AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’, ‘ಧುರಂಧರ್ 2’ ಕಾರಣಕ್ಕೆ ರಿಲೀಸ್ ದಿನಾಂಕ ಬದಲಿಸಿದ ಸಿನಿಮಾಗಳೆಷ್ಟು?

Toxic movie: ‘ಟಾಕ್ಸಿಕ್’ ಸಿನಿಮಾದ ಜೊತೆಗೆ ಮಾರ್ಚ್ 19ರಂದೇ ‘ಧುರಂಧರ್ 2’ ಸಿನಿಮಾ ಸಹ ಬಿಡುಗಡೆ ಆಗಬೇಕಿತ್ತು. ಆದರೆ ‘ಟಾಕ್ಸಿಕ್’ ಮುಂದೂಡಲ್ಪಟ್ಟಿರುವ ಕಾರಣ ಈಗ ‘ಧುರಂಧರ್ 2’ ಮಾತ್ರವೇ ಬಿಡುಗಡೆ ಆಗುತ್ತಿದೆ. ಅಸಲಿಗೆ ಮಾರ್ಚ್ 19ಕ್ಕೆ ಮತ್ತು ಅದರ ಆಸು-ಪಾಸು ಹಲವು ದಕ್ಷಿಣದ ಸಿನಿಮಾಗಳು ಬಿಡುಗಡೆ ಆಗಬೇಕಿತ್ತು. ಆದರೆ ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಕಾರಣದಿಂದಾಗಿ ಹಲವು ಸಿನಿಮಾಗಳು ಬಿಡುಗಡೆ ದಿನಾಂಕ ಬದಲಾಯಿಸಿಕೊಂಡಿದ್ದವು.

‘ಟಾಕ್ಸಿಕ್’, ‘ಧುರಂಧರ್ 2’ ಕಾರಣಕ್ಕೆ ರಿಲೀಸ್ ದಿನಾಂಕ ಬದಲಿಸಿದ ಸಿನಿಮಾಗಳೆಷ್ಟು?
Toxic And Dhurandhar
ಮಂಜುನಾಥ ಸಿ.
|

Updated on: Mar 05, 2026 | 5:42 PM

Share

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದೆ. ಮಾರ್ಚ್ 19ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಈಗ ಜೂನ್ 4ಕ್ಕೆ ಬಿಡುಗಡೆ ಆಗಲಿದೆ. ‘ಟಾಕ್ಸಿಕ್’ ಸಿನಿಮಾದ ಜೊತೆಗೆ ಮಾರ್ಚ್ 19ರಂದೇ ‘ಧುರಂಧರ್ 2’ ಸಿನಿಮಾ ಸಹ ಬಿಡುಗಡೆ ಆಗಬೇಕಿತ್ತು. ಆದರೆ ‘ಟಾಕ್ಸಿಕ್’ ಮುಂದೂಡಲ್ಪಟ್ಟಿರುವ ಕಾರಣ ಈಗ ‘ಧುರಂಧರ್ 2’ ಮಾತ್ರವೇ ಬಿಡುಗಡೆ ಆಗುತ್ತಿದೆ. ಅಸಲಿಗೆ ಮಾರ್ಚ್ 19ಕ್ಕೆ ಮತ್ತು ಅದರ ಆಸು-ಪಾಸು ಹಲವು ದಕ್ಷಿಣದ ಸಿನಿಮಾಗಳು ಬಿಡುಗಡೆ ಆಗಬೇಕಿತ್ತು. ಆದರೆ ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಕಾರಣದಿಂದಾಗಿ ಹಲವು ಸಿನಿಮಾಗಳು ಬಿಡುಗಡೆ ದಿನಾಂಕ ಬದಲಾಯಿಸಿಕೊಂಡಿದ್ದವು.

ಮಾರ್ಚ್ ತಿಂಗಳು ಸಿನಿಮಾ ಬಿಡುಗಡೆಗೆ ಒಳ್ಳೆಯ ತಿಂಗಳೆಂಬ ಅನಿಸಿಕ ಚಿತ್ರರಂಗದಲ್ಲಿದೆ. ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿಯುವ ಸಮಯ ಇದು. ಅಲ್ಲದೆ ಯುಗಾದಿ ಅಂಥಹಾ ಪ್ರಮುಖ ಹಬ್ಬವಿದೆ. ರಂಜಾನ್ ಸಹ ಇರುತ್ತದೆ. ಅಲ್ಲದೆ, ಮಾರ್ಚ್ ಮುಗಿಯಿತೆಂದರೆ ಏಪ್ರಿಲ್​​ನಲ್ಲಿ ಐಪಿಎಲ್ ಶುರುವಾಗುತ್ತದೆ, ಆಗ ಐಪಿಎಲ್ ಮುಂದೆ ದೊಡ್ಡ ಸಿನಿಮಾಗಳು ಸಹ ನಿಲ್ಲುವುದಿಲ್ಲ ಇದೇ ಕಾರಣಕ್ಕೆ ಹಲವು ಸಿನಿಮಾಗಳು ಮಾರ್ಚ್ ತಿಂಗಳಲ್ಲೇ ಬಿಡುಗಡೆ ಮಾಡುತ್ತವೆ.

ಅಂತೆಯೇ ಈ ಬಾರಿಯೂ ಸಹ ಹಲವು ದಕ್ಷಿಣದ ಸಿನಿಮಾಗಳು ಮಾರ್ಚ್ ತಿಂಗಳ ಬಿಡುಗಡೆಗೆ ಯೋಜನೆ ಹಾಕಿದ್ದವು, ಆದರೆ ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಎರಡು ಅತಿ ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿರುವ ಕಾರಣ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಅವುಗಳಲ್ಲಿ ಮುಖ್ಯದಾದುದು ರಾಮ್ ಚರಣ್ ನಟನೆಯ ‘ಪೆದ್ದಿ’. ಈ ಸಿನಿಮಾ ಮಾರ್ಚ್ 26ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಹವಾ ಹೆಚ್ಚಿದ್ದ ಕಾರಣಕ್ಕೆ ಸಿನಿಮಾದ ಬಿಡುಗಡೆ ಮುಂದೂಡಲಾಯ್ತು. ಈಗ ಈ ಸಿನಿಮಾ ಏಪ್ರಿಲ್ 20ಕ್ಕೆ ಬಿಡುಗಡೆ ಆಗಲಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಬಿಡುಗಡೆ ಮುಂದೂಡಿಕೆಗೆ ಕಾರಣವೇನು: ಒತ್ತಡಕ್ಕೇ ಮಣಿದರೇ ಯಶ್?

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಮಾರ್ಚ್ 19ರಂದೇ ಬಿಡುಗಡೆ ಆಗಬೇಕಿತ್ತು. ಆದರೆ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಇದ್ದ ಕಾರಣಕ್ಕೆ ಆ ಸಿನಿಮಾ ಮಾರ್ಚ್ 26ಕ್ಕೆ ಆಗುವುದಾಗಿ ಘೋಷಿಸಲಾಗಿತ್ತು. ಆದರೆ ಈಗ ‘ಟಾಕ್ಸಿಕ್’ ಸಿನಿಮಾ ರೇಸಿನಿಂದ ಹಿಂದೆ ಸರಿದ ಕಾರಣ ಈಗ ಮತ್ತೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಮಾರ್ಚ್ 19ಕ್ಕೇ ಬಿಡುಗಡೆ ಮಾಡಲಾಗುತ್ತಿದೆ. ‘ಧುರಂಧರ್ 2’ ಸಿನಿಮಾಕ್ಕೆ ಎದುರಾಳಿಯಾಗಿ ನಿಲ್ಲಲಿದೆ ಈ ಸಿನಿಮಾ.

ಇನ್ನು ಅಡವಿ ಶೇಷ್ ಮತ್ತು ಮೃಣಾಲ್ ಠಾಕೂರ್ ನಟನೆಯ ‘ಡಕೈಟ್’ ಸಿನಿಮಾ ಮಾರ್ಚ್ 19ರಂದೇ ಬಿಡುಗಡೆ ಆಗಬೇಕಿತ್ತು. ‘ನಾವು ದೊಡ್ಡ ಸಿನಿಮಾದ ಎದುರೇ ಬಿಡುಗಡೆ ಮಾಡಿ ಗೆಲ್ಲುತ್ತೇವೆ ಎಂದು ಅಡವಿ ಶೇಷ್ ಆತ್ಮವಿಶ್ವಾಸದಿಂದ ಹೇಳಿದ್ದರು. ಆದರೆ ಆ ಬಳಿಕ ವಾಸ್ತವ ಅರಿವಾಗಿ ಸಿನಿಮಾದ ಬಿಡುಗಡೆ ಮುಂದಕ್ಕೆ ಹಾಕಿದ್ದು, ಇದೀಗ ಈ ಸಿನಿಮಾ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ.

ನಾನಿ ನಟನೆಯ ‘ಪ್ಯಾರಡೈಸ್’ ಸಿನಿಮಾ ಸಹ ಮಾರ್ಚ್ 26ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಕಾರಣಕ್ಕೆ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದ್ದು ಸಿನಿಮಾ ಆಗಸ್ಟ್​​ನಲ್ಲಿ ಬಿಡುಗಡೆ ಆಗಲಿದೆ. ಇದೆಲ್ಲದರ ಜೊತೆಗೆ ಸ್ವತಃ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಯೇ ಮುಂದೂಡಲ್ಪಟ್ಟಿದೆ. ಮಾರ್ಚ್ 19ಕ್ಕೆ ಬಿಡುಗಡೆ ಆಗಬೇಕಿದ್ದ ಸಿನಿಮಾ ಈಗ ಜೂನ್ 4ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ಡಿಕೆಶಿ ದಿಟ್ಟ ಹೆಜ್ಜೆ
ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ಡಿಕೆಶಿ ದಿಟ್ಟ ಹೆಜ್ಜೆ
ಸರ್ಕಾರಿ ಬಸ್ ಮಾಜಿ ಚಾಲಕನ ಮನೆಯಲ್ಲಿ 28 ಕೋಟಿ ನಗದು, 15 ಕೆಜಿ ಚಿನ್ನ ಪತ್ತೆ
ಸರ್ಕಾರಿ ಬಸ್ ಮಾಜಿ ಚಾಲಕನ ಮನೆಯಲ್ಲಿ 28 ಕೋಟಿ ನಗದು, 15 ಕೆಜಿ ಚಿನ್ನ ಪತ್ತೆ
ಪ್ರಧಾನಿ ಮೋದಿ ಸ್ವಾಗತಕ್ಕೆ ಮೈಸೂರಿನಲ್ಲಿ ಭರದ ಸಿದ್ಧತೆ, ಬಿಗಿ ಭದ್ರತೆ
ಪ್ರಧಾನಿ ಮೋದಿ ಸ್ವಾಗತಕ್ಕೆ ಮೈಸೂರಿನಲ್ಲಿ ಭರದ ಸಿದ್ಧತೆ, ಬಿಗಿ ಭದ್ರತೆ
ಮಗಳ ಕೊನೆಯ ಕ್ಷಣ ನೆನೆದು ಕಣ್ಣೀರಿಟ್ಟ ತಂದೆ
ಮಗಳ ಕೊನೆಯ ಕ್ಷಣ ನೆನೆದು ಕಣ್ಣೀರಿಟ್ಟ ತಂದೆ
ಕಾವೇರಿ ವಿವಾದ: ಮಂಡ್ಯದಲ್ಲಿ ವಿಜಯ್ ‘ಜನನಾಯಗನ್’ ಪ್ರದರ್ಶನ ತಡೆಗೆ ಯತ್ನ
ಕಾವೇರಿ ವಿವಾದ: ಮಂಡ್ಯದಲ್ಲಿ ವಿಜಯ್ ‘ಜನನಾಯಗನ್’ ಪ್ರದರ್ಶನ ತಡೆಗೆ ಯತ್ನ
ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ಮೌನಕ್ಕೆ ಜಾರಿದ ದೇವೇಗೌಡರು
ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ಮೌನಕ್ಕೆ ಜಾರಿದ ದೇವೇಗೌಡರು
ಬ್ಯಾಡರಹಳ್ಳಿಯಲ್ಲಿ ಬೆಳಗಿನ ಜಾವ 3 ಗಂಟೆಗೆ ಮತ್ತೆ ಪ್ರತ್ಯಕ್ಷವಾದ ಚಿರತೆ
ಬ್ಯಾಡರಹಳ್ಳಿಯಲ್ಲಿ ಬೆಳಗಿನ ಜಾವ 3 ಗಂಟೆಗೆ ಮತ್ತೆ ಪ್ರತ್ಯಕ್ಷವಾದ ಚಿರತೆ
ಬೋವಿ ಸಮುದಾಯದ ಸ್ವಾಮೀಜಿ ಮೇಲೆ ಮುಖಂಡರಿಂದಲೇ ಹಲ್ಲೆ ಯತ್ನ
ಬೋವಿ ಸಮುದಾಯದ ಸ್ವಾಮೀಜಿ ಮೇಲೆ ಮುಖಂಡರಿಂದಲೇ ಹಲ್ಲೆ ಯತ್ನ
ಪ್ರಧಾನಿ ಮೋದಿಗೆ ಮೈಸೂರಿನಲ್ಲಿ ವಿಶೇಷ ಉಡುಗೊರೆ ಸಿದ್ಧ
ಪ್ರಧಾನಿ ಮೋದಿಗೆ ಮೈಸೂರಿನಲ್ಲಿ ವಿಶೇಷ ಉಡುಗೊರೆ ಸಿದ್ಧ
ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್
ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್