AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget Size: 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್​​ನಲ್ಲಿ ಸರ್ಕಾರದ ಸಾಲ, ಖರ್ಚು ಮತ್ತು ವೆಚ್ಚಗಳ ವಿವರ

Siddaramaiah's 16th budget creates record: ಸಿಎಂ ಸಿದ್ದರಾಮಯ್ಯ 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ರಾಜ್ಯದ ಸ್ವಂತ ತೆರಿಗೆಗಳಿಂದ ಅತಿಹೆಚ್ಚು ಆದಾಯ ಸಿಗುತ್ತದೆ. ಕೇಂದ್ರದ ಜಿಎಸ್​ಟಿ ಪಾಲು, ಅಬಕಾರಿ ಸುಂಕ, ನೊಂದಣಿ ಮುದ್ರಾಂಕ ಶುಲ್ಕ ಇತ್ಯಾದಿಗಳಿಂದ ರಾಜ್ಯಕ್ಕೆ ಆದಾಯ ಸಿಗುತ್ತದೆ. ಸಾಲಗಳೂ ಸೇರಿ ರಾಜ್ಯ ಸರ್ಕಾರ 2025-26ಕ್ಕೆ 4.09 ಲಕ್ಷ ಕೋಟಿ ರೂ ಹಣದ ವ್ಯವಸ್ಥೆ ಮಾಡಿದೆ.

Karnataka Budget Size: 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್​​ನಲ್ಲಿ ಸರ್ಕಾರದ ಸಾಲ, ಖರ್ಚು ಮತ್ತು ವೆಚ್ಚಗಳ ವಿವರ
ಸಿದ್ದರಾಮಯ್ಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 07, 2025 | 2:47 PM

Share

ಬೆಂಗಳೂರು, ಮಾರ್ಚ್ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್​​ ತನ್ನ ಗಾತ್ರದಲ್ಲೂ ದಾಖಲೆ ಮಾಡಿದೆ. 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಇದಾಗಿದ್ದು, ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್ ಇದಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆಂದೇ 50,000 ಕೋಟಿ ರೂಗೂ ಹೆಚ್ಚು ಹಣವನ್ನು ಮೀಸಲಿರಿಸಲಾಗಿದೆ. ಅದರ ಜೊತೆ ಜೊತೆಗೆ ಇತರ ಅಭಿವೃದ್ದಿ ಯೋಜನೆಗಳಿಗೂ ಹಣದ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಇದೇ ವೇಳೆ ರಾಜ್ಯದ ಒಟ್ಟು ಸಾಲ 7.64 ಲಕ್ಷ ಕೋಟಿ ರೂನಷ್ಟಿದೆ. ಸರ್ಕಾರಕ್ಕೆ ಎಲ್ಲೆಲ್ಲಿಂದ ಆದಾಯ ಮತ್ತು ಹಣ ಹರಿದುಬರುತ್ತದೆ, ಯಾವ್ಯಾವುದಕ್ಕೆ ಆ ಹಣ ವೆಚ್ಚವಾಗುತ್ತದೆ ಎನ್ನುವ ವಿವರ ಇಲ್ಲಿದೆ…

ಕರ್ನಾಟಕ ಬಜೆಟ್ 2025-26 ವಿವರ

ಒಟ್ಟು ಬಜೆಟ್ ಗಾತ್ರ: 4,09,549 ಕೋಟಿ ರೂ

  • ಒಟ್ಟು ಆದಾಯ (ಸ್ವೀಕೃತಿ): 4,08,647 ಕೋಟಿ ರೂ
  • ರಾಜಸ್ವ ಸ್ವೀಕೃತಿ (ರೆವಿನ್ಯೂ ರೆಸಿಪ್ಟ್): 2,92,477 ಕೋಟಿ ರೂ
  • ಬಂಡವಾಳ ಸ್ವೀಕೃತಿ (ಕ್ಯಾಪಿಟಲ್ ರೆಸಿಪ್ಟ್): 1,16,170 ಕೋಟಿ ರೂ

ಒಟ್ಟು ವ್ಯಯ (ಎಕ್ಸ್​​ಪೆಂಡಿಚರ್): 4,09,549 ಕೋಟಿ ರೂ

ಇದನ್ನೂ ಓದಿ
Image
ಬಜೆಟ್​​ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೆಷ್ಟು?
Image
ಸದ್ದಿಲ್ಲದೇ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಘೋಷಿಸಿದ ಸಿದ್ದರಾಮಯ್ಯ!
Image
ಮನಮೋಹನ್ ಸಿಂಗ್ ಯೂನಿವರ್ಸಿಟಿಯಾಗಲಿರುವ ಬೆಂಗಳೂರು ವಿವಿ
Image
Karnataka Budget 2025 Highlights: ಕರ್ನಾಟಕ ಬಜೆಟ್​ನ ಮುಖ್ಯಾಂಶಗಳು
  • ರಾಜಸ್ವ ವೆಚ್ಚ (ರೆವಿನ್ಯೂ ಎಕ್ಸ್​ಪೆಂಡಿಚರ್): 3,11,739 ಕೋಟಿ ರೂ
  • ಬಂಡವಾಳ ವೆಚ್ಚ (ಕ್ಯಾಪಿಟಲ್ ಎಕ್ಸ್​​ಪೆಂಡಿಚರ್): 71,336 ಕೋಟಿ ರೂ
  • ಸಾಲ ಮರುಪಾವತಿ: 26,474 ಕೋಟಿ ರೂ

ಇದನ್ನೂ ಓದಿ: ಸಿದ್ದರಾಮಯ್ಯ ಬಜೆಟ್​ನಲ್ಲಿ ಶಿಕ್ಷಣ ಇಲಾಖೆಗೆ ಸಿಂಹಪಾಲು ಅನುದಾನ: ಯಾವ ಇಲಾಖೆ ಎಷ್ಟೆಷ್ಟು ಸಿಕ್ತು? ಇಲ್ಲಿದೆ ವಿವರ

2025-26ರಲ್ಲಿ ರಾಜಸ್ವ ಸ್ವೀಕೃತಿ ವಿಂಗಡಣೆ:

ಒಟ್ಟು ರೆವಿನ್ಯೂ ರೆಸಿಪ್ಟ್: 2,92,477 ಕೋಟಿ ರೂ

  • ರಾಜ್ಯದ ಸ್ವಂತ ತೆರಿಗೆ ಆದಾಯ: 2,08,100 ಕೋಟಿ ರೂ
  • ಕೇಂದ್ರದಿಂದ ಸಿಗುವ ತೆರಿಗೆ ಪಾಲು: 67,877 ಕೋಟಿ ರೂ
  • ತೆರಿಗೆಯೇತರ ಆದಾಯ: 16,500 ಕೋಟಿ ರೂ

ಬಂಡವಾಳ ಸ್ವೀಕೃತಿ: 1,16,170 ಕೋಟಿ ರೂ

  • ಸಾಲಗಳಿಂದ ಬರುವ ಒಟ್ಟು ಬಂಡವಾಳ: 1,16,000 ಕೋಟಿ ರೂ
  • ಸಾಲೇತರ ಬಂಡವಾಳ ಸ್ವೀಕೃತಿ: 170 ಕೋಟಿ ರೂ

2025-26ನೇ ಸಾಲಿಗೆ ಸರ್ಕಾರಕ್ಕೆ ಪ್ರಮುಖ ಆದಾಯ ಮೂಲಗಳು

  • ವಾಣಿಜ್ಯ ತೆರಿಗೆ ಇಲಾಖೆಗೆ 1,20,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ
  • ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 28,000 ಕೋಟಿ ರೂ. ತೆರಿಗೆ ಗುರಿ
  • ಅಬಕಾರಿ ಇಲಾಖೆಗೆ 40,000 ಕೋಟಿ ರೂ. ಗುರಿ;
  • ಮೋಟಾರು ವಾಹನ ಇಲಾಖೆಗೆ 15,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ
  • ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 12,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ

ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಡಾ. ಮನಮೋಹನ್ ಸಿಂಗ್ ಯೂನಿವರ್ಸಿಟಿ ಎಂದು ಮರುನಾಮಕರಣ

ರಾಜ್ಯದ ಸಾಲ 7.64 ಲಕ್ಷ ಕೋಟಿ ರೂ

ಕರ್ನಾಟಕ ಮೊದಲಿಂದಲೂ ಹಣಕಾಸು ಶಿಸ್ತು ಬೆಳೆಸಿಕೊಂಡ ರಾಜ್ಯ. ಸಾಲ ಕೂಡ ತೀರಾ ಹೆಚ್ಚಿಲ್ಲ. ಬಜೆಟ್​​ನಲ್ಲಿ ಘೋಷಿಸಿದ ಪ್ರಕಾರ ಕರ್ನಾಟಕದ ಸಾಲ 7,64,655 ಕೋಟಿ ರೂ ಇದೆ. ಇದು ರಾಜ್ಯ ಜಿಡಿಪಿಯ ಶೇ. 24.91ರಷ್ಟಿದೆ.

ರಾಜಸ್ವ ಕೊರತೆ ಅಥವಾ ರೆವಿನ್ಯೂ ಡೆಫಿಸಿಟ್ 19,262 ಕೋಟಿ ರೂ ಇದೆ. ಇದು ಜಿಡಿಪಿಯ ಶೇ 0.63ರಷ್ಟಾಗುತ್ತದೆ. ಇನ್ನು, ವಿತ್ತೀಯ ಕೊರತೆ ಅಥವಾ ಫಿಸ್ಕಲ್ ಡೆಫಿಸಿಟ್ 90,428 ಕೋಟಿ ರೂನಷ್ಟಾಗುತ್ತದೆ. ಇದು ಜಿಡಿಪಿಯ ಶೇ. 2.95ರಷ್ಟಾಗುತ್ತದೆ.

ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ