ಯೋಗಿ ಆದಿತ್ಯನಾಥ್ ಅವರಲ್ಲಿರುವ ಎದೆಗಾರಿಕೆ, ಧಾಡಸಿತನ ಸಿದ್ದರಾಮಯ್ಯ ಅವರಲ್ಲಿ ಯಾಕಿಲ್ಲ? ಪ್ರತಾಪ್ ಸಿಂಹ
ದಟ್ಟ ದಾರಿದ್ರ್ಯ ಆವರಿಸಿಕೊಂಡಿದ್ದ ಉತ್ತರ ಪ್ರದೇಶವನ್ನು ಒಂದು ಮಾದರಿ ರಾಜ್ಯವಾಗಿ ಪರಿವರ್ತಿಸಿದ ಯೋಗಿ ಆದಿತ್ಯನಾಥ್ ಅವರ ಹಾಗೆ ಆಡಳಿತ ನಡೆಸಬೇಕಾದರೆ ಧಾಡಸಿತನ, ಎಂಟೆದೆ ಮತ್ತು ಎದೆಗಾರಿಕೆ ಬೇಕು, ಕರ್ನಾಟಕದ ಮುಖ್ಯಮಂತ್ರಿಗೆ ಅದಿಲ್ಲ ಅಂತಾದ್ರೆ ಇನ್ನು ಗೃಹ ಸಚಿವ ಪರಮೇಶ್ವರ್ ಅವರಲ್ಲಿ ಎಲ್ಲ್ಲಿಂದ ಬರಬೇಕು ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಗಿ ಹೇಳಿದರು.
ಮೈಸೂರು: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರವನ್ನು ತಾಲಿಬಾನಿ ಸರ್ಕಾರಕ್ಕೆ ಹೋಲಿಸಿ ಅದರ ಮುಖ್ಯಸ್ಥ ಸಿದ್ದರಾಮಯ್ಯ ಅಂತ ಹೇಳಿದರು. ಮುಸಲ್ಮಾನರು ಪ್ರೊಟೆಕ್ಷನ್ ಕೇಳಿದರೆ ಸರ್ಕಾರ ನೀಡಲಿ ಯಾರು ಬೇಡವೆನ್ನುತ್ತಾರೆ, ಅದರೆ ಅವರು ದುಷ್ಕೃತ್ಯ ಗಳನ್ನು ನಡೆಸಿದಾಗ ಬಂಧಿಸಿ ದಂಡಿಸುವುದನ್ನು ಬಿಟ್ಟು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಅವರನ್ನು ತಡೆಯುವುದು ಹೇಗೆ? ಅವರಿಗೆ ಹೆದರಿ ಹಿಂದೂಗಳು ಮನೆ ಬಿಟ್ಟು ಬೇರೆ ಕಡೆ ಹೋಗಬೇಕೇ? ಅವರು ಹೊಗೋದಾದರೂ ಎಲ್ಲಿಗೆ ? ಮುಸಲ್ಮಾನರಿಗಾದರೆ 57 ಇಸ್ಲಾಮಿಕ್ ರಾಷ್ಟ್ರಗಳಿವೆ, ಹಿಂದೂಗಳಿಗೆ ಯಾವು ದೇಶವಿದೆ? ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹಾಗೆ ಸರ್ಕಾರ ನಡೆಸಿದರೆ ಮುಸಲ್ಮಾನರು ಹದ್ದುಬಸ್ತಿನಲ್ಲಿರುತ್ತಾರೆ ಎಂದು ಸಿಂಹ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದ ಸ್ವಪಕ್ಷದ ಮುಖಂಡರು, ಉಚ್ಚಾಟನೆಗೆ ಪತ್ರ..!

‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ

ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು

ಫ್ಲೈಓವರ್ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ

ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
