AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಕುಂಭದಲ್ಲಿ ದಾಖಲೆಯ 12 ಕೋಟಿ ರೂ ಖಾದಿ ಉತ್ಪನ್ನಗಳ ಮಾರಾಟ

Record Khadi sales during Mahakumbh: ಜನವರಿ 14ರಿಂದ ಫೆಬ್ರುವರಿ 27ರವರೆಗೆ ನಡೆದ ಮಹಾಕುಂಭದಲ್ಲಿ ಆಯೋಜಿಸಲಾದ ಖಾದಿ ಪ್ರದರ್ಶನ ಮೇಳದಲ್ಲಿ 12 ಕೋಟಿ ರೂ ಮೊತ್ತದ ಖಾದಿ ಉತ್ಪನ್ನಗಳ ಮಾರಾಟವಾಗಿದೆ. 98 ಖಾದಿ ಮತ್ತು 54 ಗುಡಿ ಕೈಗಾರಿಕೆ ಸ್ಟಾಲ್​​ಗಳನ್ನು ಮೇಳದಲ್ಲಿ ಸ್ಥಾಪಿಸಲಾಗಿತ್ತು. ಈ ಮೇಳದ ವೇಳೆ, ವಿವಿಧ ರಾಜ್ಯಗಳ ಜೇನು ಸಾಕಾಣಿಕೆದಾರರಿಗೆ ಜೇನು ಪೆಟ್ಟಿಗೆ ಹಾಗು ಪರಿಕರಗಳನ್ನು ಹಂಚಲಾಯಿತು.

ಮಹಾಕುಂಭದಲ್ಲಿ ದಾಖಲೆಯ 12 ಕೋಟಿ ರೂ ಖಾದಿ ಉತ್ಪನ್ನಗಳ ಮಾರಾಟ
ಖಾದಿ ಪ್ರದರ್ಶನ ಮೇಳ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 09, 2025 | 2:05 PM

Share

ನವದೆಹಲಿ, ಮಾರ್ಚ್ 9: ಉತ್ತರಪ್ರದೇಶದ ಪ್ರಯಾಗ್​​ರಾಜ್​​ನಲ್ಲಿ ಜನವರಿ 14ರಿಂದ ಫೆಬ್ರುವರಿ 27ರವರೆಗೆ ನಡೆದ ಮಹಾಕುಂಭದಲ್ಲಿ ಸಾಕಷ್ಟು ಉದ್ದಿಮೆಗಳು ಗರಿಗೆದರಿದ್ದು, ಒಟ್ಟಾರೆ ಆರ್ಥಿಕ ಚಟುವಟಿಕೆಯ ಮೊತ್ತ ನಾಲ್ಕು ಲಕ್ಷ ಕೋಟಿ ರೂನಷ್ಟಾಗಿರುವ ಅಂದಾಜು ಇದೆ. ಬಹಳಷ್ಟು ಸ್ಥಳೀಯ ಸಣ್ಣ ಉದ್ದಿಮೆಗಳು ಹುರುಪು ಪಡೆದವು. ಇದೇ ವೇಳೆ, ಮಹಾ ಕುಂಭದಲ್ಲಿ ಖಾದಿ ಉತ್ಪನ್ನಗಳ (Khadi products) ಭರಪೂರ ಮಾರಾಟವಾಗಿರುವುದು ತಿಳಿದುಬಂದಿದೆ. ಕುಂಭಮೇಳ ಸ್ಥಳದಲ್ಲಿ ರಾಷ್ಟ್ರ ಮಟ್ಟದ ಖಾದಿ ಪ್ರದರ್ಶನ ಕೇಂದ್ರ ಆಯೋಜಿಸಲಾಗಿದ್ದು, ಅದರಲ್ಲಿ 12.02 ಕೋಟಿ ರೂ ಮೌಲ್ಯದ ಖಾದಿ ಉತ್ಪನ್ನಗಳ ಮಾರಾಟವಾಗಿದೆ. ಎಂಎಸ್​ಎಂಇ ಸಚಿವಾಲಯದ ಅಡಿಯಲ್ಲಿ ಬರುವ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ- Khadi and Village Industries commission) ಛೇರ್ಮನ್ ಮನೋಜ್ ಕುಮಾರ್ ಈ ಮಾಹಿತಿ ನೀಡಿದ್ದಾರೆ.

ಖಾದಿ ಪ್ರದರ್ಶನದಲ್ಲಿ 98 ಖಾದಿ ಅಂಗಡಿಗಳು, 54 ಗುಡಿ ಕೈಗಾರಿಕೆ ಅಂಗಡಿಗಳನ್ನು ಸ್ಥಾಪಿಸಲಾಗಿತ್ತು. ಖಾದಿ ಉತ್ಪನ್ನಗಳ ಮಾರಾಟ 9.76 ಕೋಟಿ ರೂನಷ್ಟಾಗಿತ್ತು. ಗುಡಿ ಕೈಗಾರಿಕಾ ಉತ್ಪನ್ನಗಳ ಮಾರಾಟ 2.26 ಕೋಟಿ ರೂನಷ್ಟಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಐಫೋನ್ ತಯಾರಿಸುವ ಫಾಕ್ಸ್​​ಕಾನ್​ಗೆ 6,970 ಕೋಟಿ ರೂ ಪ್ರೋತ್ಸಾಹಕ; ಬಜೆಟ್​​ನಲ್ಲಿ ಉದ್ಯಮ ವಲಯಕ್ಕೆ ಸಿಕ್ಕ ಪ್ರೋತ್ಸಾಹವೇನು?

ಜೇನು ಸಾಕಾಣಿಕೆಗೆ ಉತ್ತೇಜನ

ಖಾದಿ ಪ್ರದರ್ಶನ ಮೇಳದಲ್ಲಿ ಆರು ರಾಜ್ಯಗಳ 205 ಜೇನು ಸಾಕಾಣಿಕೆದಾರರಿಗೆ 2,050 ಜೇನುಹುಳು ಪೆಟ್ಟಿಗೆ, ಜೇನು ಕಾಲೊನಿ ಮತ್ತು ಟೂಲ್​​ಕಿಟ್​​ಗಳನ್ನು ನೀಡಲಾಯಿತು. ಕೆವಿಐಸಿ ಮುಖ್ಯಸ್ಥ ಮನೋಜ್ ಕುಮಾರ್ ಅವರು ದೆಹಲಿಯಿಂದಲೇ ಜೇನು ವಿತರಣೆ ಕಾರ್ಯಕ್ರಮ ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮಗ್ರಾಮಗಳಲ್ಲಿ ಸಿಹಿ ಕ್ರಾಂತಿ (Sweet Revolution) ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಜೇನು ಯೋಜನೆ (Honey Mission) ಆರಂಭಿಸಲಾಗಿದೆ ಎಂದರು.

2016ರಲ್ಲಿ ಪ್ರಧಾನಿಗಳು ಶ್ವೇತ ಕ್ರಾಂತಿಯಂತೆ ಸಿಹಿಕ್ರಾಂತಿ ಆಗಬೇಕೆಂದು ಕರೆ ನೀಡಿದ್ದರು. ಶ್ವೇತ ಕ್ರಾಂತಿ ಎಂದರೆ ಹಾಲಿನ ಕ್ರಾಂತಿ. ಸಿಹಿಕ್ರಾಂತಿ ಎಂದರೆ ಜೇನಿನ ಕ್ರಾಂತಿ. ಪ್ರಧಾನಿಯವರು ತಮ್ಮ 75ನೇ ಸಂಚಿಕೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಜೇನು ಕೃಷಿಯಿಂದಾಗುವ ಲಾಭಗಳ ಬಗ್ಗೆ ಮಾತನಾಡುತ್ತಾ, ಕೃಷಿಕರಿಗೆ ಅದು ಪ್ರಮುಖ ಆದಾಯ ಆಗಬಲ್ಲುದು ಎಂದಿದ್ದರು.

ಇದನ್ನೂ ಓದಿ: ಮಾರುಕಟ್ಟೆ ಅಸ್ಥಿರತೆ ತಾತ್ಕಾಲಿಕ, ಮುಂದುವರಿಸಿ ನಿಮ್ಮ ಎಸ್​ಐಪಿ ಕಾಯಕ: ತಜ್ಞರ ಅನಿಸಿಕೆ

2017ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ‘ಹನಿ ಮಿಷನ್’ ಆರಂಭಿಸಿತು. ಇಲ್ಲಿಯವರೆಗೆ 20,000 ಫಲಾನುಭವಿಗಳಿಗೆ ಎರಡು ಲಕ್ಷ ಜೇನುಪೆಟ್ಟಿಗೆ, ಜೇನು ಕಾಲೊನಿಗಳನ್ನು ನೀಡಲಾಗಿದೆ.

ಜೇನು ಉತ್ಪನ್ನಗಳಿಗೆ ಬಹಳ ಬೇಡಿಕೆ ಇದೆ. ಔಷಧ, ಆಹಾರ, ಜವಳಿ, ಕಾಸ್ಮೆಟಿಕ್ ಉದ್ಯಮಗಳಿಗೆ ಜೇನು ಅವಶ್ಯಕತೆ ಇದೆ. ಇದರಿಂದ ಕೃಷಿಕರಿಗೆ ಜೇನು ಸಾಕಾಣಿಕೆ ಪ್ರಮುಖ ಉಪಕಸುಬಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್