Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಮಹಾಕುಂಭದಲ್ಲಿ ಪುಣ್ಯ ಸ್ನಾನ ಮಾಡಿ ಎಲ್ಲ ಪಾಪ ಕಳೆದುಕೊಂಡ ಸನ್ನಿ ಲಿಯೋನ್?: ವೈರಲ್ ವಿಡಿಯೋದ ಸತ್ಯ ಏನು?

Sunny Leone Mahakumbh Fact Check: ಮಹಾಕುಂಭ ಮೇಳಕ್ಕೆ ಸಂಬಂಧಿಸಿದಂತೆ ಅನೇಕ ಸುಳ್ಳು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೀಗ ನಟಿ ಸನ್ನಿ ಲಿಯೋನ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಕೆಲವು ಬಳಕೆದಾರರು ಸನ್ನಿ ಲಿಯೋನ್ ಮಹಾ ಕುಂಭದಲ್ಲಿ ಎಂದು ಹೇಳಿಕೊಳ್ಳುತ್ತಿದ್ದಾರೆ.

Fact Check: ಮಹಾಕುಂಭದಲ್ಲಿ ಪುಣ್ಯ ಸ್ನಾನ ಮಾಡಿ ಎಲ್ಲ ಪಾಪ ಕಳೆದುಕೊಂಡ ಸನ್ನಿ ಲಿಯೋನ್?: ವೈರಲ್ ವಿಡಿಯೋದ ಸತ್ಯ ಏನು?
Sunny Leone Mmahakumbh Fact Check
Follow us
ಪ್ರೀತಿ ಭಟ್​, ಗುಣವಂತೆ
| Updated By: Vinay Bhat

Updated on:Feb 24, 2025 | 3:01 PM

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ 144 ವರ್ಷಗಳ ನಂತರ ಮಹಾಕುಂಭ ಮೇಳೆ ನಡೆಯುತ್ತಿದೆ. 44 ದಿನಗಳ ಕಾಲ ನಡೆಯುವ ಮಹಾ ಕುಂಭಮೇಳ 2025 ಜನವರಿ 13 ರಂದು ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಿ ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳುತ್ತದೆ. ಈ ಮಹಾ ಕುಂಭಮೇಳದಲ್ಲಿ ನಿರೀಕ್ಷಿಸಿದುದಕ್ಕಿಂತಲೂ ಹೆಚ್ಚಿನ ಜನರು ಈವರೆಗೆ ಭೇಟಿ ನೀಡಿದ್ದಾರೆ. ಇಡೀ ಕುಂಭಮೇಳದ ಆರು ವಾರದಲ್ಲಿ ಒಟ್ಟು 40 ಕೋಟಿ ಭಕ್ತರು ಆಗಮಿಸಬಹುದು ಎಂದು ಭಾವಿಸಲಾಗಿತ್ತು. ಆದರೆ, ಈವರೆಗಿನ ಸಂಖ್ಯೆ 55 ಕೋಟಿ ಮೀರಿದೆ. ಇನ್ನೊಂದು ವಾರ ಬಾಕಿ ಇದ್ದು ಒಟ್ಟು ಜನಭೇಟಿ ಸಂಖ್ಯೆ 60 ಕೋಟಿಗಿಂತಲೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

ಇದರ ಮಧ್ಯೆ ಮಹಾಕುಂಭ ಮೇಳಕ್ಕೆ ಸಂಬಂಧಿಸಿದಂತೆ ಅನೇಕ ಸುಳ್ಳು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೀಗ ನಟಿ ಸನ್ನಿ ಲಿಯೋನ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಘಾಟ್‌ನಲ್ಲಿ ವಿಡಿಯೋ ಮಾಡುತ್ತಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಸನ್ನಿ ಲಿಯೋನ್ ಮಹಾ ಕುಂಭದಲ್ಲಿ ಎಂದು ಹೇಳಿಕೊಳ್ಳುತ್ತಿದ್ದಾರೆ.

ಏನು ವೈರಲ್ ಆಗುತ್ತಿರುವುದೇನು?

ಫೇಸ್‌ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿ ಸನ್ನಿ ಲಿಯೋನ್ ತನ್ನ ಎಲ್ಲಾ ಪಾಪಗಳನ್ನು ತೊಳೆದುಕೊಂಡಳು’’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವಾಸ್ತವವಾಗಿ ಸನ್ನಿ ಲಿಯೋನ್ ಅವರ ಈ ವೀಡಿಯೊ 2023 ರದ್ದಾಗಿದೆ. ವೈರಲ್ ವಿಡಿಯೋವನ್ನು ತನಿಖೆ ಮಾಡಲು, ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸಹಾಯದಿಂದ ಹುಡುಕಿದ್ದೇವೆ. ಆಗ ವೈರಲ್ ವಿಡಿಯೋಗೆ ಸಂಬಂಧಿಸಿದ ಅನೇಕ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಖಾಸಗಿ ವೆಬ್​ಸೈಟ್ ಒಂದು ನವೆಂಬರ್ 17, 2023 ರಂದು ಪ್ರಕಟಿಸಿದ ವರದಿಯ ಪ್ರಕಾರ, ‘‘ಸನ್ನಿ ಲಿಯೋನ್ ಸಂಗೀತ ಆಲ್ಬಮ್‌ನ ಪ್ರಚಾರಕ್ಕಾಗಿ ವಾರಣಾಸಿಗೆ ಬಂದಿದ್ದರು. ಈ ಸಮಯದಲ್ಲಿ ಅವರು ಬಾಬಾ ವಿಶ್ವನಾಥರನ್ನು ಭೇಟಿ ಮಾಡಿದರು ಮತ್ತು ಗಂಗಾ ಆರತಿಯನ್ನು ಸಹ ವೀಕ್ಷಿಸಿದರು’’ ಎಂದು ಬರೆಯಲಾಗಿದೆ.

Fact Check: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕತ್ತಿವರಸೆ ಮಾಡುತ್ತಿರುವುದು ನಿಜವೇ?: ವೈರಲ್ ವಿಡಿಯೋದ ಸತ್ಯಾಂಶ ಏನು?

ಈ ಮಾಹಿತಿಯ ಆಧಾರದ ಮೇಲೆ ನಾವು ಯೂಟ್ಯೂಬ್​ನಲ್ಲಿ ಸರ್ಚ್ ಮಾಡಿದಾಗ, ಟಿವಿ9 ಭಾರತ್ ವರ್ಷ್ ನವೆಂಬರ್ 16, 2023 ರಂದು ‘‘ಸನ್ನಿ ಲಿಯೋನ್ ವಾರಣಾಸಿ ತಲುಪಿದರು, ಗಂಗಾ ಆರತಿಯಲ್ಲಿ ಭಾಗವಹಿಸಿದರು… ಘಾಟ್‌ನಲ್ಲಿ ಅವರನ್ನು ನೋಡಲು ಜನಸಮೂಹ ಜಮಾಯಿಸಿತು’’ ಎಂಬ ಶೀಷರ್ಷಿಕೆಯೊಂದಿಗೆ ವಿಡಿಯೋ ಸುದ್ದಿ ಹಂಚಿಕೊಂಡಿರುವುದು ಸಿಕ್ಕಿದೆ.

ಸನ್ನಿ ಲಿಯೋನ್ ಅವರ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿಯೂ ಸಹ ವೈರಲ್ ವೀಡಿಯೊ ನಮಗೆ ಕಂಡುಬಂದಿದೆ. ಆ ವಿಡಿಯೋವನ್ನು ಡಿಸೆಂಬರ್ 3, 2023 ರಂದು ಹಂಚಿಕೊಳ್ಳಲಾಗಿದೆ.

ಇನ್ನು ಸನ್ನಿ ಲಿಯೋನ್ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆಯೇ ಎಂದು ನಾವು ಹುಡುಕಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ವಿಶ್ವಾಸರ್ಹ ವರದಿ ಎಲ್ಲೂ ಕಂಡುಬಂದಿಲ್ಲ. ಅವರ ಸೋಷಿಯಲ್ ಮೀಡಿಯಾ ಖಾತೆಯನ್ನು ಕೂಡ ಪರಿಶೀಲಿಸಿದ್ದೇವೆ. ಅಲ್ಲೂ ಅವರು ಮಹಾಕುಂಭಕ್ಕೆ ತೆರಳಿದ ಬಗ್ಗೆ ಯಾವುದೇ ಫೋಟೋ-ವಿಡಿಯೋ ಹಂಚಿಕೊಂಡಿಲ್ಲ. ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಸನ್ನಿ ಲಿಯೋನ್ ಅವರ ವೈರಲ್ ವಿಡಿಯೋ ದಾರಿತಪ್ಪಿಸುವಂತಿದೆ ಎಂದು ಟಿವಿ9 ಕನ್ನಡ ಕಂಡುಹಿಡಿದಿದೆ. ಈ ವಿಡಿಯೋ 2023 ರಲ್ಲಿ ಸನ್ನಿ ಲಿಯೋನ್ ತನ್ನ ಸಂಗೀತ ಆಲ್ಬಮ್‌ನ ಪ್ರಚಾರಕ್ಕಾಗಿ ವಾರಣಾಸಿಗೆ ಹೋಗಿದ್ದ ಸಂದರ್ಭದ್ದಾಗಿದೆ. ಈಗ ಕೆಲವರು ಅದೇ ವಿಡಿಯೋವನ್ನು ಮಹಾ ಕುಂಭ ಮೇಳದ ವಿಡಿಯೋ ಎಂದು ಹೇಳಿಕೊಂಡು ಹಂಚಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Mon, 24 February 25