ಐಫೋನ್ ತಯಾರಿಸುವ ಫಾಕ್ಸ್ಕಾನ್ಗೆ 6,970 ಕೋಟಿ ರೂ ಪ್ರೋತ್ಸಾಹಕ; ಬಜೆಟ್ನಲ್ಲಿ ಉದ್ಯಮ ವಲಯಕ್ಕೆ ಸಿಕ್ಕ ಪ್ರೋತ್ಸಾಹವೇನು?
Karnataka budget 2025: ಸಿಎಂ ಸಿದ್ದರಾಮಯ್ಯ 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಬಹಳಷ್ಟು ಕೊಡುಗೆ ನೀಡುವ ಉದ್ಯಮ ವಲಯವನ್ನು ಬಲಪಡಿಸಲು ಬಜೆಟ್ನಲ್ಲಿ ವಿವಿಧ ಕ್ರಮ ತೆಗೆದುಕೊಳ್ಳಲಾಗಿದೆ. ಸಣ್ಣ ಉದ್ದಿಮೆಗಳಿಂದ ಹಿಡಿದು ದೊಡ್ಡ ಉದ್ದಿಮೆಗಳವರೆಗೆ ಈ ವಲಯಕ್ಕೆ ಉತ್ತೇಜನ ಸಿಕ್ಕಿದೆ ಬಜೆಟ್ನಲ್ಲಿ.

ಬೆಂಗಳೂರು, ಮಾರ್ಚ್ 7: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 16ನೇ ಬಜೆಟ್ನಲ್ಲಿ (Karnataka Budget 2025-26) ವಾಣಿಜ್ಯ, ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಸುಲಭ ವ್ಯವಹಾರದ ವಾತಾವರಣದಲ್ಲಿ ದೇಶದಲ್ಲೇ ನಂಬರ್ ಒನ್ ಎನಿಸಿರುವ ಕರ್ನಾಟಕದಲ್ಲಿ ಉದ್ಯಮ ಕಟ್ಟುಪಾಡುಗಳನ್ನು ಇನ್ನಷ್ಟು ಸರಳಗೊಳಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಸಣ್ಣ ಉದ್ದಿಮೆಗಳಿಂದ ದೊಡ್ಡ ಉದ್ದಿಮೆಗಳವರೆಗೂ ಈ ಕ್ಷೇತ್ರಕ್ಕೆ ಪುಷ್ಟಿ ಕೊಡಲು ಪ್ರಯತ್ನಿಸಲಾಗಿದೆ. ಎಂಎಸ್ಎಂಇ ವಲಯಕ್ಕೆ ಗಮನಹರಿಸಲು ಪ್ರತ್ಯೇಕವಾದ ಎಂಎಸ್ಎಂಇ ನೀತಿ ಜಾರಿಗೊಳಿಸಲಾಗಿದೆ. ಹೊಸ ಐಟಿ ನೀತಿಯನ್ನೂ ಜಾರಿಗೆ ತರಲಾಗುತ್ತಿದೆ. ರಾಜ್ಯದಲ್ಲಿ ಐಫೋನ್ಗಳನ್ನು ತಯಾರಿಸುವ ಫಾಕ್ಸ್ಕಾನ್ ಸಂಸ್ಥೆಯ ಘಟಕಕ್ಕೆ 6,970 ಕೋಟಿ ರೂ ಮೌಲ್ಯದ ಪ್ರೋತ್ಸಾಹಕ ಘೋಷಿಸಲಾಗಿದೆ. ಅತ್ಯಾಧುನಿಕ ಇವಿ ಕ್ಲಸ್ಟರ್ ನಿರ್ಮಿಸಲು ಯೋಜಿಸಲಾಗಿದೆ. ಕ್ವಾಂಟಂ ರಿಸರ್ಚ್ ಪಾರ್ಕ್ನ ಎರಡನೇ ಹಂತದ ಯೋಜನೆ ಜಾರಿಗೊಳಿಸಲಾಗುತ್ತಿದೆ.
ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಕರ್ನಾಟಕ ಬಜೆಟ್ 2025ನಲ್ಲಿ ಸಿಕ್ಕಿದ್ದು…
- ಕೈಗಾರಿಕೋದ್ಯಮಿಗಳ ಅನುಸರಣೆಯ ನಿಯಮಗಳು ಮತ್ತು ಷರತ್ತುಗಳ ಸರಳೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉದ್ಯೋಗದಾತ ನಂಬಿಕೆ ವಿಧೇಯಕ ಹಾಗೂ ಕರ್ನಾಟಕ ಉದ್ಯೋಗದಾತ ಅನುಸರಣೆ ಜಾಲಬಂಧ ಮಸೂದೆಗಳ ಜಾರಿಗೆ ಕ್ರಮ.
- ರಾಜ್ಯ ಸರ್ಕಾರವು Karnataka Clean Mobility Policy 2025-30 ಯಡಿ 50 ಸಾವಿರ ಕೋಟಿ ರೂ. ಹೂಡಿಕೆ ಹಾಗೂ 1 ಲಕ್ಷ ಹೊಸ ಉದ್ಯೋಗ ಸೃಜನೆಯ ಗುರಿ.
- ಬೆಂಗಳೂರು ವಲಯದಲ್ಲಿ E.V. ವಾಹನಗಳ ತಯಾರಿಕೆ ಹಾಗೂ ಬಳಕೆ ಉತ್ತೇಜನಕ್ಕಾಗಿ ೨೫ ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಇವಿ ಕ್ಲಸ್ಟರ್ ನಿರ್ಮಾಣ.
- ರು 21,911 ಕೋಟಿ ಹೂಡಿಕೆಯೊಂದಿಗೆ ಪ್ರಾರಂಭವಾದ Foxconn ಸಂಸ್ಥೆಗೆ ಮೊಬೈಲ್ ಫೋನ್ ಗಳ ಉತ್ಪಾದನಾ ಫಟಕಕ್ಕೆ 6970 ಕೋಟಿ ರೂ. ಮೌಲ್ಯದ ಪ್ರೋತ್ಸಾಹಕ ನೀಡಲು ಕ್ರಮ. ಇದರಿಂದ 50ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ.
- ಉದ್ಯೋಗಸ್ಥ ಮಹಿಳೆಯರಿಗೆ ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಹಾಗೂ ತುಮಕೂರು ಜಿಲ್ಲೆಯ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 193 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ವಸತಿ ನಿಲಯ ನಿರ್ಮಾಣ.
- ವಿಜಯಪುರದ ತಿಡಗುಂಡಿಯಲ್ಲಿ Plug & Play ಸೌಲಭ್ಯವಿರುವ Flat Factory ಗಳ ಸ್ಥಾಪನೆಗೆ ಕ್ರಮ.
- ಕೋಲಾರ ಜಿಲ್ಲೆಯ ಶಿವಾರಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ Multi Sector Net Zero Sustainability Industrial Park ಅಭಿವೃದ್ಧಿ.(ಪಿ.ಪಿ.ಪಿ)
- ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಯಡಿ ತುಮಕೂರು ಕೈಗಾರಿಕಾ ನೋಡ್‌ನಲ್ಲಿ ಜಪಾನೀಸ್ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪನೆ.
- ಕರಕುಶಲಕರ್ಮಿಗಳಿಗೆ ಬಿದರಿ ಕಲಾಕೃತಿಗಳ ಹಾಗೂ ಶ್ರೀಗಂಧ ಕಲಾಕೃತಿಗಳ ಕಚ್ಚಾ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲು ಒಂದು ಕೋಟಿ ರೂ. ಅನುದಾನ
- MSME ಘಟಕಗಳಿಗೆ ವಿವಿಧ ಪ್ರೋತ್ಸಾಹಕಗಳನ್ನು ನೀಡಲು 185 ಕೋಟಿ ರೂ. ಹಂಚಿಕೆ.
- MSME ವಲಯಕ್ಕೆ ಅಗತ್ಯವಾದ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ಪ್ರತ್ಯೇಕ MSME ನೀತಿ ಜಾರಿ.
- ಜಿ.ಎಸ್.ಟಿ / ರಾಯಧನ ವಂಚನೆಯನ್ನು ತಡೆಯಲು ಸಣ್ಣ ಖನಿಜಗಳಿಗೆ ಇ-ವೇ ಬಿಲ್.
- ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿಗಾಗಿ 2025-26ನೇ ಸಾಲಿಗೆ 20 ಕೋಟಿ ರೂ. ಅನುದಾನ
- ನೇಕಾರಿಕೆ ಉದ್ದಿಮೆಯನ್ನು ಉತ್ತೇಜಿಸಲು “ನೇಕಾರರ ಪ್ಯಾಕೇಜ್-2.0” ಜಾರಿ.
- 90,645 ನೇಕಾರರಿಗೆ ಉಚಿತ ವಿದ್ಯುತ್ ಹಾಗೂ ರಿಯಾಯಿತಿ ವಿದ್ಯುತ್ ಸವಲತ್ತನ್ನು ಒದಗಿಸಲು 100 ಕೋಟಿ ರೂ. ಅನುದಾನ
- ನೂತನ “ಜವಳಿ ನೀತಿ 2025-30” ಜಾರಿ; ಎರಡು ಲಕ್ಷ ಉದ್ಯೋಗ ಸೃಜನೆಯ ಗುರಿ
- ಪಿಪಿಪಿ ಮಾದರಿಯಲ್ಲಿ 5 ಜವಳಿ ಪಾರ್ಕ್ ಅಭಿವೃದ್ಧಿ. PM-MITRA ಯೋಜನೆಯಡಿ ಕಲಬುರಗಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ.
ಇದನ್ನೂ ಓದಿ: Karnataka Budget Size: 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್ನಲ್ಲಿ ಸರ್ಕಾರದ ಸಾಲ, ಖರ್ಚು ಮತ್ತು ವೆಚ್ಚಗಳ ವಿವರ
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಿಕ್ಕಿದ್ದು…
- ಹೊಸ ಐ.ಟಿ ನೀತಿ ಜಾರಿಗೆ ಕ್ರಮ. ಕ್ಲೌಡ್ ಕಂಪ್ಯೂಟಿಂಗ್ (Cloud Computing) ಅಭಿವೃದ್ಧಿಗೆ ಒತ್ತು. 2 ಮತ್ತು 3ನೇ ಹಂತದ ನಗರಗಳಿಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರ ವಿಸ್ತರಣೆಗೆ ಆದ್ಯತೆ.
- ಬೆಂಗಳೂರು ಹೊರತು ಪಡಿಸಿ, ಇತರ ನಗರಗಳಗಲ್ಲೂ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು, 1 ಸಾವಿರ ಕೋಟಿ ರೂ. ವೆಚ್ಚದ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ -LEAP ಪ್ರಾರಂಭ. ಈ ವರ್ಷ 200 ಕೋಟಿ ರೂ. ಅನುದಾನ. 5 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ.
- 50 ಕೋಟಿ ರೂ. ಹೂಡಿಕೆಯೊಂದಿಗೆ Centre for Applied AI for Tech Solutions (CATS) ಸ್ಥಾಪನೆ. ಈ ವರ್ಷ 7.5 ಕೋಟಿ ರೂ. ಅನುದಾನ.
- ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ 48 ಕೋಟಿ ರೂ. ವೆಚ್ಚದಲ್ಲಿ ಕ್ವಾಂಟಮ್ ರಿಸರ್ಚ್ ಪಾರ್ಕ್-ಹಂತ-2 ಸ್ಥಾಪನೆ
- ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ 2024-2029, MSME ಮತ್ತು ದೊಡ್ಡ ಉದ್ಯಮ ವಿಭಾಗದಲ್ಲಿ 1,500 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಗುರಿ. ಪ್ರೋತ್ಸಾಹಕಗಳಿಗಾಗಿ 220 ಕೋಟಿ ರೂ.
- ಕಲಬುರಗಿಯಲ್ಲಿ Plug and Play ಮಾದರಿಯಲ್ಲಿ Flat Floor Factory ಸ್ಥಾಪನೆ.
- ಬೆಂಕಿ ಅನಾಹುತದಲ್ಲಿ ತೀವ್ರ ಹಾನಿ ಸಂಭವಿಸಿದ ಬೆಂಗಳೂರು ಬಯೋ-ಇನ್ನೋವೇಷನ್ ಸೆಂಟರ್‌ನ ಪುನರ್ ನಿರ್ಮಾಣಕ್ಕೆ ಒಟ್ಟು 57 ಕೋಟಿ ರೂ. ನೆರವು, ಈ ವರ್ಷ 20 ಕೋಟಿ ರೂ. ಅನುದಾನ
- ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಧಾರವಾಡದಲ್ಲಿ ಕಿಯೊನಿಕ್ಸ್ ಮೂಲಕ ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್ಟ್ ಅಭಿವೃದ್ಧಿಗೆ ಕ್ರಮ.
- ಕೋಲಾರ, ರಾಮನಗರ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಸ್ಥಾಪನೆ; 9 ಕೋಟಿ ರೂ. ಅನುದಾನ.
- ಮೈಸೂರಿನ 150 ಎಕರೆ ಪ್ರದೇಶದಲ್ಲಿ ಪಿಸಿಬಿ ಪಾರ್ಕ್ ಅಭಿವೃದ್ಧಿ.
- ಭಾರತ ಸರ್ಕಾರ ಮತ್ತು ಕೈಗಾರಿಕೆಗಳ ಸಹಭಾಗಿತ್ವದಲ್ಲಿ 99 ಕೋಟಿ ರೂ. ವೆಚ್ಚದಲ್ಲಿ ಸೆನ್ಸರ್‌ಟೆಕ್ ಇನ್ನೋವೇಶನ್ ಹಬ್ ಸ್ಥಾಪನೆ.
- ಕಿಯೋನಿಕ್ಸ್ ವತಿಯಿಂದ ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪ್ಲಗ್-ಅಂಡ್-ಪ್ಲೇ ಸೌಲಭ್ಯಗಳಾಗಿ ಮೂರು ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ(GTC)ಗಳ ಸ್ಥಾಪನೆ.
- ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಏಕೀಕರಣಕ್ಕಾಗಿ ಕಲಬುರ್ಗಿಯಲ್ಲಿ ಅಗ್ರಿ-ಟೆಕ್ ವೇಗವರ್ಧಕ ಸ್ಥಾಪನೆ.
ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ