ಅತ್ತೆಯನ್ನು ಸಾಯಿಸಬೇಕಿದೆ ಮಾತ್ರೆ ಬರೆದುಕೊಡಿ ಅಂತ ವೈದ್ಯರೊಬ್ಬರಿಗೆ ಸಂದೇಶ ಕಳಿಸಿದ ಬೆಂಗಳೂರಿನ ಸೊಸೆ!
ವೈದ್ಯ ಸುನೀಲ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿರುತ್ತಾರಂತೆ, ಹಾಗಾಗಿ ತನ್ನನ್ನು ಟ್ರ್ಯಾಪ್ ಮಾಡಲು ಯಾರಾದರೂ ಹುನ್ನಾರ ನಡೆಸಿದ್ದಾರೆಯೇ ಎಂಬ ಸಂಶಯವೂ ಅವರಿಗಿದೆ. ಸಹನಾಗೆ ನಿಜಕ್ಕೂ ತನ್ನ ಅತ್ತೆಯ ಮೇಲೆ ಕೋಪವಿದ್ದರೆ ಹಿರಿಯ ಜೀವಿಯನ್ನು ಸಾಯಿಸುವಷ್ಟು ಕೀಳುಮಟ್ಟಕ್ಕೆ ಆಕೆ ಇಳಿಯಬಲ್ಲಳೆ? ಅಥವಾ ಸೊಸೆ ಶ್ರೀಮಂತೆಯಾಗಿದ್ದು ಅಸ್ತಿಯನ್ನು ಲಪಟಾಯಿಸುವ ಉದ್ದೇಶವೇ? ಪೊಲೀಸರೇ ಹೇಳಬೇಕು.
ಬೆಂಗಳೂರು: ಅತ್ತೆಯನ್ನು ಸೊಸೆ ದ್ವೇಷಿಸುವುದು; ಅತ್ತೆ ಸೊಸೆಯ ಬಗ್ಗೆ ತಾತ್ಸಾರ ಭಾವ ತಳೆಯುವುದು ಹೊಸದೇನಲ್ಲ, ಅಂದಕಾಲತ್ತಿಲ್ ನಡೆದುಕೊಂಡು ಬಂದಿರುವ ಸಂಗತಿಯಿದು. ಆದರೆ, ಸಂಜಯನಗರದ ವೈದ್ಯರೊಬ್ಬರಿಗೆ ಸಹನಾ ಹೆಸರಿನ ಮಹಿಳೆ ಕಳಿಸಿದ ಸಂದೇಶ ನಾಗರಿಕ ಸಮಾಜವನ್ನು ಆತಂಕಕ್ಕೀಡು ಮಾಡುತ್ತದೆ. ಸುನೀಲ್ ಕುಮಾರ ಹೆಸರಿನ ವೈದ್ಯನಿಗೆ ಸಹನಾ ಸೋಶಿಯಲ್ ಮಿಡಿಯಾ ಮೂಲಕ ಸಂದೇಶವೊಂದನ್ನು ಕಳಿಸಿ ನನ್ನ ಅತ್ತೆ ತುಂಬಾ ಕಿರುಕುಳ ನೀಡುತ್ತಾಳೆ, ಅಕೆಯನ್ನು ಸಾಯಿಸಬೇಕಿದೆ, ದಯವಿಟ್ಟು ಮಾತ್ರೆ ಬರೆದುಕೊಡಿ ಅಂತ ಕೇಳಿದ್ದಾಳೆ. ಗಾಬರಿಗೊಂಡ ವೈದ್ಯ ಆಕೆಗೆ ಫೋನ್ ಮಾಡಿ ಇದು ಸರಿಯಲ್ಲ ಅಂತ ತಿಳಿಹೇಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಸಹನಾ, ಆಯ್ತು ಡಾಕ್ಟರ್ ಸಾರಿ ಎಂದಿದ್ದಾಳೆ. ಇದೆಲ್ಲ ನಡೆದಿದ್ದು ಸೋಮವಾರ ಮಧ್ಯಾಹ್ನ 2 ಗಂಟೆಗೆ. ಇದ್ಯಾಕೋ ಸರಿ ಕಾಣುತ್ತಿಲ್ಲ ಅಂತ ವೈದ್ಯ ಸುನೀಲ್ ಕುಮಾರ್ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು: ಬರ್ತ್ ಡೇ ಸಂಭ್ರಮಾಚರಣೆಯಲ್ಲಿ ಏರ್ ಫೈರ್, ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದೇ ಮುಳುವಾಯ್ತು!