- Kannada News Photo gallery Karnataka Budget 2025: Education Department received the most funding, Which sector received how much? Here are the details
ಸಿದ್ದರಾಮಯ್ಯ ಬಜೆಟ್ನಲ್ಲಿ ಶಿಕ್ಷಣ ಇಲಾಖೆಗೆ ಸಿಂಹಪಾಲು ಅನುದಾನ: ಯಾವ ಇಲಾಖೆ ಎಷ್ಟೆಷ್ಟು ಸಿಕ್ತು? ಇಲ್ಲಿದೆ ವಿವರ
ಬೆಂಗಳೂರು, ಮಾರ್ಚ್ 7: ಹತ್ತು ಹಲವು ಹೊಸ ಯೋಜನೆಗಳು, ಅಭಿವೃದ್ಧಿಪೂರಕ ಅನುದಾನ ಸೇರಿದಂತೆ ರಾಜ್ಯ ಸರ್ಕಾರ ಬಜೆಟ್ನಲ್ಲಿ ಈ ವರ್ಷ ಬರೋಬ್ಬರಿ 51 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿದೆ. ಇಂತಹ ಬಹುಗಾತ್ರದ ಮಹತ್ವದ ಯೋಜನೆಯ ಜೊತೆಜೊತೆಗೆ ಹತ್ತು ಹಲವು ಘೋಷಣೆಗಳನ್ನೂ ಮಾಡಲಾಗಿದೆ. ನೂತನ ಕಾಲೇಜುಗಳು, ಕಟ್ಟಡಗಳು, ಕಂಪನಿಗಳಿಗೆ ಸಹಕಾರ, ರಸ್ತೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಘೋಷಿಸಲಾಗಿದೆ.
Updated on: Mar 07, 2025 | 1:40 PM

4 ಲಕ್ಷ ಕೋಟಿ ದಾಟಿದ ಬಜೆಟ್ ಗಾತ್ರ: ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ನ ಗಾತ್ರ ಬರೋಬ್ಬರಿ 4 ಲಕ್ಷ ಕೋಟಿ ರೂ. ಕಳೆದ ವರ್ಷ 3.71 ಲಕ್ಷ ಕೋಟಿ ರೂ. ಬಜೆಟ್ ಗಾತ್ರವಿತ್ತು. ಈ ಬಾರಿ ಈ ಅಂಕಿ 4 ಲಕ್ಷ ಕೋಟಿ ರೂ. ದಾಟಿದೆ. ಅಂದರೆ 4,09,549 ಕೋಟಿ ರೂಪಾಯಿಯ ದಾಖಲೆಯ ಬಜೆಟ್ ಇದಾಗಿದೆ.

ಶಿಕ್ಷಣ ಇಲಾಖೆಗೆ 45,286 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಹಾಗೆಯೇ, ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಗೆ 34,955 ಕೋಟಿ, ಇಂಧನ ಇಲಾಖೆಗೆ 26,896 ಕೋಟಿ, ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ಗೆ $26,735 ಕೋಟಿ, ನೀರಾವರಿ ಇಲಾಖೆಗೆ 22,181 ಕೋಟಿ, ನಗರಾಭಿವೃದ್ಧಿ & ವಸತಿ ಇಲಾಖೆಗೆ 21,405 ಕೋಟಿ ಹಾಗೂ ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 20,625 ಕೋಟಿ ಹಣ ಮೀಸಲಿಡಲಾಗಿದೆ.

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಗೆ 17,473 ಕೋಟಿ ಮೀಸಲಿಟ್ರೆ, ಕಂದಾಯ ಇಲಾಖೆಗೆ 17,201 ಕೋಟಿ, ಸಮಾಜಕಲ್ಯಾಣ ಇಲಾಖೆಗೆ 16,955 ಕೋಟಿ, ಲೋಕೋಪಯೋಗಿ ಇಲಾಖೆಗೆ ₹11,841 ಕೋಟಿ ಅನುದಾನ ಕೊಡಲಾಗಿದೆ.

ಆಹಾರ & ನಾಗರಿಕ ಸರಬರಾಜು ಇಲಾಖೆಗೆ 8,275 ಕೋಟಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 7145 ಕೋಟಿ, ಪಶುಸಂಗೋಪನೆ & ಮೀನುಗಾರಿಕೆ ಇಲಾಖೆಗೆ 3,977 ಕೋಟಿ ಹಾಗೂ ಇತರೆ ಇಲಾಖೆಗಳಿಗೆ 1 ಲಕ್ಷ 49 ಸಾವಿರದ 857 ಕೋಟಿ ಅನುದಾನ ಘೋಷಣೆಯಾಗಿದೆ.

ಹೀಗೆ ಎಲ್ಲ ಇಲಾಖೆಗಳಿಗೂ ಅನುಕೂಲಕ್ಕೆ ಅನುಗುಣವಾಗಿ ಬಜೆಟ್ ಹಂಚಿಕೆ ಮಾಡಲಾಗಿದೆ. ಹೊಸ ಯೋಜನೆ, ನೂತನ ಘೋಷಣೆಗಳೊಂದಿಗೆ ಸರ್ಕಾರ ಸಮಗ್ರ ರಾಜ್ಯದ ಅಭಿವೃದ್ಧಿಯ ಗುರಿ ಹೊಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.



















