ತಮನ್ನಾ ಭಾಟಿಯಾ, ವಿಜಯ್ ವರ್ಮಾ ಬ್ರೇಕಪ್; ಇನ್ಮುಂದೆ ಕೇವಲ ಫ್ರೆಂಡ್ಸ್
ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ಅವರು ಬ್ರೇಕಪ್ ಮಾಡಿಕೊಂಡು ಈಗಾಗಲೇ ಹಲವು ವಾರಗಳು ಕಳೆದಿವೆ ಎನ್ನಲಾಗಿದೆ. ಈ ರೀತಿ ಆಗುತ್ತದೆ ಎಂದು ಅವರ ಅಭಿಮಾನಿಗಳು ಊಹಿಸಿರಲಿಲ್ಲ. ಮುಂದಿನ ದಿನಗಳಲ್ಲಿ ತಮನ್ನಾ ಮತ್ತು ವಿಜಯ್ ವರ್ಮಾ ಅವರು ಬ್ರೇಕಪ್ ಬಗ್ಗೆ ಮೌನ ಮುರಿಯಬಹುದು ಎಂಬ ನಿರೀಕ್ಷೆ ಇದೆ.

ನಟಿ ತಮನ್ನಾ ಭಾಟಿಯಾ ಹಾಗೂ ನಟ ವಿಜಯ್ ವರ್ಮಾ ಅವರು ಇನ್ನೇನು ಮದುವೆ ಆಗಲಿದ್ದಾರೆ ಎಂದು ಫ್ಯಾನ್ಸ್ ಕಾಯುತ್ತಿದ್ದರು. ಆದರೆ ಈಗ ಒಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ. ಇಷ್ಟು ದಿನ ಡೇಟಿಂಗ್ ಮಾಡುತ್ತಿದ್ದ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ (Tamannaah Bhatia) ಅವರು ಈಗ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ. ಇಷ್ಟು ದಿನಗಳ ತಮ್ಮ ಪ್ರೀತಿಗೆ ಅವರೀಗ ಅಂತ್ಯ ಹಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅವರ ಕಡೆಯಿಂದಲೇ ಅಧಿಕೃತ ಹೇಳಿಕೆ ಹೊರಬೀಳುವುದು ಬಾಕಿ ಇದೆ.
ಬಣ್ಣದ ಲೋಕದಲ್ಲಿ ಲವ್ ಮತ್ತು ಬ್ರೇಕಪ್ ಸಹಜ. ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿದಂತಿದೆ. ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬಂತೆ ಈಗಾಗಲೇ ಅವರ ಬ್ರೇಕಪ್ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಬ್ರೇಕಪ್ಗೆ ಕಾರಣ ಏನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಚಿತ್ರರಂಗದಲ್ಲಿ ತಮನ್ನಾ ಮತ್ತು ವಿಜಯ್ ವರ್ಮಾ ಅವರು ಬೇಡಿಕೆ ಹೊಂದಿದ್ದಾರೆ. ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರು ಬ್ರೇಕಪ್ ಮಾಡಿಕೊಂಡಿದ್ದರೂ ಕೂಡ ಪರಸ್ಪರ ಸ್ನೇಹಿತರಾಗಿ ಮುಂದುವರಿಯಲಿದ್ದಾರೆ. ವೃತ್ತಿ ಜೀವನದಲ್ಲಿ ಒಬ್ಬರಿಗೊಬ್ಬರು ಗೌರವ ನೀಡಲಿದ್ದಾರೆ ಎಂದು ಆಪ್ತ ಮೂಲಗಳು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಅವರು ಈಗಾಗಲೇ ಬ್ರೇಕಪ್ ಮಾಡಿಕೊಂಡು ಹಲವು ವಾರಗಳು ಕಳೆದಿವೆ ಎಂದು ಹೇಳಲಾಗುತ್ತಿದೆ. ಈ ರೀತಿ ಆಗುತ್ತದೆ ಎಂದು ಅವರ ಫ್ಯಾನ್ಸ್ ಊಹಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಅವರು ಬ್ರೇಕಪ್ ಬಗ್ಗೆ ಬಾಯಿ ಬಿಡಬಹುದು ಎಂಬ ನಿರೀಕ್ಷೆ ಇದೆ.
2.40 ಕೋಟಿ ವಂಚನೆ ಪ್ರಕರಣ: ತಮನ್ನಾ ಭಾಟಿಯಾ, ಕಾಜಲ್ಗೆ ಪೊಲೀಸರ ನೊಟೀಸ್
‘ಲಸ್ಟ್ ಸ್ಟೋರೀಸ್ 2’ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಅವರು ಜೊತೆಯಾಗಿ ನಟಿಸಿದ್ದರು. ಆಗಲೇ ಅವರಿಬ್ಬರ ಪ್ರೇಮ್ ಕಹಾನಿ ಬಹಿರಂಗ ಆಗಿತ್ತು. ಅವರಿಬ್ಬರು ಮದುವೆ ಆಗುತ್ತಾರೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಈಗ ಶಾಕ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.