‘ಮಹಾಕುಂಭಮೇಳದಲ್ಲಿ ಭಾಗಿಯಾದ ನಾನು ಪುಣ್ಯವಂತೆ’: ನಟಿ ಕತ್ರಿನಾ ಕೈಫ್
ಮಹಾಕುಂಭಮೇಳದಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ನಟಿ ಕತ್ರಿನಾ ಕೈಫ್ ಕೂಡ ಖುಷಿಯಿಂದ ಪಾಲ್ಗೊಂಡಿದ್ದಾರೆ. ಪ್ರಯಾಗ್ರಾಜ್ಗೆ ಬಂದ ಕೂಡಲೇ ಅವರು ಸ್ವಾಮಿಜಿ ಆಶೀರ್ವಾದ ಪಡೆದಿದ್ದಾರೆ. ವಿಕ್ಕಿ ಕೌಶಲ್ ಜೊತೆ ಮದುವೆ ಆದ ಬಳಿಕ ಕತ್ರಿನಾ ಕೈಫ್ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದೆ.
ಖ್ಯಾತ ನಟಿ ಕತ್ರಿನಾ ಕೈಫ್ ಅವರು ಪ್ರಯಾಗ್ರಾಜ್ಗೆ ತೆರಳಿದ್ದಾರೆ. ಮಹಾಕುಂಭಮೇಳದಲ್ಲಿ ಅವರು ಭಾಗಿಯಾಗುತ್ತಿದ್ದಾರೆ. ‘ಈ ಬಾರಿ ಇಲ್ಲಿಗೆ ಬಂದಿರುವ ನಾನು ಪುಣ್ಯವಂತೆ. ತುಂಬ ಖುಷಿ ಆಗುತ್ತಿದೆ. ಇದು ಬಹಳ ಸುಂದರವಾದ ಸ್ಥಳ. ಈಗ ನಾನು ಸ್ವಾಮಿಜಿ ಜೊತೆ ಇದ್ದೇನೆ. ಅವರ ಆಶೀರ್ವಾದ ಪಡೆದಿದ್ದೇನೆ. ಕುಂಭಮೇಳದ ಅನುಭವ ಪಡೆಯಲು ಈಗಷ್ಟೇ ಆರಂಭಿಸಿದ್ದೇನೆ’ ಎಂದು ಕತ್ರಿನಾ ಕೈಫ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 24, 2025 04:20 PM
Latest Videos