ಹಿರೇಮಠ ಕೇತಗಾನಹಳ್ಳಿ ಜಮೀನು ವಿಷಯ ಮಾತಾಡಿದ್ದಾರೆ, ಅದರೆ ನನಗ್ಯಾವುದೇ ನೋಟೀಸ್ ಬಂದಿಲ್ಲ: ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರದ ಆದೇಶ ಮೇರೆಗೆ ಕೆಲ ಅಧಿಕಾರಿಗಳು ತಾನು ಖರೀದಿಸಿರುವ ಜಮೀನಿನ ಸರ್ವೇ ಮಾಡಲು ಹೋಗಿದ್ದಾರೆ, ಆದರೆ ತನ್ನ ಜಮೀನು ಪ್ರವೇಶಿಸುವ ಮೊದಲು ನೋಟೀಸ್ ಕೊಟ್ಟಿಲ್ಲ, ಸರ್ವೇ ಮಾಡಲು ಬಂದವರಿಗೆ ನೋಟೀಸ್ ಎಲ್ಲಿದೆ ಅಂತ ಕೇಳಿದರೆ, ಮೂರು ದಿನಗಳ ಹಿಂದಿನ ದಿನಾಂಕ ನಮೂದಿಸಿದ ನೋಟೀಸನ್ನು ತೆಗೆದುಕೊಂಡು ಅವರು ವಾಪಸ್ಸು ಬಂದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ತಾನು ಯಾವ ಭೂಮಿಯನ್ನೂ ನುಂಗಿಲ್ಲ ಕಬಳಿಸಿಲ್ಲ, 40 ವರ್ಷಗಳ ಹಿಂದೆ ಖರೀದಿಸಿದ್ದ ಜಮೀನನ್ನು ಈಗಿನ ಸರ್ಕಾರ ತನಿಖೆ ಮಾಡಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. 1986 ರಲ್ಲಿ ಸಿಎಂ ಲಿಂಗಪ್ಪ ಮತ್ತು ರಾಮಚಂದ್ರ ಹೆಸರಿನ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಇದೇ ಜಮೀನು ವಿಷಯದಲ್ಲಿ ಆಗಿನ ಪ್ರಧಾನ ಮಂತ್ರಿ, ಗೃಹ ಮಂತ್ರಿಯವರಿಗೆ ಪತ್ರ ಬರೆದಿದ್ದರು, ತಮ್ಮ ದೂರಿನಲ್ಲಿ ಅವರು ಖರೀದಿಸಿದ್ದಾರೆ ಅಂತ ಹೇಳಿದ್ದರೇ ಹೊರತು ಕಬಳಿಸಿದ್ದಾರೆ ಅಂತ ಹೇಳಿರಲಿಲ್ಲ ಎಂದು ಹೇಳಿದ ಕುಮಾರಸ್ವಾಮಿ, ತಾನು ಕೇತಗಾನಹಳ್ಳಿಯಲ್ಲಿ ಖರೀದಿಸಿದ ಭೂಮಿಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಸಿಲ್ಲ ಎಂದರು. ರಾಜ್ಯದ ಸಂಪತ್ತನ್ನು ರಕ್ಷಿಸುವವನ ಹಾಗೆ ಪೋಸು ನೀಡುವ ಎಸ್ ಆರ್ ಹಿರೇಮಠ ಜಮೀನು ವಿಷಯವನ್ನು ಪ್ರಸ್ತಾಪಿಸಿದ್ದಾರೆ, ಹೈಕೋರ್ಟ್ ನಿಂದ ತನಗೆ ಯಾವುದೇ ನೋಟೀಲ್ ಬಂದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾನು 1985ರಲ್ಲಿ ಖರೀದಿಸಿದ 45 ಎಕರೆ ಜಮೀನಿನ ಬಗ್ಗೆ ತನಿಖೆ ನಡೆಸಲು ಸರ್ಕಾರ ಒಂದು ಎಸ್ಐಟಿ ರಚಿಸಿದೆ: ಕುಮಾರಸ್ವಾಮಿ