Karnataka Budget 2025: ಬೆಂಗಳೂರು ನಗರದ ಅಭಿವೃದ್ಧಿಗೆ ಬಜೆಟ್ನಲ್ಲಿ ನೀಡಲಾದ ಹಣ ಮತ್ತು ಘೋಷಣೆಗಳು
Bengaluru's share in Karnataka Budget 2025: ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್ 4 ಲಕ್ಷ ಕೋಟಿ ರೂ ಗಾತ್ರದ್ದಾಗಿದ್ದು, ಬೆಂಗಳೂರಿಗೆ ಸಾಕಷ್ಟು ಹಣ ನೀಡಲಾಗಿದೆ. ಟನಲ್ ಕಾರಿಡಾರ್ ಯೋಜನೆಗಳು, ಬ್ರ್ಯಾಂಡ್ ಬೆಂಗಳೂರು ಅಡಿ ವಿವಿಧ ಯೋಜನೆಗಳು, ಕುಡಿಯುವ ನೀರಿನ ಯೋಜನೆ, ಒಳಚರಂಡಿ ವ್ಯವಸ್ಥೆ ಬಲಪಡಿಸುವ ಯೋಜನೆ ಇವೆಲ್ಲಕ್ಕೂ ಬಜೆಟ್ನಲ್ಲಿ ಹಣ ನೀಡಲಾಗಿದೆ.

ಬೆಂಗಳೂರು, ಮಾರ್ಚ್ 7: ಕರ್ನಾಟಕ ರಾಜ್ಯದ ಆರ್ಥಿಕ ವ್ಯವಸ್ಥೆಯ ಜೀವನಾಡಿಯಾದ ಬೆಂಗಳೂರು ನಗರದ ಅಭಿವೃದ್ಧಿಗೆ ಬಜೆಟ್ನಲ್ಲಿ (Karnataka Budget 2025-26) ಸಾಕಷ್ಟು ಹಣ ನೀಡಲಾಗಿದೆ. ನಗರದ ರಸ್ತೆ, ರೈಲು ಇತ್ಯಾದಿ ಮೂಲಸೌಕರ್ಯಗಳ ಸುಧಾರಣೆಗೆ ಇರುವ ವಿವಿಧ ಯೋಜನೆಗಳಿಗೆ ಅನುದಾನಗಳನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ಕಾರಿಡಾರ್ಗಳು, ಕುಡಿಯುವ ನೀರು, ಒಳಚರಂಡಿ, ಕೆರೆಗಳ ಅಭಿವೃದ್ಧಿ ಇತ್ಯಾದಿಗಳಿಗೆ ಸಿದ್ದರಾಮಯ್ಯ ತಮ್ಮ ಬಜೆಟ್ನಲ್ಲಿ ಸಾವಿರಾರು ಕೋಟಿ ರೂ ನೀಡಿದ್ದಾರೆ. 40,000 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮದ ಸುರಂಗ ಕಾರಿಡಾರ್ ಯೋಜನೆಗೆ ಸರ್ಕಾರದಿಂದ 19,000 ಕೋಟಿ ರು ಗ್ಯಾರಂಟಿ ನೀಡಲಾಗಿದೆ.
ಕರ್ನಾಟಕದ ಬಜೆಟ್ 2025-26, ಬೆಂಗಳೂರು ನಗರಕ್ಕೆ ಸಿಕ್ಕಿದ್ದು…
- ಬೆಂಗಳೂರಿನಲ್ಲಿ ಟನಲ್ ಕಾರಿಡಾರ್ ಯೋಜನೆಗೆ 19,000 ಕೋಟಿ ರೂ
- ನಮ್ಮ ಮೆಟ್ರೋ ಹಂತ-3 ಯೋಜನೆ ಅಡಿ 40.50 ಕಿ.ಮಿ. ಉದ್ದದ ಡಬಲ್-ಡೆಕ್ಕರ್ ಮೇಲ್ಸೇತುವೆ 8,916 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.
- ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ 98.60 ಕಿ.ಮೀ ಹೆಚ್ಚುವರಿ ನಮ್ಮ ಮೆಟ್ರೋ ಜಾಲ ಅಭಿವೃದ್ಧಿ.
- “ಬ್ರ್ಯಾಂಡ್ ಬೆಂಗಳೂರು” ಅಡಿ, 1,800 ಕೋಟಿ ರೂ. ಮೊತ್ತದ 21 ಯೋಜನೆಗಳಿಗೆ ಅನುಮೋದನೆ.
- 413 ಕೋಟಿ ರೂ. ವೆಚ್ಚದಲ್ಲಿ “ಸಮಗ್ರ ಆರೋಗ್ಯ ಯೋಜನೆ” ಜಾರಿ.
- ಬೆಂಗಳೂರು ನಗರದಲ್ಲಿ ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್.ಟಿ.ಪಿ ನಿರ್ಮಿಸಲು 3 ಸಾವಿರ ಕೋಟಿ ರೂ. ಆರ್ಥಿಕ ನೆರವು.
- ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಯಿಂದ 50 ಲಕ್ಷ ಜನರಿಗೆ ನೀರು ಪೂರೈಕೆ.
ಇದನ್ನೂ ಓದಿ: Karnataka Budget 2025 PDF download: ಕರ್ನಾಟಕ ಬಜೆಟ್ 2025, ಪಿಡಿಎಫ್ ಪ್ರತಿ ಡೌನ್ಲೋಡ್ ಮಾಡಿ
- ಕಾವೇರಿ 6ನೇ ಹಂತ ಯೋಜನೆ ಅನುಷ್ಠಾನಗೊಳಿಸಲು ವಿಸ್ತೃತ ಯೋಜನಾ ವರದಿ ತಯಾರಿಕೆ
- BWSSB ವತಿಯಿಂದ ಬಯೋಗ್ಯಾಸ್-ಆಧಾರಿತ ಆದಾಯ ಮತ್ತು ಕಾರ್ಬನ್ ಕ್ರೆಡಿಟ್‌ಗಳ ಉಪಯೋಗ ಪಡೆಯಲು PPP ಮಾದರಿಯಲ್ಲಿ ಯೋಜನೆ.
- ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ: 73 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ 27 ಸಾವಿರ ಕೋಟಿ ರೂ.
- ಹವಾಮಾನ ವೈಪರಿತ್ಯದಿಂದ ಉಂಟಾಗುವ ಪ್ರವಾಹ ನಿಯಂತ್ರಣ ಮತ್ತು ಒಳಚರಂಡಿ ವ್ಯವಸ್ಥೆಯ ಸುಧಾರಣೆಗಾಗಿ ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್ಎಸ್ಬಿಗೆ ₹3,000 ಕೋಟಿ ಅನುದಾನ
- 300 ಕಿಮೀ ರಸ್ತೆ ಅಭಿವೃದ್ಧಿಗೆ ₹3,000 ಕೋಟಿ ರೂ
- ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಅಭಿವೃದ್ಧಿಗೆ ₹1,070 ಕೋಟಿ ಅನುದಾನ
- “ಸೇಫ್ ಸಿಟಿ” ಯೋಜನೆಗೆ ₹667 ಕೋಟಿ ರೂ ನೀಡಲಾಗುವುದು. ಈ ಯೋಜನೆಯಡಿಯಲ್ಲಿ 7,500 ಕ್ಯಾಮೆರಾಗಳು, 10 ಡ್ರೋನ್‌ಗಳು, 560 ಬಾಡಿ-ಕ್ಯಾಮ್‌ಗಳು ಅಳವಡಿಸಲಾಗುತ್ತಿದೆ
- ಮಹಿಳಾ ಭದ್ರತೆಗಾಗಿ 60 ಮಹಿಳಾ ಔಟ್-ಪೋಸ್ಟ್ ಠಾಣೆಗಳ ನಿರ್ಮಾಣ
- ಬೆಂಗಳೂರಿನಲ್ಲಿ ಸಿಗ್ನಲ್ ಫ್ರೀ ಜಂಕ್ಷನ್ಗಳ ನಿರ್ಮಾಣ
- 14 ಕೆರೆಗಳ ಅಭಿವೃದ್ಧಿ ಯೋಜನೆಗೆ 35 ಕೋಟಿ ರೂ
- 50 ಲಕ್ಷ ಜನರಿಗೆ ಉಪಯೋಗವಾಗುವ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಗೆ 5,550 ಕೋಟಿ ರೂ
ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ