Video: ಹಾಸ್ಟೆಲ್‌ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಒಡಿಶಾದ ಬಾಲಸೋರ್ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಹಾಸ್ಟೆಲ್‌ನಲ್ಲಿ ತಂದೆಯೊಬ್ಬರು ಮಗನ ಕಾಳಿಗೆ ಸರಪಳಿ ಕಟ್ಟಿ ಕೂರಿಸಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.ಬಾಲಕ ಹಾಸ್ಟೆಲ್‌ನಿಂದ ಓಡಿಹೋಗಿ ಅನುಮತಿಯಿಲ್ಲದೆ ಮನೆಗೆ ಮರಳಿದ್ದ ಎಂದು ಆರೋಪಿಸಿರುವ ತಂದೆ ಮಗನಿಗೆ ಈ ಶಿಕ್ಷೆ ನೀಡಿದ್ದಾರೆ.ಬೆಗುನಿಯಾದ ಸರ್ಕಾರಿ ಯುಪಿ ಶಾಲೆಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.
ಬಾಲಸೋರ್, ಡಿಸೆಂಬರ್ 05: ಒಡಿಶಾದ ಬಾಲಸೋರ್ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಹಾಸ್ಟೆಲ್‌ನಲ್ಲಿ ತಂದೆಯೊಬ್ಬರು ಮಗನ ಕಾಳಿಗೆ ಸರಪಳಿ ಕಟ್ಟಿ ಕೂರಿಸಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.ಬಾಲಕ ಹಾಸ್ಟೆಲ್‌ನಿಂದ ಓಡಿಹೋಗಿ ಅನುಮತಿಯಿಲ್ಲದೆ ಮನೆಗೆ ಮರಳಿದ್ದ ಎಂದು ಆರೋಪಿಸಿರುವ ತಂದೆ ಮಗನಿಗೆ ಈ ಶಿಕ್ಷೆ ನೀಡಿದ್ದಾರೆ.ಬೆಗುನಿಯಾದ ಸರ್ಕಾರಿ ಯುಪಿ ಶಾಲೆಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ವಿಡಿಯೋ ವೈರಲ್ ಆದ ತಕ್ಷಣ, ಶಿಕ್ಷಣ ಇಲಾಖೆ ಮತ್ತು ಆಡಳಿತವು ತಕ್ಷಣ ಕ್ರಮ ಕೈಗೊಂಡು ಮಗುವನ್ನು ರಕ್ಷಿಸಿತು. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ತನಿಖಾ ವರದಿ ಬಿಡುಗಡೆಯಾದ ನಂತರ ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

