Fact Check: ಮಹಾಕುಂಭ ಮೇಳಕ್ಕೆ ಜೊತೆಯಾಗಿ ತೆರಳಿದ ವಿರಾಟ್ ಕೊಹ್ಲಿ-ತಮನ್ನಾ ಭಾಟಿಯಾ?: ವೈರಲ್ ಫೋಟೋದ ಸತ್ಯ ಏನು?
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಇಂದು ಶಿವರಾತ್ರಿಯಂದು ಅಂತಿಮ ಪುಣ್ಯಸ್ನಾನ ನಡೆಯುತ್ತಿದೆ. ಇದರ ಮಧ್ಯೆ ವಿರಾಟ್ ಕೊಹ್ಲಿ ಹಾಗೂ ತಮನ್ನಾ ಭಾಟಿಯಾ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರಿಬ್ಬರು ಮಹಾಕುಂಭ ಮೇಳದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ.

ಇಂದು ಮಹಾಶಿವರಾತ್ರಿಯ ಮಹಾ ಹಬ್ಬವಾದ ಮಹಾ ಕುಂಭದ ಕೊನೆಯ ಸ್ನಾನ. ಬ್ರಹ್ಮ ಮುಹೂರ್ತದ ನಂತರ, ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ಸಂಗಮದ ದಡದಲ್ಲಿ ಸ್ನಾನ ಮಾಡುತ್ತಿದ್ದಾರೆ. ಮಂಗಳವಾರದಿಂದಲೇ ಭಕ್ತರು ಮಹಾ ಕುಂಭಮೇಳ ಪ್ರದೇಶದ ಕಡೆಗೆ ತೆರಳಲು ಪ್ರಾರಂಭಿಸಿದ್ದರು. ಇಂದು ಮಹಾಕುಂಭದಲ್ಲಿ ಸುಮಾರು 2 ಕೋಟಿ ಜನರು ಸ್ನಾನ ಮಾಡುವ ಅಂದಾಜಿದೆ. ಇಂದು, ಇಡೀ ಪ್ರಯಾಗ್‌ರಾಜ್‌ನಲ್ಲಿ ವಾಹನಗಳ ಪ್ರವೇಶವನ್ನು ಕೂಡ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳಿಗೆ ಸಂಬಂಧಿಸಿದ ವಾಹನಗಳು ಮಾತ್ರ ಓಡುತ್ತವೆ. ನೀಡಲಾದ ಪಾಸ್‌ಗಳನ್ನು ಸಹ ಅಮಾನತುಗೊಳಿಸಲಾಗಿದೆ. ಈ ಸಮಯದಲ್ಲಿ ವಿಐಪಿ ಸ್ನಾನ ಕೂಡ ಇರುವುದಿಲ್ಲ.
ಇದರ ಮಧ್ಯೆ ವಿರಾಟ್ ಕೊಹ್ಲಿ ಹಾಗೂ ತಮನ್ನಾ ಭಾಟಿಯಾ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರಿಬ್ಬರು ಜೊತೆಯಾಗಿ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಫೋಟೋಗಳು ಕೃತಕ ಬಿದ್ದಿಮತ್ತೆ AI- ರಚಿತವಾಗಿದೆ ಎಂದು ಕಂಡುಬಂದಿದೆ. ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನೀವು ರಿಯಾಲಿಟಿಗೆ ದೂರ ಇರುವಂತೆ ಗೋಚರಿಸುತ್ತದೆ. ಫೋಟೋದಲ್ಲಿರುವ ಮಣಿಗಳು ಅರ್ಧವೇ ಇದ್ದು ಅಪೂರ್ಣವಾಗಿವೆ.
ವಿರಾಟ್ ಕೊಹ್ಲಿ ಗಡ್ಡ ಕೂಡ ವಿರೂಪಗೊಂಡಂತೆ ಕಾಣುತ್ತದೆ. ನೈಜ್ಯ ಫೋಟೋಕ್ಕೆ ಇದು ದೂರವಾಗಿದೆ. ಅಲ್ಲದೆ ನಾವು ಗೂಗಲ್ನಲ್ಲಿ ವಿರಾಟ್ ಕೊಹ್ಲಿ ಮಹಾಕುಂಭಕ್ಕೆ ತೆರಳಿದ್ದಾರೆಯೆ ಎಂಬ ಕುರಿತು ಸರ್ಚ್ ಮಾಡಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ವರದಿ ನಮಗೆ ಕಂಡುಬಂದಿಲ್ಲ. ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರನೊಬ್ಬ ಮಹಾಕುಂಭಕ್ಕೆ ಬರುತ್ತಿದ್ದರೆ ಅದು ದೊಡ್ಡ ಸುದ್ದಿ ಆಗಿರುತ್ತಿತ್ತು. ಆದರೆ, ಅಂತಹ ಯಾವುದೇ ವರದಿ ಈವರೆಗೆ ಬಂದಿಲ್ಲ. ಅಲ್ಲದೆ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಚಾಂಪಿಯನ್ ಟ್ರೋಫಿಗಾಗಿ ಟೀಮ್ ಇಂಡಿಯಾ ಪರ ದುಬೈನಲ್ಲಿದ್ದಾರೆ.
Fact Check: ಮಹಾಕುಂಭದಲ್ಲಿ ಪುಣ್ಯ ಸ್ನಾನ ಮಾಡಿ ಎಲ್ಲ ಪಾಪ ಕಳೆದುಕೊಂಡ ಸನ್ನಿ ಲಿಯೋನ್?: ವೈರಲ್ ವಿಡಿಯೋದ ಸತ್ಯ ಏನು?
ಏತನ್ಮಧ್ಯೆ, ತಮನ್ನಾ ಭಾಟಿಯಾ ಇತ್ತೀಚೆಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಆದರೆ ಒಬ್ಬಂಟಿಯಾಗಿ ಬಂದಿದ್ದರು. ಅಂತಿಮವಾಗಿ, ನಾವು ವೈರಲ್ ಚಿತ್ರವನ್ನು ಎಐ ಫೋಟೋವನ್ನು ಗುರುತಿಸುವ ಹೈವ್ ಮಾಡರೇಶನ್ ಸಾಫ್ಟ್ವೇರ್ನಲ್ಲಿ ಅಪ್ಲೋಡ್ ಮಾಡಿದ್ದೇವೆ. ಆಗ ಇದು ಶೇ. 99.5 ರಷ್ಟು AI ಯಿಂದ ರಚಿತವಾಗಿದೆ ಎಂದು ದೃಢಪಡಿಸಿದೆ. ಈ ಮೂಲಕ ವೈರಲ್ ಚಿತ್ರಗಳು ನಕಲಿ ಮತ್ತು AI- ರಚಿತ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಇಂದು ಶಿವರಾತ್ರಿಯಂದು ಅಂತಿಮ ಪುಣ್ಯಸ್ನಾನ ನಡೆಯುತ್ತಿದ್ದು, ಕುಂಭಮೇಳಕ್ಕೆ ತೆರೆ ಬೀಳಲಿದೆ. ಇಂದು ಬೆಳಗ್ಗೆಯಿಂದಲೇ ತ್ರಿವೇಣಿ ಸಂಗಮದಲ್ಲಿ 41 ಲಕ್ಷ ಜನ ಪವಿತ್ರ ಸ್ನಾನ ಮಾಡಿದ್ದಾರೆ. ಕೊನೆಯ ವಿಶೇಷ ಸ್ನಾನಕ್ಕಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕಾರಣ, ಸಂಜೆ 6 ಗಂಟೆಯಿಂದ ಪ್ರಯಾಗ್‌ರಾಜ್‌ನಾದ್ಯಂತ ವಾಹನ ರಹಿತ ವಲಯವನ್ನು ಜಾರಿಗೆ ತರಲಾಗಿತ್ತು. ನಸಂದಣಿಯ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಆಡಳಿತವು ಈ ನಿರ್ಬಂಧಗಳನ್ನು ವಿಧಿಸಿದೆ. ಆದಾಗ್ಯೂ, ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ವಿನಾಯಿತಿ ನೀಡಲಾಗುತ್ತಿದೆ.
ಭಾರದ್ವಾಜ್ ಘಾಟ್, ನಾಗವಾಸುಕಿ ಘಾಟ್, ಮೋರಿ ಘಾಟ್, ಕಾಳಿ ಘಾಟ್, ರಾಮ್ ಘಾಟ್ ಮತ್ತು ಹನುಮಾನ್ ಘಾಟ್ ಕಡೆಗೆ ಸಾಗಲು ನಿರ್ದೇಶಿಸಲಾಗಿದೆ. ಅರೈಲ್ ಪ್ರದೇಶದಿಂದ ಬರುವ ಭಕ್ತರು ಸ್ನಾನಕ್ಕೆ ಅರೈಲ್ ಘಾಟ್ ಬಳಸಬೇಕು. ಹಾಲು, ತರಕಾರಿ, ಔಷಧಿಗಳು, ಇಂಧನ ಮತ್ತು ತುರ್ತು ವಾಹನಗಳ ಸಾಗಣೆ ಸೇರಿದಂತೆ ಅಗತ್ಯ ಸೇವೆಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ