AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jupiter Transit: ಗುರು ಪುನರ್ವಸು ನಕ್ಷತ್ರದಲ್ಲಿ ಸಂಚಾರ; 4 ರಾಶಿಗಳಿಗೆ ಅದೃಷ್ಟದ ಸುರಿಮಳೆ

ದೇವಗುರು ಬೃಹಸ್ಪತಿಯು ಪ್ರಸ್ತುತ ಮಿಥುನ ರಾಶಿಯ ಪುನರ್ವಸು ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಗುರುವೇ ಈ ನಕ್ಷತ್ರದ ಅಧಿಪತಿಯಾಗಿರುವುದರಿಂದ, ಇದು ಅತ್ಯಂತ ಪ್ರಭಾವಶಾಲಿ ಯೋಗ. ಜ್ಞಾನ, ಸಂಪತ್ತು, ಸಂಬಂಧ ಹಾಗೂ ಅದೃಷ್ಟದ ಕಾರಕನಾದ ಗುರು ತನ್ನ ದೃಷ್ಟಿಯಿಂದ ಮಿಥುನ, ತುಲಾ, ಧನು, ಕುಂಭ ರಾಶಿಗಳಿಗೆ ವಿಶೇಷ ಶುಭಫಲಗಳನ್ನು ನೀಡಲಿದ್ದಾನೆ. ಹಳೆಯ ಕೆಲಸಗಳು ಪೂರ್ಣಗೊಂಡು ಹೊಸ ಅವಕಾಶಗಳು ಒದಗಿ ಬಂದು ಜೀವನದಲ್ಲಿ ಸಮೃದ್ಧಿ ತರಲಿದೆ.

Jupiter Transit: ಗುರು ಪುನರ್ವಸು ನಕ್ಷತ್ರದಲ್ಲಿ ಸಂಚಾರ; 4 ರಾಶಿಗಳಿಗೆ ಅದೃಷ್ಟದ ಸುರಿಮಳೆ
Punarvasu Nakshatra, Guru Transit
ಅಕ್ಷತಾ ವರ್ಕಾಡಿ
|

Updated on:Mar 13, 2026 | 5:58 PM

Share

​ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಬೃಹಸ್ಪತಿಯನ್ನು ಶುಭ ಗ್ರಹ ಎಂದು ಕರೆಯಲಾಗುತ್ತದೆ. ಗುರುವು ಜ್ಞಾನ, ಸಂತಾನ, ಭಾಗ್ಯ ಮತ್ತು ಸಮೃದ್ಧಿಯ ಕಾರಕ. ಪ್ರಸ್ತುತ ಗುರುವು ಮಿಥುನ ರಾಶಿಯ ಪುನರ್ವಸು ನಕ್ಷತ್ರದ ಮೂಲಕ ಸಂಚರಿಸುತ್ತಿದ್ದಾನೆ. ಪುನರ್ವಸು ನಕ್ಷತ್ರದ ಅಧಿಪತಿಯೂ ಸ್ವತಃ ಗುರುವೇ ಆಗಿರುವುದರಿಂದ, ಈ ಸಂಚಾರವು ಅತ್ಯಂತ ಶಕ್ತಿಯುತ ಹಾಗೂ ಪ್ರಭಾವಶಾಲಿಯಾಗಿದೆ.

​ಗುರುವಿನ ದೃಷ್ಟಿ ಸ್ಥಾನ:

​ಗುರುವು ತಾನು ಕುಳಿತಿರುವ ಸ್ಥಾನದಿಂದ 5, 7 ಮತ್ತು 9ನೇ ಮನೆಯನ್ನು ಪೂರ್ಣ ದೃಷ್ಟಿಯಿಂದ ನೋಡುತ್ತಾನೆ. ಮಿಥುನ ರಾಶಿಯಲ್ಲಿರುವ ಗುರುವು ಈ ಕೆಳಗಿನ ರಾಶಿಗಳ ಮೇಲೆ ತನ್ನ ಪ್ರಭಾವ ಬೀರುತ್ತಾನೆ.

  • ​ತುಲಾ ರಾಶಿ: ಇದು ಪಂಚಮ ದೃಷ್ಟಿ ಅಥವಾ ಸಂತಾನ ದೃಷ್ಟಿ, ಇದು ಜ್ಞಾನ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ.
  • ಧನು ರಾಶಿ: ಇದು ಸಪ್ತಮ ದೃಷ್ಟಿ ಅಥವಾ ಕಂಕಣ ದೃಷ್ಟಿ, ಇದು ಸಂಬಂಧಗಳು ಮತ್ತು ಪಾಲುದಾರಿಕೆಯನ್ನು ವೃದ್ಧಿಸುತ್ತದೆ.
  • ಕುಂಭ ರಾಶಿ: ಇದು ನವಮ ದೃಷ್ಟಿ ಅಥವಾ ಭಾಗ್ಯ ದೃಷ್ಟಿ. ಇದು ಅದೃಷ್ಟ ಮತ್ತು ಧಾರ್ಮಿಕ ಏಳಿಗೆಯನ್ನು ಸೂಚಿಸುತ್ತದೆ.

​ರಾಶಿಗಳ ಮೇಲೆ ಶುಭಾಶುಭ ಫಲಗಳು:

ಮಿಥುನ ರಾಶಿ :

ಗುರುವು ನಿಮ್ಮ ರಾಶಿಯಲ್ಲೇ ಇರುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಪುನರ್ವಸು ನಕ್ಷತ್ರದಲ್ಲಿ ಗುರು ಇರುವುದರಿಂದ ಹಳೆಯ ಬಾಕಿ ಉಳಿದ ಕೆಲಸಗಳು ಮರುಜೀವ ಪಡೆಯುತ್ತವೆ. ಆದರೆ, ತೂಕ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಜ್ಞಾನಾರ್ಜನೆಗೆ ಇದು ಸುವರ್ಣಾವಕಾಶ.

​ತುಲಾ ರಾಶಿ :

​ತುಲಾ ರಾಶಿಯವರಿಗೆ ಈ ಕಾಲವು ವರದಾನದಂತಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಮತ್ತು ಸಂಶೋಧಕರಿಗೆ ಅತ್ಯುತ್ತಮ ಫಲಗಳು ದೊರೆಯಲಿವೆ. ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯದ ಯೋಗವಿದೆ. ನಿಮ್ಮ ಹೂಡಿಕೆಗಳಿಂದ ನಿರೀಕ್ಷಿತ ಲಾಭ ಪಡೆಯುವಿರಿ. ಕಲಾತ್ಮಕ ಕ್ಷೇತ್ರದಲ್ಲಿರುವವರಿಗೆ ಹೊಸ ಅವಕಾಶಗಳು ಹುಡುಕಿ ಬರಲಿವೆ.

​ಧನು ರಾಶಿ:

ಧನು ರಾಶಿಯ ಅಧಿಪತಿಯೂ ಗುರುವೇ ಆಗಿರುವುದರಿಂದ, ಸಪ್ತಮ ದೃಷ್ಟಿಯು ವಿವಾಹದ ಕನಸು ಕಾಣುತ್ತಿರುವವರಿಗೆ ಶುಭ ವಾರ್ತೆ ತರಲಿದೆ. ವೈವಾಹಿಕ ಜೀವನದಲ್ಲಿನ ಕಲಹಗಳು ದೂರವಾಗಿ ಪ್ರೀತಿ ಹೆಚ್ಚುತ್ತದೆ. ವ್ಯಾಪಾರದಲ್ಲಿ ಹೊಸ ಒಪ್ಪಂದಗಳು ಲಾಭದಾಯಕವಾಗಲಿವೆ. ಸಾಮಾಜಿಕವಾಗಿ ನಿಮ್ಮ ಗೌರವವು ದುಪ್ಪಟ್ಟಾಗಲಿದೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

​ಕುಂಭ ರಾಶಿ:

​ಕುಂಭ ರಾಶಿಯವರಿಗೆ ಅದೃಷ್ಟವು ಕೈಹಿಡಿಯಲಿದೆ. ಪಿತೃಾರ್ಜಿತ ಆಸ್ತಿಯ ವಿವಾದಗಳು ಬಗೆಹರಿಯಲಿವೆ. ದೂರದ ಪ್ರಯಾಣ ಅಥವಾ ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಪ್ರಯತ್ನಗಳು ಯಶಸ್ವಿಯಾಗಲಿವೆ. ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮಾನಸಿಕ ಶಾಂತಿ ನೀಡುತ್ತದೆ.

​ಪುನರ್ವಸು ನಕ್ಷತ್ರ:

ಪುನರ್ವಸು ಎಂದರೆ ಮತ್ತೆ ಸಂಪತ್ತು ಎಂದರ್ಥ. ಈ ನಕ್ಷತ್ರದಲ್ಲಿರುವ ಗುರುವು ಸೋಲನ್ನು ಗೆಲುವನ್ನಾಗಿ ಪರಿವರ್ತಿಸುವ ಶಕ್ತಿ ಹೊಂದಿದ್ದಾನೆ. ಕಳೆದುಕೊಂಡ ಗೌರವ ಅಥವಾ ಹಣವನ್ನು ಮರಳಿ ಪಡೆಯಲು ಇದು ಸೂಕ್ತ ಕಾಲ.

​ಗುರುವಾರಗಳಂದು ಶಿವನ ದಕ್ಷಿಣಾಮೂರ್ತಿ ರೂಪವನ್ನು ಪೂಜಿಸುವುದು. ಹಳದಿ ಬಣ್ಣದ ವಸ್ತ್ರ ಅಥವಾ ಬೇಳೆಯನ್ನು ಅರ್ಚಕರಿಗೆ ಅಥವಾ ಬಡವರಿಗೆ ದಾನ ಮಾಡುವುದು. ​

– ಲೋಹಿತ ಹೆಬ್ಬಾರ್

Published On - 3:50 pm, Fri, 13 March 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ