Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣದ ನಿರ್ದೇಶಕನ ಮೇಲೆ ಉರಿದು ಬಿದ್ದ ಸಲ್ಮಾನ್ ಖಾನ್ ಅಭಿಮಾನಿಗಳು, ಕಾರಣ?

Salman Khan Fans: ಬಾಲಿವುಡ್​ನ ಸ್ಟಾರ್ ನಟರು ಸಿನಿಮಾ ಗೆಲುವಿಗಾಗಿ ದಕ್ಷಿಣ ಭಾರತದ ನಿರ್ದೇಶಕರ ಜೊತೆಗೆ ಕೈ ಜೋಡಿಸುತ್ತಿದ್ದಾರೆ. ದಕ್ಷಿಣ ಭಾರತದ ನಿರ್ದೇಶಕರನ್ನು ಎಳೆದು ತಂದು ಹಿಂದಿಯಲ್ಲಿ ಸಿನಿಮಾ ಮಾಡಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ಖಾನ್ ಈಗಾಗಲೇ ತಮಿಳಿನ ಮುರುಗದಾಸ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಇದೀಗ ಸಲ್ಲು ಅಭಿಮಾನಿಗಳು, ದಕ್ಷಿಣದ ಒಬ್ಬ ನಿರ್ದೇಶಕನ ಮೇಲೆ ಮುಗಿಬಿದ್ದಿದ್ದಾರೆ.

ದಕ್ಷಿಣದ ನಿರ್ದೇಶಕನ ಮೇಲೆ ಉರಿದು ಬಿದ್ದ ಸಲ್ಮಾನ್ ಖಾನ್ ಅಭಿಮಾನಿಗಳು, ಕಾರಣ?
Salman Khan
Follow us
ಮಂಜುನಾಥ ಸಿ.
|

Updated on:Mar 05, 2025 | 3:56 PM

ಸತತವಾಗು ಸೋಲು ಕಾಣುತ್ತಿದ್ದ ಬಾಲಿವುಡ್ (Bollywood) ಸ್ಟಾರ್ ನಟರು, ಗೆಲುವಿಗಾಗಿ ದಕ್ಷಿಣ ಭಾರತ ಸಿನಿಮಾ ನಿರ್ದೇಶಕರ ಮೊರೆ ಹೋಗಿದ್ದಾರೆ. ಮೊದಲಿಗೆ ಶಾರುಖ್ ಖಾನ್, ತಮಿಳಿನ ಅಟ್ಲಿ ನಿರ್ದೇಶನದ ‘ಜವಾನ್’ ಸಿನಿಮಾದಲ್ಲಿ ನಟಿಸಿದರು. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಅದಾದ ಬಳಿಕ ಸಲ್ಮಾನ್ ಖಾನ್ ಇದೀಗ ಮುರುಗದಾಸ್ ನಿರ್ದೇಶನದ ‘ಸಿಖಂಧರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಆಮಿರ್ ಖಾನ್ ಲೋಕೇಶ್ ಕನಗರಾಜು ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಇದೀಗ ಸಲ್ಮಾನ್ ಖಾನ್ ಅಭಿಮಾನಿಗಳು ದಕ್ಷಿಣ ಭಾರತ ನಿರ್ದೇಶಕನ ಮೇಲೆ ಉರಿದು ಬಿದ್ದಿದ್ದಾರೆ, ಎರಡು ತಲೆ ಹಾವು ಎಂದು ನಿಂದಿಸುತ್ತಿದ್ದಾರೆ.

ಶಾರುಖ್ ಖಾನ್​ಗೆ ‘ಜವಾನ್’ ಸಿನಿಮಾ ಮೂಲಕ ಭಾರಿ ದೊಡ್ಡ ಹಿಟ್ ಕೊಟ್ಟ ಅಟ್ಲಿ ಇದೀಗ ಸಲ್ಮಾನ್ ಖಾನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದಾರೆ. ಅದಕ್ಕೆ ಕಾರಣವೂ ಇದೆ. ‘ಜವಾನ್’ ಸಿನಿಮಾದ ಬಳಿಕ ತಾವು ಸಲ್ಮಾನ್ ಖಾನ್ ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡುವುದಾಗಿ ಅಟ್ಲಿ ಹೇಳಿಕೊಂಡಿದ್ದರು. ಸಲ್ಮಾನ್ ಖಾನ್ ಅಭಿಮಾನಿಗಳು ಇದರಿಂದ ಖುಷಿಯಾಗಿದ್ದರು. ಆದರೆ ಈಗ ನೋಡಿದರೆ ಹಠಾತ್ತನೆ ರೂಟ್ ಬದಲಿಸಿರುವ ಅಟ್ಲಿ, ತಾವು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಇದು ಸಲ್ಮಾನ್ ಅಭಿಮಾನಿಗಳಿಗೆ ಸಿಟ್ಟು ತರಿಸಿದೆ.

ತಮಗಾಗಿ ಸಿನಿಮಾ ಮಾಡುತ್ತಾರೆ ಎಂಬ ಖುಷಿಯಲ್ಲಿ, ಅಟ್ಲಿ ನಿರ್ಮಾಣದ ‘ಬೇಬಿ ಜಾನ್’ ಹಿಂದಿ ಸಿನಿಮಾದ ಅತಿಥಿ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದರು. ಆದರೆ ಈಗ ನೋಡಿದರೆ ಅಟ್ಲಿ ಕೈ ಎತ್ತಿದ್ದಾರೆ. ಸಲ್ಮಾನ್ ಖಾನ್​ಗಾಗಿ ಮಾಡಿಕೊಂಡಿದ್ದ ಕತೆಯನ್ನು ಅಲ್ಲು ಅರ್ಜುನ್​ಗಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಭಾರಿ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್​ನವರೇ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ
Image
ಅನುಮತಿ ಇಲ್ಲದೆ ಚಿತ್ರೀಕರಣ, ರಾಣಾ ಸಿನಿಮಾ ಮೇಲೆ ಅರಣ್ಯ ಇಲಾಖೆಯಿಂದ ದಾಳಿ
Image
ಪ್ರಭಾಸ್ ಕಾರಣದಿಂದ ರಿಷಬ್ ಶೆಟ್ಟಿ ಸಿನಿಮಾ ಮೇಲೆ ಕರಿನೆರಳು
Image
ರನ್ಯಾ ರಾವ್ ಪ್ರಕರಣ, ಚಿನ್ನ, ನಗದು ಸೇರಿ 17.29 ಕೋಟಿ ಪತ್ತೆ
Image
ಮೊಮ್ಮಗ ಮಾಡಿದ ಸಾಲದಿಂದ ಹರಾಜಿಗೆ ಬಂತು ಶಿವಾಜಿ ಗಣೇಶನ್ ಮನೆ

ಇದನ್ನೂ ಓದಿ:ಅಬ್ಬರಿಸುತ್ತ ಬಂದ ಸಿಕಂದರ್ ಟೀಸರ್; ಖುಷಿಯಾದ ಸಲ್ಮಾನ್ ಖಾನ್ ಫ್ಯಾನ್ಸ್

ಸಲ್ಮಾನ್ ಖಾನ್ ಪ್ರಸ್ತುತ ‘ಸಿಖಂಧರ್’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ. ‘ಕತ್ತಿ’, ‘ಗಜಿನಿ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಮುರುಗದಾಸ್ ಈ ಸಿನಿಮಾದ ನಿರ್ದೇಶಕ. ಇದರ ಬಳಿಕ ಯಶ್ ರಾಜ್ ಫಿಲಮ್ಸ್​ನ ಹೊಸ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Wed, 5 March 25

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!