ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಗೆ ನೀಡುತ್ತಿದ್ದ ಹಣದ ಬದಲು ಫೆಬ್ರುವರಿ ತಿಂಗಳಿಂದ ಅಕ್ಕಿಯೇ ಸಿಗಲಿದೆ: ಕೆಹೆಚ್ ಮುನಿಯಪ್ಪ
ಸಚಿವರು ಹೇಳುವ ಪ್ರಕಾರ ಅನ್ನಭಾಗ್ಯ ಯೋಜನೆ ಅಡಿ 4.5 ಕೋಟಿ ಜನ ಫಲಾನುಭವಿಗಳಿದ್ದಾರೆ, ಕೇಂದ್ರ ಆಹಾರ ನಿಗಮದಿಂದ ಪ್ರತಿತಿಂಗಳು 2ಲಕ್ಷ ಟನ್ ಗಳಷ್ಟು ಅಕ್ಕಿ ಬೇಕಾಗುತ್ತದೆ ಮತ್ತು ನಿಗಮವು ಪ್ರತಿ ಕೇಜಿಗೆ 22.50ಯಂತೆ ಅಕ್ಕಿ ಕೊಡಲಿದೆ, ಫಲಾನುಭವಿಗಳು ಜನೆವರಿವರೆಗೆ 5 ಕೆಜಿ ಅಕ್ಕಿಗೆ ಹಣ ಪಡೆಯಲಿದ್ದಾರೆ ಮತ್ತು ಫೆಬ್ರುವರಿಯಿಂದ ಅವರಿಗೆ ಅಕ್ಕಿ ಸಿಗಲಿದೆ ಎಂದು ಸಚಿವ ಮುನಿಯಪ್ಪ ಹೇಳಿದರು.
ಬೆಂಗಳೂರು: ಅಕ್ಕಿ ಬದಲು ರೊಕ್ಕ, ರೊಕ್ಕದ ಬದಲು ಅಕ್ಕಿ-ಹೌದು, ಕರ್ನಾಟಕ ಸರ್ಕಾರ ಅನ್ನಭಾಗ್ಯ ಸ್ಕೀಮ್ ನಡಿ 5 ಕೆಜಿ ಅಕ್ಕಿ ಬದಲು ಹಣ ನೀಡುವುದನ್ನು ಫೆಬ್ರುವರಿ ತಿಂಗಳಿಂದ ನಿಲ್ಲಿಸಲಿದೆ. ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಅಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಹೆಚ್ ಮುನಿಯಪ್ಪ, ಅಕ್ಕಿಯ ದಾಸ್ತಾನು ಸಾಕಷ್ಟಿದ್ದರೂ ಕೇಂದ್ರ ಸರ್ಕಾರ ಅದನ್ನು ನೀಡಲು ನಿರಾಕಸಿದ್ದರಿಂದ 5 ಕೆಜಿ ಅಕ್ಕಿಯ ಬದಲು ಹಣ ನೀಡಲಾಗುತಿತ್ತು, ಆದರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಅಕ್ಕಿ ನೀಡುವ ಭರವಸೆಯನ್ನು ಕೊಟ್ಟಿರುವುದರಿಂದ ಫೆಬ್ರುವರಿ ತಿಂಗಳಿಂದ ಅನ್ನಭಾಗ್ಯ ಫಲಾನುಭವಿಗಳಿಗೆ ಪ್ರಣಾಳಿಕೆಯಲ್ಲಿ ವಾಗ್ದಾನ ಮಾಡಿದಂತೆ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅನ್ನಭಾಗ್ಯ ಯೋಜನೆ: ಕಲಬುರಗಿ ಮಹಿಳೆ ಹೇಳುವುದನ್ನು ಕೇಳಿದರೆ ಸಚಿವ ಮುನಿಯಪ್ಪ ಹೇಳಿದ್ದು ಸುಳ್ಳು ಅನಿಸುತ್ತದೆ!

ರೈತರಿಗೆ ಡಬಲ್ ಗುಡ್ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!

VIDEO: ಕೆಎಲ್ ರಾಹುಲ್ ಮಿಮಿಕ್ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ

ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ

ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
