ನನ್ನ ಕುಟುಂಬವೊಂದನ್ನು ಬಿಟ್ಟರೆ ಬೇರೆ ಯಾರೊಂದಿಗೂ ಗೋವಾ ಪ್ರವಾಸ ಹೋಗಿಲ್ಲ: ಐಶ್ವರ್ಯ ಗೌಡ, ವಂಚನೆ ಆರೋಪಿ
ತನ್ನ ವಿರುದ್ಧ ಆರೋಪ ಮಾಡಿರುವ ಪೊಲೀಸ್ ಅಧಿಕಾರಿ ಸಿನಿಮಾವೊಂದರಿಂದ ಪ್ರೇರಿತರಾಗಿ ಜನಸೇವೆ ಮಾಡಲು ಪೊಲೀಸ್ ಇಲಾಖೆಗೆ ಬಂದಿದ್ದಾರಂತೆ, ಇಂಥ ಸೇವೆಯನ್ನು ಅವರು ಜನಸೇವೆ ಅಂದುಕೊಂಡಿರೋದು ದುರದೃಷ್ಟಕರ, ಐಶ್ವರ್ಯ ಗೌಡ ಎರಡು ತಿಂಗಳಿಂದ ಸುದ್ದಿಯಲ್ಲಿರುವುದರಿಂದ ಆಕೆಯನ್ನೇ ಟಾರ್ಗೆಟ್ ಮಾಡಲಾಗುತ್ತಿದೆ, ಶ್ರದ್ಧಾ ಗೌಡ ರೇಖಾ ಗೌಡರನ್ನು ಯಾಕೆ ಮಾಡಿಯಾರು ಎಂದು ಐಶ್ವರ್ಯ ಪ್ರಶ್ನಿಸುತ್ತಾರೆ.
ಬೆಂಗಳೂರು: ಖುದ್ದು ಐಶ್ವರ್ಯ ಗೌಡ ಹೇಳುವಂತೆ ಎರಡು ತಿಂಗಳಿಂದ ಅವರು ಸುದ್ದಿಯಲ್ಲಿದ್ದಾರೆ. ಟಿವಿ9 ಜೊತೆ ಪ್ರತ್ಯೇಕವಾಗಿ ಮಾತಾಡಿರುವ ಅವರು ಚಿನ್ನ ವಂಚನೆ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಅಧಿಕಾರಿಯೊಬ್ಬರೊಂದಿಗೆ ಗೋವಾಗೆ ಹೋಗಿದ್ದು ನಿಜವಾ ಎಂದು ನೇರವಾಗಿ ಕೇಳಿದ ಪ್ರಶ್ನೆಗೆ, ಯಾವ ಅಧಿಕಾರಿಯೊಂದಿಗೂ ಗೋವಾಗೆ ಹೋಗಿಲ್ಲ, ಇಂಥ ಅರೋಪಗಳನ್ನು ಯಾಕೆ ಮಾಡುತ್ತಾರೋ ಗೊತ್ತಿಲ್ಲ, ಇದನ್ನು ಅಧಿಕಾರಿಯ ಫ್ಯಾಮಿಲಿ ಕೇಳಿಸಿಕೊಂಡರೆ ಅಲ್ಲೂ ತಾಪತ್ರಯಗಳಳು ಶುರುವಾಗುತ್ತವೆ, ತನ್ನ ಕುಟುಂಬದ ಜೊತೆ ಬಿಟ್ರೆ ಯಾರೊಂದಿಗೂ ಗೋವಾಗೆ ಹೋಗಿಲ್ಲವೆಂದು ಹೇಳಿದರು. ಇಂಥ ಸುದ್ದಿಗಳನ್ನು ಸೃಷ್ಟಿಸುವವರಿಗೆ ಮನಸಾಕ್ಷಿ ಅನ್ನೋದಿದ್ದರೆ ಮುಂದೊಂದು ದಿನ ಖಂಡಿತವಾಗಿ ಹರ್ಟ್ ಮಾಡಲಿದೆ ಎಂದು ಐಶ್ವರ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಿನ್ನ ವಂಚನೆ ಕೇಸ್! ಐಶ್ವರ್ಯಾ ಗೌಡ ವಿರುದ್ಧ ಪೊಲೀಸ್ ಆಯುಕ್ತರಿಗೆ ಡಿಕೆ ಸುರೇಶ್ ದೂರು