ಅನ್ನಭಾಗ್ಯ ಸ್ಕೀಮಿನಲ್ಲೂ ಫಲಾನುಭವಿಗಳಿಗೆ 4 ತಿಂಗಳಿಂದ ಸಿಕ್ಕಿಲ್ಲ ಹಣ, ತಪ್ಪು ಮಾಹಿತಿಯೆಂದ ಸಚಿವ ಮುನಿಯಪ್ಪ
ದೇವನಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಮುನಿಯಪ್ಪ, ತಮ್ಮ ಮಧ್ಯಸ್ಥಿಕೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಕಡಿಮೆಯಾಗಿದೆ ಎಂಬ ಅಂಶವನ್ನು ಅಲ್ಲಗಳೆದರು. ತಮ್ಮ ಪಕ್ಷದಲ್ಲಿ ನಾಯಕರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ, ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ನಾಯಕರು ಮಾಧ್ಯಮಗಳ ಮುಂದೆ ತೋಚಿದ್ದನ್ನು ಹೇಳುವುದು ಕನ್ನಡಿಗರು ಗಮನಿಸುತ್ತಿದ್ದಾರೆ.
ದೇವನಹಳ್ಳಿ: ಗೃಹ ಲಕ್ಷ್ಮಿ ಯೋಜನೆಯದು ಒಂದು ಕತೆಯಾದರೆ ಅನ್ನಭಾಗ್ಯ ಸ್ಕೀಮಿನದು ಮತ್ತೊಂದು. ಕರ್ನಾಟಕದಲ್ಲಿ 5ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿಗೆ ಹಣ ಸಿಗುತ್ತಿದೆ. ಆದರೆ ಅನ್ನಭಾಗ್ಯ ಸ್ಕೀಮಿನ ಫಲಾನುಭವಿಗಳು ಕಳೆದ 4-5 ತಿಂಗಳಿಂದ ಅಕ್ಕಿಯ ಹಣ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಹೌದಾ ಸರ್? ಅಂತ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಹೆಚ್ ಮುನಿಯಪ್ಪರನ್ನು ಕೇಳಿದರೆ ಇಲ್ಲ ಎಲ್ಲ ಸುಳ್ಳು, ಕೇವಲ ಎರಡು ತಿಂಗಳು ಹಣ ಮಾತ್ರ ಬಾಕಿಯಿದೆ ಅನ್ನುತ್ತಾರೆ. ಅಲ್ಲ ಸರ್ ಅಕ್ಟೋಬರ್ ಹಣ ಖಜಾನೆಗೆ ಹೋಗಿದೆಯಂತೆ ಅಲ್ಲಿಂದ 4 ತಿಂಗಳು ಹಣ ಬಾಕಿಯಿದೆಯಂತೆ ಅಂತ ಮಾಧ್ಯಮದವರು ಹೇಳಿದರೆ, ಇಲ್ಲಿಲ್ಲ ಸುಳ್ಳು ಮಾಹಿತಿ, ಎರಡು ತಿಂಗಳಿಗೊಮ್ಮೆ ಹಣ ಹಾಕಲಾಗುತಿತ್ತು, ಇನ್ನು ಮುಂದೆ ಪ್ರತಿ ತಿಂಗಳು ಹಾಕುತ್ತೇವೆ ಎಂದು ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜೀನಾಮೆ ಸಲ್ಲಿಸಲು ರೆಡಿಯಾಗಿರುವವರ ಬಗ್ಗೆ ಕಾಮೆಂಟ್ ಮಾಡಲ್ಲ; ಹೈಕಮಾಂಡ್ ತೀರ್ಪಿಗೆ ಬದ್ಧ: ಕೆಹೆಚ್ ಮುನಿಯಪ್ಪ