Mahakumbh 2025
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 144 ವರ್ಷಗಳ ನಂತರ ಮಹಾಕುಂಭ ಮೇಳೆ ನಡೆಯುತ್ತಿದೆ. ಈ ಬಾರಿ ನಡೆಯುತ್ತಿರುವ ಕುಂಭಮೇಳದಲ್ಲಿ ಸುಮಾರು 45 ಕೋಟಿಗೂ ಅಧಿಕ ಮಂದಿ ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ. 44 ದಿನಗಳ ಕಾಲ ನಡೆಯುವ ಮಹಾ ಕುಂಭಮೇಳ 2025 ಜನವರಿ 13 ರಂದು ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಿ ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳುತ್ತದೆ.
ಕುಂಭ ಮೇಳದಲ್ಲಿ ನಾಲ್ಕು ವಿಧ
ಮೊದಲನೆಯದು ಕುಂಭಮೇಳ ಇದು ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಎರಡನೆಯದು ಅರ್ಧಕುಂಭ ಮೇಳ ಇದು 6 ವರ್ಷಗಳಿಗೊಮ್ಮೆ ನಡೆಯುತ್ತದೆ. ಪೂರ್ಣ ಕುಂಭಮೇಳ ಇದು 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಕೊನೆಯದು ಮಹಾ ಕುಂಭಮೇಳ ಇದು 144 ವರ್ಷಗಳಿಗೊಮ್ಮೆ ನಡೆಯುತ್ತದೆ. ಕುಂಭಮೇಳದ ಮೂಲವು ಹಿಂದೂ ಪುರಾಣಗಳಲ್ಲಿ, ವಿಶೇಷವಾಗಿ ಸಮುದ್ರ ಮಂಥನ ಕಥೆಯಲ್ಲಿದೆ. ದೇವತೆಗಳು ಮತ್ತು ಅಸುರರು ಅಮರತ್ವಕ್ಕಾಗಿ ಅಮೃತವನ್ನು ಪಡೆಯಲು ಹೇಗೆಲ್ಲಾ ಪ್ರಯತ್ನ ಮಾಡಿದ್ದರು. ಎಂಬುದನ್ನು ವಿವರಿಸಲಾಗಿದೆ