ಅನ್ನಭಾಗ್ಯ ಯೋಜನೆ: ಕಲಬುರಗಿ ಮಹಿಳೆ ಹೇಳುವುದನ್ನು ಕೇಳಿದರೆ ಸಚಿವ ಮುನಿಯಪ್ಪ ಹೇಳಿದ್ದು ಸುಳ್ಳು ಅನಿಸುತ್ತದೆ!
ನಿನ್ನೆ ದೇವನಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆಹೆಚ್ ಮುನಿಯಪ್ಪ ಅನ್ನಭಾಗ್ಯ ಸ್ಕೀಮಿಗೆ ಸಂಬಂಧಿಸಿದಂತೆ ಕೇವಲ ಎರಡು ತಿಂಗಳು ಹಣ ಬಾಕಿಯಿದೆ ಎಂದು ಹೇಳಿದ್ದರು. ಆದರೆ ವಾಸ್ತವಾಂಶವನ್ನು ಕಲಬುರಗಿಯ ಮಹಿಳೆ ತೆರೆದಿಡುತ್ತಿದ್ದಾರೆ. ರೇಷನ್ ಅಂಗಡಿಯವನು ತೂಕದಲ್ಲಿ ಮೋಸ ಮಾಡಿ ಮೂರು ಕೆಜಿ ಅಕ್ಕಿ ಬದಲಿಗೆ ಕೇವಲ ಎರಡು ಕೆಜಿ ಮಾತ್ರ ಕೊಡುತ್ತಾನಂತೆ.
ಕಲಬುರಗಿ: ಸಿದ್ದರಾಮಯ್ಯ ಸರ್ಕಾರ ದಿವಾಳಿಯೆದ್ದಿದೆ, ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಬೊಕ್ಕಸದಲ್ಲಿ ಹಣವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದು ಸರಿಯೆನಿಸುತ್ತಿದೆ. ನಿನ್ನೆ ಹುಬ್ಬಳ್ಳಿಯ ಮಹಿಳೆಯರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದರು, ಇವತ್ತು ಕಲಬುರಗಿ ಬಸವನಗರದ ಮಹಿಳೆಯರು ಅದನ್ನೇ ಮಾಡುತ್ತಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಈ ಮಹಿಳೆ ಮೂರು ತಿಂಗಳಿಂದ ಗೃಹಲಕ್ಷ್ಮಿಯೋಜನೆ ಹಣ ಬಂದಿಲ್ಲ ಮತ್ತು 5 ತಿಂಗಳಿಂದ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಹಣ ಬಂದಿಲ್ಲ ಎಂದು ಹೇಳುತ್ತಾರೆ. ಕೊಡುವ 5 ಕೆಜಿ ರೇಷನ್ ನಲ್ಲಿ 3 ಕೆಜಿ ಅಕ್ಕಿ ಮತ್ತು 2 ಕೆಜಿ ಜೋಳ ಸಿಗುತ್ತಿದೆ, ಮಾನವ ಸೇವನೆಗೆ ಯೋಗ್ಯವಲ್ಲದ ಜೋಳವನ್ನು ಅವರು ಕೊಡುತ್ತಿದ್ದಾರೆ ಎಂದು ಮಹಿಳೆ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅನ್ನಭಾಗ್ಯ ಸ್ಕೀಮಿನಲ್ಲೂ ಫಲಾನುಭವಿಗಳಿಗೆ 4 ತಿಂಗಳಿಂದ ಸಿಕ್ಕಿಲ್ಲ ಹಣ, ತಪ್ಪು ಮಾಹಿತಿಯೆಂದ ಸಚಿವ ಮುನಿಯಪ್ಪ