ನಾನು 1985ರಲ್ಲಿ ಖರೀದಿಸಿದ 45 ಎಕರೆ ಜಮೀನಿನ ಬಗ್ಗೆ ತನಿಖೆ ನಡೆಸಲು ಸರ್ಕಾರ ಒಂದು ಎಸ್ಐಟಿ ರಚಿಸಿದೆ: ಕುಮಾರಸ್ವಾಮಿ
ಮುಡಾ ಪ್ರಕರಣದಲ್ಲಿ ತನಿಖೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿಗೆ ಕ್ಲೀನ್ ಚಿಟ್ ನೀಡಿರುವ ವಿಷಯದಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಲೋಕಾಯುಕ್ತ ಅಧಿಕಾರಿಗಳಿಂದ ಹೆಚ್ಚಿನದೇನು ನಿರೀಕ್ಷೆ ಮಾಡುವುದು ಸಾಧ್ಯವಿತ್ತು? ಅವರು ಬೇರೆ ರೀತಿಯ ನಿರ್ಣಯಕ್ಕೆ ಬರಬಹುದು ಅಂತ ನಾನ್ಯಾವತ್ತೂ ಅಂದುಕೊಂಡಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಹಾಸನ: ಇಲ್ಲಿಗೆ ಇದು ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಕೇಂದ್ರ ಹೆಚ್ ಡಿ ಕುಮಾರಸ್ವಾಮಿ ತಾವು 1985ರಲ್ಲಿ ಇನ್ನೂ ಸಿನಿಮಾ ಹಂಚಿಕೆದಾರನಾಗಿದ್ದಾಗ ಖರೀದಿಸಿದ್ದ 45 ಎಕರೆ ಜಮೀನಿನ ಬಗ್ಗೆ ಮಾತಾಡಿದರು. ಅದನ್ನು ತಾನು ಕಷ್ಟಪಟ್ಟು ಸಂಪಾದಿಸಿದ್ದೇನೆ, ಆದರೆ ಅದರಲ್ಲಿ ಅವ್ಯವಹಾರ ನಡೆದಿದೆ ಅಂತ ಸಿದ್ದರಾಮಯ್ಯ ಸರ್ಕಾರ ಐದು ಅಧಿಕಾರಿಗಳನ್ನೊಳಗೊಂಡ ಎಸ್ಐಟಿ ರಚನೆ ಮಾಡಿ ತನಿಖೆ ನಡೆಸುವಂತೆ ಹೇಳಿದೆ. ತನಿಖೆಗೆ ತನ್ನದೇನೂ ಅಭ್ಯಂತರವಿಲ್ಲ ಆದರೆ ಎಸ್ಐಟಿ ಅಧಿಕಾರಿಗಳು ತನಗೆ ನೋಟೀಸ್ ನೀಡದೆ ಜಮೀನು ಪ್ರವೇಶ ಮಾಡುತ್ತಿದ್ದಾರೆ. ಸರ್ಕಾರ ಯಾವ ತನಿಖೆಯನ್ನಾದರೂ ಮಾಡಿಸಲಿ, ತನ್ನನೇನೂ ಅವರು ಮಾಡಕ್ಕಾಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಾವೇರಿ: ಹಾಸಿಗೆ ಹಿಡಿದ ಮಗನ ಚಿಕಿತ್ಸೆಗೆ ಕುಮಾರಸ್ವಾಮಿ ಬಳಿ ಸಹಾಯ ಕೇಳಿದ ತಾಯಿ