ಬಿಜೆಪಿಯಂತೆ ಕಾಂಗ್ರೆಸ್ ಪಕ್ಷದಲ್ಲಿ ಅಶಿಸ್ತು, ಬಣ ಬಡಿದಾಟ ಇಲ್ಲ, ಭಿನ್ನಮತವಿದೆ: ಕೆಎನ್ ರಾಜಣ್ಣ, ಸಚಿವ
ರಾಜಣ್ಣ ಮೈಸೂರಿನ ಉದಯಗಿರಿ ಪೊಲೀಸರನ್ನು ಏಕವಚನದಲ್ಲಿ ಸಂಬೋಧಿಸಿದ್ದು, ಬೈದಿದ್ದು ಬಹಳಷ್ಟು ಚರ್ಚೆಯಾಗುತ್ತಿದೆ. ಇಲ್ಲೂ ಅವರು ಯತ್ನಾಳ್ ವಿಷಯದಲ್ಲಿ ಅವರು ಮಾಡ್ತಾನೆ, ಬೈತಾನೆ ಅಂತ ಹೇಳಿ ನಂತರ ತಮ್ಮ ಟೋನ್ ಬದಲಿಸಿ ಅವರು ಇವರು ಅಂತ ಹೇಳುತ್ತಾರೆ ಮತ್ತು ಯತ್ನಾಳ್ ಹಿರಿಯ ನಾಯಕರು, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಿನಿಸ್ಟ್ರಾಗಿದ್ದವರು ಅಂತೆಲ್ಲ ಗುಣಗಾನ ಮಾಡುತ್ತಾರೆ.
ತುಮಕೂರು: ಕಾಂಗ್ರೆಸ್ ಪಕ್ಷದಲ್ಲಿ ಬಿಜೆಪಿಯಲ್ಲಿರುವಂತೆ ಗುಂಪುಗಾರಿಕೆ, ಅಶಿಸ್ತು ಇಲ್ಲ ಅದರೆ ಭಿನ್ನಮತ ಇದೆ ಎಂದು ಸಚಿವ ಕೆಎನ್ ರಾಜಣ್ಣ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಮನಬಂದಂತೆ ಪಕ್ಷದ ಅಧ್ಯಕ್ಷ ವಿಜಯೇಂದ್ರರನ್ನು ಬಯ್ಯುತ್ತಾರೆ, ಮೋಸಗಾರ, ಸುಳ್ಳುಗಾರ, ಪೋರ್ಜರಿ ಮಾಡಿದವನು ಅಂತೆಲ್ಲ ಹೇಳಿದರೂ ಒಂದು ನೋಟೀಸ್ ಕೊಡುವ ಯೋಗ್ಯತೆ ವಿಜಯೇಂದ್ರಗಿಲ್ಲ, ಅವರ ಸ್ಥಾನನಲ್ಲಿ ತಾನಿದ್ದಿದ್ದರೆ ಮರುದಿನ ಬೆಳಗ್ಗೆಯೇ ಯತ್ನಾಳ್ ರನ್ನು ಪಕ್ಷದಿಂದ ಸಸ್ಪೆಂಡ್ ಮಾಡುತ್ತಿದ್ದೆ ಎಂದು ರಾಜಣ್ಣ ಹೇಳುತ್ತಾರೆ. ಸಚಿವ ರಾಜಣ್ಣ ತಮ್ಮ ಮಿನಿಸ್ಟ್ರಿಗೆ ಸಂಬಂಧಿಸಿದ ಮಾತುಗಳಾಡಿದ್ದ್ದು ಕನ್ನಡಿಗರು ಕೇಳಿದ್ದಾರೆಯೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಾಸನ ಉಸ್ತವಾರಿಯಿಂದ ಬಿಡುಗಡೆ ಕೋರಿ ಪತ್ರ ನೀಡಿದ್ದೇನೆ: ಕೆಎನ್ ರಾಜಣ್ಣ