ಬೋವಿ ಸಮುದಾಯದ ಸ್ವಾಮೀಜಿ ಮೇಲೆ ಮುಖಂಡರಿಂದಲೇ ಹಲ್ಲೆ ಯತ್ನ: 6 ಜನರ ವಿರುದ್ಧ FIR
ಕಡೂರಿನ ಐಬಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಅವಧೂತ ಮಠದ ಗಂಗಾಧರ್ ಸ್ವಾಮೀಜಿ ಮೇಲೆ ಹಲ್ಲೆ ಯತ್ನ ನಡೆದಿರುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಬೋವಿ ಸಮುದಾಯದ ಅಧ್ಯಕ್ಷ ಕೊಲ್ಲಾಭೋವಿ ಸೇರಿದಂತೆ ಆರು ಮುಖಂಡರ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಾರ್ಯಕ್ರಮದ ನಿಮಿತ್ತ ಸ್ವಾಮೀಜಿ ಬಂದಿದ್ದರು ಎನ್ನಲಾಗಿದ್ದು, ಅವರ ಜೊತೆಗಿದ್ದವರ ಮೇಲೆ ನಡೆದ ಹಲ್ಲೆ ವಿಡಿಯೋ ವೈರಲ್ ಆಗಿದೆ.
ಚಿಕ್ಕಮಗಳೂರು, ಜುಲೈ 30: ಜಿಲ್ಲೆಯ ಕಡೂರು ಪಟ್ಟಣದ ಐಬಿಯಲ್ಲಿ ನಡೆದ ಗಲಾಟೆ ವೇಳೆ ಬೋವಿ ಸಮುದಾಯದ ಗಂಗಾಧರ್ ಸ್ವಾಮೀಜಿ ಮೇಲೆ ಹಲ್ಲೆಗೆ ಯತ್ನ ನಡೆದಿರುವ ಆರೋಪ ಕೇಳಿಬಂದಿದೆ. ಚಿತ್ರದುರ್ಗ ಜಿಲ್ಲೆಯ ಅವಧೂತ ಮಠದ ಸ್ವಾಮೀಜಿ ಮೇಲೆ ಹಲ್ಲೆಗೆ ಯತ್ನ ಸಂಬಂಧ ಬೋವಿ ಸಮಾಜದ ಅಧ್ಯಕ್ಷ ಸೇರಿದಂತೆ 6 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಸ್ವಾಮೀಜಿ ಜೊತೆಗಿದ್ದವರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಕಾರ್ಯಕ್ರಮ ನಿಮಿತ್ತ ಕಡೂರಿಗೆ ಬಂದಿದ್ದರು ಎನ್ನಲಾಗಿದೆ. ಗಂಗಾಧರ್ ಸ್ವಾಮೀಜಿ ಕಡೂರು ಪಟ್ಟಣದ ಐಬಿಯಲ್ಲಿ ಇದ್ದಾಗ ಗಲಾಟೆ ನಡೆದಿದ್ದು, ಬೋವಿ ಸಮಾಜದ ಅಧ್ಯಕ್ಷ ಕೊಲ್ಲಾಬೋವಿ, ನಾಗರಾಜ್, ತಿಮ್ಮಪ್ಪ, ಅಶೋಕ್, ರಮೇಶ್ ಸೇರಿದಂತೆ 6 ಜನರ ವಿರುದ್ಧ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jul 30, 2026 12:13 PM
Follow Us

