ಚಾಮರಾಜನಗರ: ಒಂಟಿ ಸಲಗದ ಮುಂದೆ ನಿಂತು ಪ್ರವಾಸಿಗರ ಹುಚ್ಚಾಟ
ಬಂಡೀಪುರ-ಊಟಿ ರಸ್ತೆಯಲ್ಲಿ ಪ್ರವಾಸಿಗರು ಕಾಡಾನೆ ಮುಂದೆ ನಿಂತು ಫೋಟೋ ಕ್ಲಿಕ್ಕಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಕೂಡ ಓರ್ವ ಪ್ರವಾಸಿಗ ಒಂಟಿ ಸಲಗದ ಮುಂದೆ ಚೇಷ್ಟೆ ನಡೆಸಿ 25 ಸಾವಿರ ರೂ. ದಂಡ ಕಟ್ಟಿದ್ದನು. ಆದರೂ, ಬಗ್ಗದ ಕೆಲ ಪ್ರವಾಸಿಗರು ದಿನ ನಿತ್ಯ ಬಂಡೀಪುರ ಊಟಿ ರಸ್ತೆಯಲ್ಲಿ ಕಾಣಿಸಿ ಕೊಳ್ಳುವ ಕಾಡಾನೆಯ ಮುಂದೆ ಪುಂಡಾಟವಾಡುತ್ತಿದ್ದಾರೆ.
ಚಾಮರಾಜನಗರ, ಫೆಬ್ರವರಿ 19: ಬಂಡೀಪುರ-ಊಟಿ ರಸ್ತೆಯಲ್ಲಿ (Bandipur-Ooty Road) ಪ್ರವಾಸಿಗರ ಪುಂಡಾಟ ಮತ್ತೆ ಮುಂದುವರೆದಿದೆ. ಪ್ರವಾಸಿಗರು ಒಂಟಿ ಸಲಗದ (Elephant) ಮುಂದೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಕೂಡ ಓರ್ವ ಪ್ರವಾಸಿಗ ಒಂಟಿ ಸಲಗದ ಮುಂದೆ ಚೇಷ್ಟೆ ನಡೆಸಿ 25 ಸಾವಿರ ರೂ. ದಂಡ ಕಟ್ಟಿದ್ದನು. ಆದರೂ, ಬಗ್ಗದ ಕೆಲ ಪ್ರವಾಸಿಗರು ದಿನ ನಿತ್ಯ ಬಂಡೀಪುರ ಊಟಿ ರಸ್ತೆಯಲ್ಲಿ ಕಾಣಿಸಿ ಕೊಳ್ಳುವ ಕಾಡಾನೆಯ ಮುಂದೆ ಪುಂಡಾಟವಾಡುತ್ತಿದ್ದಾರೆ. ಇದೆ ರೀತಿ ಮುಂದುವರೆದರೆ ಪ್ರಾಣಹಾನಿ ಆಗುವ ಸಂಭವವಿದೆ. ಸದ್ಯ ಪ್ರವಾಸಿಗನ ಕುಚೇಷ್ಟೆಯ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋ ಆಧಾರದ ಮೇಲೆ ಅರಣ್ಯ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಘಟನೆ ನಡೆದಿದೆ.