ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಮಿನಿಸ್ಟ್ರಾಗುವ ಆಸೆ ಖಂಡಿತ ಇದೆ: ಕೆಎಂ ಶಿವಲಿಂಗೇಗೌಡ
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಶಿವಲಿಂಗೇಗೌಡ, ತಮಗೆ ಸಂಬಂಧಿಸಿದಿರದ ವಿಷಯಗಳ ಬಗ್ಗೆ ಕಾಮೆಂಟ್ ಮಾಡುವ ಗೋಜಿಗೆ ಹೋಗದೆ ಬಾಯಿ ಮುಚ್ಚಿಕೊಂಡು ತೆಪ್ಪಗಿರಿ ಅಂತ ಪಕ್ಷದ ವರಿಷ್ಠರು ಹೇಳಿದ್ದಾರೆ, ಹಾಗಾಗಿ ಏನನ್ನೂ ಹೇಳಲ್ಲ ಎಂದರು. ರಾಜ್ಯದ ಕೆಲವು ಶಾಸಕರು ಮತ್ತು ನಾಯಕರು ಮಾತ್ರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದನ್ನು ಪಾಲಿಸುತ್ತಿದ್ದಾರೆ.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡರು ಮಂತ್ರಿಯಾಗುವ ಆಸೆಯನ್ನು ಮತ್ತೊಮ್ಮೆ ಹೇಳಿಕೊಂಡರು. ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರೋದ್ರಿಂದ ಮಿನಿಸ್ಟ್ರಾಗುವ ಆಸೆ ಖಂಡಿತವಾಯವಾಗಿಯೂ ಇದೆ, ಪಕ್ಷದ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ಎರಡನೇ ಅವಧಿಯಲ್ಲಿ ತನಗೆ ಸಚಿವ ಮಾಡುವ ಭರವಸೆ ನೀಡಿದ್ದಾರೆ, ಹಾಗಾಗಿ ತಾನೇನೂ ಅವಸರಿಸುತ್ತಿಲ್ಲ, ಸಂಪುಟ ಪುನಾರಚನೆ ಮಾಡುವುದನ್ನು ಕಾಯುತ್ತಿರುವುದಾಗಿ ಶಿವಲಿಂಗೇಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ಕೆಎಂ ಶಿವಲಿಂಗೇಗೌಡ