ಹಣಕಾಸು ಆಯೋಗಗಳನ್ನು ಪ್ರಧಾನಿ ನರೇಂದ್ರ ಮೋದಿ ರಚಿಸಿದ್ದಲ್ಲ, ಅವುಗಳ ಅಸ್ತಿತ್ವ 1952ರಿಂದ ಇದೆ: ಕುಮಾರಸ್ವಾಮಿ
ಎರಡು ಬಾರಿ ತಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ, ಎರಡನೇ ಅವಧಿಯಲ್ಲಿ ₹25ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೆ, ಮೊದಲ ಅವಧಿಯಲ್ಲಿ ಅದೆಷ್ಟೋ ಶಾಲೆಗಳನ್ನು ನಿರ್ಮಿಸಿದೆ, ರಸ್ತೆಗಳ ಕಾಮಗಾರಿ ಕೈಗೆತ್ತಿಕೊಂಡಿದ್ದೆ ಮತ್ತು ಜೆಲ್ಲಿ ರಾಜ್ಯದಲ್ಲಿ ಸಿಗುವಂತಾಗಿದ್ದು ತನ್ನ ಅವಧಿಯಲ್ಲೇ ಎಂದು ಹೇಳಿದ ಕುಮಾರಸ್ವಾಮಿ; ತಾನ್ಯಾವತ್ತೂ ನೆರವಿಗಾಗಿ ಕೇಂದ್ರ ಸರ್ಕಾರದ ಮುಂದೆ ಕೈ ಚಾಚಿರಲಿಲ್ಲ ಎಂದರು.
ಮೈಸೂರು: ಕೇಂದ್ರದಿಂದ ಸೂಕ್ತವಾಗಿ ಅನುದಾನ ಸಿಗುತ್ತಿಲ್ಲವೆಂದು ಹೇಳುವುದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು, ಯಾವ್ಯಾವ ರಾಜ್ಯಕ್ಕೆ ಎಷ್ಟೆಷ್ಟು ಅನುದಾನ ನೀಡಬೇಕೆಂದು ಹಣಕಾಸು ಆಯೋಗ ನಿರ್ಧರಿಸುತ್ತದೆಯೇ ಹೊರತು ಕೇಂದ್ರ ಸರ್ಕಾರವಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಹಣಕಾಸು ಆಯೋಗಗಳ ರಚನೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಲ್ಲ, 1952 ರಿಂದ ನಡೆದುಕೊಂಡು ಬಂದಿರುವ ಪದ್ಧತಿ ಇದು, ಆಗ ಪ್ರಧಾನ ಮಂತ್ರಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ಮೊದಲ ಹಣಕಾಸು ಆಯೋಗ ರಚಿಸಿದ್ದು, ಆಯೋಗಗಳಿಂದ ತಾರತಮ್ಯ ನಡೆಯುತ್ತಿದ್ದರೆ ಯುಪಿಎ ಸರ್ಕಾರ ಇದ್ದಾಗ ಯಾಕೆ ಅದನ್ನು ಸರಿಮಾಡಿಕೊಳ್ಳಲಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಿರೇಮಠ ಕೇತಗಾನಹಳ್ಳಿ ಜಮೀನು ವಿಷಯ ಮಾತಾಡಿದ್ದಾರೆ, ಅದರೆ ನನಗ್ಯಾವುದೇ ನೋಟೀಸ್ ಬಂದಿಲ್ಲ: ಕುಮಾರಸ್ವಾಮಿ