AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಎಸ್​ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ: ಬಾಕಿ ಹಣದ ಬಗ್ಗೆ ಡೈರಿಯಲ್ಲಿ ಬರೆದಿದ್ದ ಆರೋಪಿ ಬಸವರಾಜ್ ಕನ್ನಾಳೆ

ಕೆಪಿಎಸ್​ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ: ಬಾಕಿ ಹಣದ ಬಗ್ಗೆ ಡೈರಿಯಲ್ಲಿ ಬರೆದಿದ್ದ ಆರೋಪಿ ಬಸವರಾಜ್ ಕನ್ನಾಳೆ

ರಾಚಪ್ಪಾಜಿ ನಾಯ್ಕ್
| Edited By: |

Updated on: Sep 28, 2026 | 1:01 PM

Share

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ, ಆರೋಪಿ ಬಸವರಾಜ್ ಕನ್ನಾಳೆ ಡೈರಿಯಲ್ಲಿ ಹಣದ ವ್ಯವಹಾರಗಳ ಸ್ಪೋಟಕ ಮಾಹಿತಿ ಸಿಕ್ಕಿದೆ. ಡೈರಿಯಲ್ಲಿ ಕನ್ನಡದಲ್ಲಿಯೇ ಅಭ್ಯರ್ಥಿಗಳಿಂದ ಬರಬೇಕಾದ ಬಾಕಿ ಹಣದ ಲೆಕ್ಕವನ್ನು ಬರೆದಿಟ್ಟಿದ್ದು, ಹಲವು ಅಭ್ಯರ್ಥಿಗಳ ಹೆಸರು ಮತ್ತು ಮೊತ್ತ ಉಲ್ಲೇಖವಾಗಿದೆ. ಇದು ಹಗರಣದ ಆಳವನ್ನು ಅನಾವರಣಗೊಳಿಸಿದೆ.

ಬೆಂಗಳೂರು, ಸೆಪ್ಟೆಂಬರ್ 28: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಆರೋಪಿ ಬಸವರಾಜ್ ಕನ್ನಾಳೆ ಡೈರಿಯಲ್ಲಿ ಹಣದ ವ್ಯವಹಾರಗಳ ಕುರಿತು ಸ್ಫೋಟಕ ಮಾಹಿತಿ ಬಯಲಾಗಿದೆ. ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಮನೆ ಪರಿಶೀಲನೆ ನಡೆಸಿದಾಗ ಈ ಡೈರಿ ಲಭ್ಯವಾಗಿದೆ. ಡೈರಿಯಲ್ಲಿ, ಕನ್ನಾಳೆ ಕನ್ನಡದಲ್ಲಿಯೇ ಅಭ್ಯರ್ಥಿಗಳಿಂದ ಬರಬೇಕಾದ ಹಣದ ಲೆಕ್ಕವನ್ನು ಬರೆದಿಟ್ಟಿದ್ದಾನೆ. ಎಂಟು ಅಭ್ಯರ್ಥಿಗಳಿಂದ ಬಾಕಿ ಬರಬೇಕಾದ ಹಣದ ಬಗ್ಗೆ ಉಲ್ಲೇಖವಿದ್ದು, ಮಂಜುನಾಥ್, ಪೂಜಾ, ಅಶ್ವಿನಿ ಕುಮಾರ್, ಮೋಹನ್ ಕುಮಾರ್, ಸಂಗಮೇಶ್, ಪದ್ಮಾವತಿ ಮತ್ತು ಹರೀಶ್ ಸೇರಿದಂತೆ ಹಲವು ಹೆಸರುಗಳನ್ನು ನಮೂದಿಸಲಾಗಿದೆ.

ಮಂಜುನಾಥ್, ಪೂಜಾ, ಅಶ್ವಿನಿ ಕುಮಾರ್, ಸಂಗಮೇಶ್, ಪದ್ಮಾವತಿ, ಹರೀಶ್ ಅವರಿಂದ ತಲಾ 10 ಲಕ್ಷ ರೂಪಾಯಿ ಹಾಗೂ ಮೋಹನ್ ಕುಮಾರ್ ಅವರಿಂದ 5 ಲಕ್ಷ ರೂಪಾಯಿ ಬಾಕಿ ಬರಬೇಕೆಂದು ಡೈರಿಯಲ್ಲಿ ದಾಖಲಿಸಲಾಗಿದೆ. ಅಲ್ಲದೆ, 20ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲು ಮೂರು ವಿಲ್ಲಾಗಳನ್ನು ಬುಕ್ ಮಾಡಿದ್ದ ಸಂಗತಿಯೂ ಬಹಿರಂಗವಾಗಿದೆ. ಈ ಡೈರಿ ಕೆಪಿಎಸ್‌ಸಿ ಹಗರಣದ ಸೂತ್ರಧಾರ ಬಸವರಾಜ್ ಕನ್ನಾಳೆ ಎಂಬ ಅನುಮಾನವನ್ನು ಬಲಪಡಿಸಿದೆ. ಸಿಐಡಿ ಮತ್ತು ಇಡಿ ಅಧಿಕಾರಿಗಳು ಡೈರಿಯಲ್ಲಿ ಉಲ್ಲೇಖವಾಗಿರುವ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More