AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಂತೆ ಕಂತೆ ನಕಲಿ ನೋಟು ಬಳಕೆ; ಇಲ್ಲಿದೆ ಸಾಕ್ಷಿ

ಬಿಡುಗಡೆಗೂ ಮುನ್ನವೇ ‘ಸಿಕಂದರ್’ ಸಿನಿಮಾ ಟ್ರೋಲ್ ಆಗುತ್ತಿದೆ. ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ಈ ಚಿತ್ರ ಈದ್ ಪ್ರಯುಕ್ತ ತೆರೆಕಾಣಲಿದೆ. ಅನುಭವಿ ನಿರ್ದೇಶಕ ಎ.ಆರ್. ಮುರುಗದಾಸ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರದ ದೃಶ್ಯದಲ್ಲಿ ನಕಲಿ ನೋಟುಗಳು ಬಳಕೆ ಆಗಿರುವುದನ್ನು ನೆಟ್ಟಿಗರು ಪತ್ತೆ ಹಚ್ಚಿದ್ದಾರೆ.

ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಂತೆ ಕಂತೆ ನಕಲಿ ನೋಟು ಬಳಕೆ; ಇಲ್ಲಿದೆ ಸಾಕ್ಷಿ
Fake Currency Note
ಮದನ್​ ಕುಮಾರ್​
|

Updated on: Mar 26, 2025 | 6:32 PM

Share

ನಟ ಸಲ್ಮಾನ್ ಖಾನ್ (Salman Khan) ಅವರು ‘ಸಿಕಂದರ್’ (Sikandar) ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಮಾರ್ಚ್​ 30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಬಿಡುಗಡೆಗೂ ಮುನ್ನ ಕೆಲವು ನೆಗೆಟಿವ್ ಕಾರಣಗಳಿಂದ ಈ ಸಿನಿಮಾ ಸುದ್ದಿ ಆಗುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ನಟಿಸಿದ್ದಾರೆ. ಟ್ರೇಲರ್​ನಲ್ಲಿ ಅವರ ನಟನೆ ಕಳಪೆ ಆಗಿದೆ ಎಂದು ಜನರು ಟ್ರೋಲ್ ಮಾಡಿದ್ದರು. ಈಗ ಇನ್ನೊಂದು ವಿಷಯದ ಬಗ್ಗೆ ಚರ್ಚೆ ಆಗುತ್ತಿದೆ. ಈ ಸಿನಿಮಾದ ದೃಶ್ಯವೊಂದರಲ್ಲಿ ಕಂತೆ-ಕಂತೆ ನಕಲಿ ನೋಟುಗಳು (Fake Currency Note) ಬಳಕೆ ಆಗಿರುವುದು ಕಾಣಿಸಿದೆ!

‘ಸಿಕಂದರ್’ ಸಿನಿಮಾಗೆ ಎ.ಆರ್. ಮುರುಗದಾಸ್ ಅವರು ನಿರ್ದೇಶನ ಮಾಡಿದ್ದಾರೆ. ‘ಘಜಿನಿ’ ರೀತಿಯ ಸೂಪರ್ ಹಿಟ್ ಸಿನಿಮಾ ನೀಡಿದ ಖ್ಯಾತಿ ಅವರಿಗೆ ಇದೆ. ಆದರೆ ‘ಸಿಕಂದರ್’ ಸಿನಿಮಾದಲ್ಲಿ ಅವರು ಕೆಲವು ಎಡವಟ್ಟುಗಳನ್ನು ಮಾಡಿದಂತಿದೆ. ಟ್ರೇಲರ್​ನಲ್ಲಿ ಪ್ರೇಕ್ಷಕರಿಗೆ ಒಂದಷ್ಟು ತಪ್ಪುಗಳು ಕಾಣಿಸುತ್ತಿವೆ. ಅದನ್ನು ಸಾಕ್ಷಿ ಸಮೇತ ತೋರಿಸಲಾಗುತ್ತಿದೆ.

‘ಸಿಕಂದರ್’ ಸಿನಿಮಾ ಟ್ರೇಲರ್:

ಇದನ್ನೂ ಓದಿ
Image
ಸಲ್ಲು ಜೊತೆ ಪ್ರೇಮ, ಇಬ್ಬರು ಮಕ್ಕಳ ತಂದೆಯ ಜೊತೆ ವಿವಾಹ, ಆ ಬಳಿಕ ವಿಚ್ಛೇದನ
Image
ಸಿನಿಮಾ ಕೈಬಿಟ್ಟು ಸಲ್ಮಾನ್ ಖಾನ್​ಗೆ ಕ್ಷಮೆ ಕೇಳಿದ ಅಟ್ಲಿ; ರಾಂಗ್ ಆದ ನಟ?
Image
ದಕ್ಷಿಣದ ನಿರ್ದೇಶಕನ ಮೇಲೆ ಉರಿದು ಬಿದ್ದ ಸಲ್ಮಾನ್ ಖಾನ್ ಅಭಿಮಾನಿಗಳು, ಕಾರಣ?
Image
ಸಲ್ಮಾನ್ ಖಾನ್​ಗೆ ಬಂದಿರಲಿಲ್ಲ ಆಫರ್; ಜೀವನ ಬದಲಾಯಿಸಿದ ವ್ಯಕ್ತಿ ಇವರು

ಈ ಸಿನಿಮಾದ ಟ್ರೇಲರ್​ನಲ್ಲಿ ಹೀಗೊಂದು ದೃಶ್ಯ ಇದೆ. ಟ್ಯಾಕ್ಸಿ ಚಾಲಕನಿಗೆ ಸಲ್ಮಾನ್ ಖಾನ್ ಅವರು 500 ರೂಪಾಯಿ ನೋಟುಗಳ ಎರಡು ಕಂತೆಗಳನ್ನು ನೀಡುತ್ತಾರೆ. ಇದನ್ನು ಝೂಮ್ ಮಾಡಿ ನೋಡಿದಾಗ ಅವು ನಕಲಿ ನೋಟುಗಳು ಎಂಬುದು ಗೊತ್ತಾಗಿದೆ. ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಬರೆದಿರಬೇಕಾದ ಜಾಗದಲ್ಲಿ ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಬರೆದಿದೆ.

ಸೋಶಿಯಲ್ ಮೀಡಿಯಾದಲ್ಲಿ ಜನರು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇಂಥ ವಿವರಗಳ ಬಗ್ಗೆ ನಿರ್ದೇಶಕರು ಯಾಕೆ ಗಮನ ಹರಿಸಿಲ್ಲ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇಂಥ ಕಳಪೆ ಕೆಲಸದ ಕಾರಣದಿಂದಲೇ ಬಾಲಿವುಡ್ ಸಿನಿಮಾಗಳು ಸೋಲುತ್ತಿವೆ ಎಂದು ಕೂಡ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಮಾತ್ರ ನಕಲಿ ನೋಟುಗಳ ಬಳಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಾಲಿವುಡ್ ಸಿನಿಮಾದಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್; ಸಿಕ್ತು ಬಿಗ್ ನ್ಯೂಸ್

‘ಸಿನಿಮಾದ ಶೂಟಿಂಗ್​ನಲ್ಲಿ ಕಂತೆ ಕಂತೆ ರಿಯಲ್ ನೋಟುಗಳನ್ನು ಬಳಸಲು ಸಾಧ್ಯವಿಲ್ಲ. ಹಾಗಾಗಿ ನಕಲಿ ನೋಟುಗಳನ್ನು ಬಳಸಲಾಗಿದೆ. ಅಷ್ಟಕ್ಕೂ ಸಿನಿಮಾದ ಕಥೆಯಲ್ಲಿ ಈ ದೃಶ್ಯ ಯಾವ ರೀತಿ ಮೂಡಿಬಂದಿದೆ ಎಂಬುದನ್ನು ತಿಳಿಯದೇ ಕೇವಲ ಟ್ರೇಲರ್ ನೋಡಿ ನಿರ್ಧಾರಕ್ಕೆ ಬರುವುದು ಸರಿಯಲ್ಲ’ ಎಂದು ಸಲ್ಮಾನ್ ಖಾನ್ ಅವರ ಅಪ್ಪಟ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.