ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ಕೆಎಂ ಶಿವಲಿಂಗೇಗೌಡ
ಸಿದ್ದರಾಮಯ್ಯ ಸೈಟುಗಳನ್ನು ಕಾನೂನುಬಾಹಿರವಾಗಿ ಪಡೆದಿಲ್ಲ, ಅವರಿಗೆ ಸೈಟುಗಳನ್ನು ನೀಡಿದ್ದ್ದು ಅಕ್ರಮವೋ ಸಕ್ರಮವೋ ಅಂತ ಮಾಧ್ಯಮದವರು ನಿರ್ಧರಿಸಲಿ, ಮುಡಾದಲ್ಲಿ 142 ಜನ ಬೇನಾಮಿಯಾಗಿ ಸೈಟುಗಳನ್ನು ಪಡೆದಿದ್ದಾರೆ, ಆದರೆ ಸಿದ್ದರಾಮಯ್ಯನವರು ಪಡೆದಿರುವುದು ಬದಲೀ ಸೈಟುಗಳು, ಅವರ ಜಮೀನನ್ನು ಸ್ವಾಧೀನಪಡಿಸಿಕೊಂಡಿರುವುದಕ್ಕೆ ಬದಲೀ ಸೈಟುಗಳನ್ನು ಮುಡಾ ನೀಡಿದೆ ಎಂದು ಶಿವಲಿಂಗೇಗೌಡ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತಾಡಿದ ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ತನಗೆ ಮಾಹಿತಿಯಿಲ್ಲ ಎಂದು ಹೇಳಿದರು. ಮುಡಾ ಹಗರಣದ ಬಗ್ಗೆ ಮಾತಾಡಿದ ಅವರು ಮಾಧ್ಯಮಗಳಲ್ಲಿ ಸಿದ್ದರಾಮಯ್ಯನವರ ಆಸ್ತಿ ಈಡಿ ಜಪ್ತು ಮಾಡಿದೆ ಅಂತ ಬರುತ್ತಿದೆ? ಅವರ ಆಸ್ತಿ ಜಪ್ತಿ ಆಗಿದೆಯಾ? ಅವರ 3.14 ಎಕರೆ ಜಮೀನು ಬದಲಿಗೆ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ 50:50 ಅನುಪಾತದಲ್ಲಿ 14 ಸೈಟುಗಳನ್ನು ನೀಡಿದ್ದು ತಪ್ಪು ಅಂತಾದರೆ ಸೈಟು ನೀಡಿದ ಬಿಜೆಪಿಯನ್ನು ಮೊದಲು ಪ್ರಶ್ನೆ ಮಾಡಿ, ಮಾನವೀಯತೆಯ ದೃಷ್ಟಿಯಿಂದ ಸೈಟುಗಳನ್ನು ವಾಪಸ್ಸು ನೀಡಿರುವ ಸಿದ್ದರಾಮಯ್ಯರನ್ನು ಯಾಕೆ ಟಾರ್ಗೆಟ್ ಮಾಡುತ್ತೀರಿ ಎಂದ ಅವರು ಮಾಧ್ಯಮದವರನ್ನೇ ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಏ ಪಾಂಚಾಲಿ! ಕುರುಕ್ಷೇತ್ರ ನಾಟಕದ ಭೀಮನ ಪಾತ್ರದ ಡೈಲಾಗ್ ಹೇಳಿದ ಮಿಂಚಿದ ಶಾಸಕ ಶಿವಲಿಂಗೇಗೌಡ
Published on: Jan 20, 2025 05:26 PM
Latest Videos