AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ ಸ್ಪಿನ್ನರ್ ಅಬ್ರಾರ್ ಖರೀದಿಸಿದ ಕಾವ್ಯಾ ಮಾರನ್​​ಗೆ ಬ್ಯಾನ್ ಬಿಸಿ

ಕಾವ್ಯಾ ಮಾರನ್ ಅವರ ಸನ್ ರೈಸರ್ಸ್ ಲೀಡ್ಸ್ ತಂಡ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿ ವಿವಾದಕ್ಕೀಡಾಗಿದೆ. 2.35 ಕೋಟಿ ರೂ.ಗೆ ನಡೆದ ಈ ಒಪ್ಪಂದಕ್ಕೆ ಭಾರೀ ಟೀಕೆ ವ್ಯಕ್ತವಾಗಿದ್ದು, ಪರಿಣಾಮವಾಗಿ ಸನ್ ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಸ್ಥಗಿತಗೊಂಡಿದೆ. ಈ ಕ್ರಮವು ಐಪಿಎಲ್ ತಂಡದ ವರ್ಚಸ್ಸಿಗೆ ಹಾನಿಯಾಗಬಹುದೆಂಬ ಆತಂಕವೂ ಎದುರಾಗಿದೆ.

ಪಾಕಿಸ್ತಾನ ಸ್ಪಿನ್ನರ್ ಅಬ್ರಾರ್ ಖರೀದಿಸಿದ ಕಾವ್ಯಾ ಮಾರನ್​​ಗೆ ಬ್ಯಾನ್ ಬಿಸಿ
ಕಾವ್ಯಾ
ರಾಜೇಶ್ ದುಗ್ಗುಮನೆ
|

Updated on: Mar 13, 2026 | 11:22 AM

Share

ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್​​​ಗೆ ಬ್ಯಾನ್ ಬಿಸಿ ತಟ್ಟಿದೆ. ದಿ ಹಂಡ್ರೆಡ್ ಲೀಗ್​​​ನಲ್ಲಿ ಕಾವ್ಯಾ ಅವರ ಸನ್​​ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್​ ಅವರನ್ನು ಖರೀದಿ ಮಾಡಿತು. ಆಕ್ಷನ್​ ಅಲ್ಲಿ 2.35 ಕೋಟಿ ರೂಪಾಯಿಯನ್ನು ಕೊಡಲು ಸನ್​​ರೈಸರ್​ಸ್ ಒಪ್ಪಿಕೊಂಡಿತು. ಈ ಬೆನ್ನಲ್ಲೇ ಕಾವ್ಯಾ ಮಾರನ್ ಅವರು ಸಾಕಷ್ಟು ಟೀಕೆ ಎದುರಿಸಿದರು. ಅಷ್ಟೇ ಅಲ್ಲ, ಸನ್​​ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಬ್ಯಾನ್ ಆಗಿದೆ.

ಮಾರ್ಚ್ 12ರ ರಾತ್ರಿ 8.30ಕ್ಕೆ ವೇಳೆಗೆ ಈ ಖರೀದಿ ನಡೆದಿದೆ. ಇಂದು (ಮಾರ್ಚ್ 13) ಮುಂಜಾನೆ ಸನ್​​ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ. ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಸನ್​​ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆಯನ್ನು ರಿಪೋರ್ಟ್ ಮಾಡಿರಬಹುದು ಎಂದು ಊಹಿಸಲಾಗಿದೆ. ಈ ಕಾರಣದಿಂದಲೇ ಸಸ್ಪೆಂಡ್ ಆಗಿರಬಹುದು ಎಂಬುದು ಕೆಲವರ ಊಹೆ.

ಹಂಡ್ರೆಡ್ ಲೀಗ್ಸ್ ಆಕ್ಷನ್ ಅಲ್ಲಿ ಕಾವ್ಯಾ ಮಾರನ್, ತಂಡದ ಕೋಚ್ ಡ್ಯಾನಿಯಲ್ ವಿಟ್ಟೋರಿ ಇದ್ದರು. ಭಾರತ ಒಡೆತನದ ನಾಲ್ಕು ತಂಡಗಳು ಹಂಡ್ರೆಡ್ ಲೀಗ್​​​ನಲ್ಲಿ ಇದ್ದು, ಇವರು ಪಾಕಿಸ್ತಾನ ಆಟಗಾರರನ್ನು ಖರೀದಿಸುತ್ತಾರೆಯೇ ಎಂಬ ಪ್ರಶ್ನೆ ಇತ್ತು. ಕಾವ್ಯಾ ಅವರು ತೆಗೆದುಕೊಂಡ ಒಂದು ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದು ಐಪಿಎಲ್ ತಂಡದ ವರ್ಚಸ್ಸಿನ ಮೇಲೂ ಪರಿಣಾಮ ಬಿರಬಹುದು.

ಸನ್ನರೈಸರ್ಸ್ ಲೀಡ್ಸ್ ಅಬ್ರಾರ್​​ಗೆ ವೆಲ್​​​ಕಮ್ ಎಂದು ಪೋಸ್ಟ್ ಹಾಕಿತ್ತು. ಈ ಪೋಸ್ಟ್ ಸಾಕಷ್ಟು ವೈರಲ್ ಆಯಿತು. ಕಾವ್ಯಾ ಅವರನ್ನು ಬ್ಯಾನ್ ಮಾಡುವಂತೆ ಟ್ವಿಟರ್​​​ನಲ್ಲಿ ಟ್ರೆಂಡ್ ಆಗಿದೆ. ಸನ್ನರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಓಪನ್ ಮಾಡಿದರೆ ‘ಈ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ’ ಎಂಬ ಬರಹ ಕಾಣುತ್ತದೆ.

ಭಾರತದಲ್ಲಿ ಪಾಕಿಸ್ತಾನ ಆಟಗಾರರ ಮೇಲೆ ಸಂಪೂರ್ಣ ಬ್ಯಾನ್ ಹೇರಲಾಗಿದೆ. ಅವರ ಜೊತೆ ಐಸಿಸಿ ಟೂರ್ನಮೆಂಟ್ ಹೊರತುಪಡಿಸಿ ಮತ್ಯಾವುದೇ ಪಂದ್ಯವನ್ನು ಆಡುತ್ತಿಲ್ಲ. ಹೀಗಿರುವಾಗ ಸನ್​ರೈಸರ್ಸ್ ಹೈದರಾಬಾದ್​​ನ ಸೋದರ ಸಂಸ್ಥೆಯಾಗಿರುವ ಸನ್​ರೈಸರ್ಸ್ ಲೀಡ್ಸ್ ಪಾಕ್ ಆಟಗಾರನನ್ನು ಖರೀರಿದಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ಈ ವಿರೋಧದ ಬಳಿಕ ಆಟಗಾರನನ್ನು ಕೈ ಬಿಡಲಾಗುವುದೇ ಎಂಬ ಪ್ರಶ್ನೆ ಮೂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ..

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More