AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಬಸ್ ಮಾಜಿ ಚಾಲಕನ ಮನೆಯಲ್ಲಿನ ಖಜಾನೆ ಕಂಡು ಅಧಿಕಾರಿಗಳಿಗೆ ದಿಗ್ಭ್ರಮೆ: ಸಿಕ್ಕಿದ್ದು 28 ಕೋಟಿ ನಗದು, 15 ಕೆಜಿ ಚಿನ್ನ!

ಸರ್ಕಾರಿ ಬಸ್ ಮಾಜಿ ಚಾಲಕನ ಮನೆಯಲ್ಲಿನ ಖಜಾನೆ ಕಂಡು ಅಧಿಕಾರಿಗಳಿಗೆ ದಿಗ್ಭ್ರಮೆ: ಸಿಕ್ಕಿದ್ದು 28 ಕೋಟಿ ನಗದು, 15 ಕೆಜಿ ಚಿನ್ನ!

ಪ್ರಸನ್ನ ಹೆಗಡೆ
|

Updated on:Jul 30, 2026 | 2:36 PM

Share

ಪಶ್ಚಿಮ ಬಂಗಾಳದ ಮಾಜಿ ಸರ್ಕಾರಿ ಬಸ್ ಚಾಲಕ ಮಿನಾರ್ ಮಂಡಲ್ ಅವರ ನಿವಾಸದಲ್ಲಿ ಬೃಹತ್ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿದೆ. ಬರೋಬ್ಬರಿ 28 ಕೋಟಿ ರೂಪಾಯಿ ನಗದು ಮತ್ತು 21 ಕೋಟಿ ರೂಪಾಯಿ ಮೌಲ್ಯದ 15 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಐದು ನೋಟು ಎಣಿಸುವ ಯಂತ್ರಗಳು ಕೆಟ್ಟುಹೋಗುವಷ್ಟು ಹಣವಿದ್ದು, ಮಿನಾರ್ ಮಂಡಲ್ ಕಲ್ಲು ಕ್ವಾರಿ ಮಾಲೀಕ ಟುಲು ಮಂಡಲ್ ಹಾಗೂ ಟಿಎಂಸಿ ನಾಯಕ ಅನಬ್ರತಾ ಮಂಡಲ್ ಜೊತೆ ನಂಟು ಹೊಂದಿದ್ದಾರೆ ಎಂದು ಹೇಳಲಾಗಿದೆ.

ಕೋಲ್ಕತ್ತಾ, ಜುಲೈ 30: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಮಾಜಿ ಸರ್ಕಾರಿ ಬಸ್ ಚಾಲಕ ಮಿನಾರ್ ಮಂಡಲ್ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಬೃಹತ್ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿದೆ. ಅಧಿಕಾರಿಗಳು 28 ಕೋಟಿ ರೂಪಾಯಿ ನಗದು ಮತ್ತು 21 ಕೋಟಿ ರೂಪಾಯಿ ಮೌಲ್ಯದ 15 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ನಗದು ಹಣ ಎಣಿಸಲು ಬಳಸಿದ ಐದು ಯಂತ್ರಗಳು ಕೆಟ್ಟುಹೋದವು ಎಂದು ವರದಿಯಾಗಿದೆ. ಈ ಹಣವನ್ನು 33 ಬ್ಯಾಗ್‌ಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಈ ದಾಳಿ ಮತ್ತು ಎಣಿಕೆ ಪ್ರಕ್ರಿಯೆ ಕಳೆದ ಮಧ್ಯರಾತ್ರಿಯಿಂದ ಶುರುವಾಗಿತ್ತು. ಆರಂಭಿಕವಾಗಿ 5.5 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ತನಿಖೆ ಮುಂದುವರೆದಂತೆ ಸಂಪೂರ್ಣ 28 ಕೋಟಿ ರೂಪಾಯಿ ನಗದು ದೊರೆತಿದೆ ಎನ್ನಲಾಗಿದೆ. ಬಸ್ ಚಾಲಕನಾಗಿದ್ದ ಮಿನಾರ್ ಮಂಡಲ್ ನಂತರ ಕಲ್ಲು ಕ್ವಾರಿ ವ್ಯವಹಾರಿಯಾಗಿ ಬದಲಾಗಿದ್ದು, ಈ ಅಕ್ರಮ ಸಂಪತ್ತು ಕಲ್ಲು ಕ್ವಾರಿ ಮಾಲೀಕ ಟುಲು ಮಂಡಲ್ ಅವರಿಗೆ ಸೇರಿದ್ದಾಗಿರುವುದಾಗಿ ಮಿನಾರ್ ಮಂಡಲ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಟುಲು ಮಂಡಲ್ ಅವರು ಟಿಎಂಸಿ ನಾಯಕ ಅನಬ್ರತಾ ಮಂಡಲ್ ಅವರ ಆಪ್ತರಾಗಿದ್ದಾರೆ ಎಂದು ಹೇಳಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jul 30, 2026 02:26 PM

Follow Us