಇಷ್ಟ. ಈ ಕಾರಣಕ್ಕೆ ಈ ಮೂರು ಭಾಗದಲ್ಲಿ ಜಾಗ ಖರೀದಿ ಮಾಡಿದ್ದಾರೆ. ‘ಸಮುದ್ರ, ಕಾಡು ಹಾಗೂ ಕಣಿವೆಯಲ್ಲಿ ಒಂದು ಮನೆ ಹಾಗೂ ನದಿ ಸಮೀಪ ಒಂದು ತೋಟ ಹೊಂದಬೇಕು ಎಂಬುದು ನನ್ನ ಆಸೆ ಆಗಿತ್ತು. ಆ ಆಸೆ ಈಡೇರಿದೆ. ಕಣಿವೆ ಬೇಕು ಎಂದರೆ ಕೊಡೈಕೆನಲ್​ನಲ್ಲಿರುವ ಮನೆಗೆ ಹೋಗುತ್ತೇನೆ. ಸಮುದ್ರ ಬೇಕು ಎಂದರೆ ಚೆನ್ನೈ ತೆರಳುತ್ತೇನೆ. ಕಾಡು, ನದಿ ಬೇಕು ಎಂದರೆ ಮೈಸೂರಿನ ಫಾರ್ಮ್​ಹೌಸ್​ಗೆ ಬರುತ್ತೇನೆ’ ಎಂದು ಪ್ರಕಾಶ್ ರಾಜ್ ಅವರು ಈ ಮೊದಲು ಹೇಳಿದ್ದರು.

ಇದನ್ನೂ ಓದಿ: ಕಳ್ಳ ನನ್ನ ಮಕ್ಕಳ ಬಗ್ಗೆ ಮಾತಾಡಲು ಬಂದಿಲ್ಲ: ದರ್ಶನ್ ಬಗ್ಗೆ ಕೇಳಿದ್ದಕ್ಕೆ ಪ್ರಕಾಶ್ ರಾಜ್ ಉತ್ತರ

ಕೆಲವರು ಜುಬ್ಲಿ ಹಿಲ್ಸ್​​ನಲ್ಲಿ ಮನೆ ಖರೀದಿ ಮಾಡಿ ಎಂದು ಪ್ರಕಾಶ್ ರಾಜ್​ಗೆ ಕಿವಿ ಮಾತು ಹೇಳಿದ್ದರು. ಆದರೆ ಪ್ರಕಾಶ್ ರಾಜ್ ಅವರು ಇದಕ್ಕೆ ವಿರೋಧ ಹೊರಹಾಕಿದ್ದರು. ಜುಬ್ಲಿ ಹಿಲ್ಸ್​ನಲ್ಲಿ ಮನೆ ಖರೀದಿ ಮಾಡಿದರೆ ಮನೆ ಬಾಗಿಲು ತೆರೆದಾಗ ಎದುರಿಗೆ ಮತ್ತೊಂದು ಮನೆಯ ಬಾಗಿಲೇ ಕಾಣುತ್ತದೆ ಎಂಬುದು ಪ್ರಕಾಶ್ ರಾಜ್ ಅಭಿಪ್ರಾಯ. ಪ್ರಕಾಶ್ ರಾಜ್ ಅವರು ಸಾಕಷ್ಟು ಸಮಯವನ್ನು ಮರಗಳ ಜೊತೆ, ಗಿಡಗಳ ಜೊತೆ ಕಳೆಯಲು ಇಷ್ಟಪಡುತ್ತಾರೆ. ಈ ಕಾರಣಕ್ಕೆ ಸಮಯ ಸಿಕ್ಕಾಗ ಅವರು ಫಾರ್ಮ್​ಹೌಸ್​ನಲ್ಲಿ ಇರಲು ಬಯಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.