ಮುಡಾ 50:50 ಅನುಪಾತದ ನಿವೇಶನ ಹಗರಣ: ಸೈಟ್ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮೈಸೂರಿನಲ್ಲಿ ಮುಡಾದ 50:50 ಅನುಪಾತದ ನಿವೇಶನ ಹಗರಣದ ಸಂಬಂಧ ಅಕ್ರಮ ಸೈಟ್ ಪಟ್ಟಿ ಶೀಘ್ರ ಪ್ರಕಟವಾಗಲಿದ್ದು, ಶಾಸಕ ಶ್ರೀವತ್ಸರ ಮನವಿ ಮೇರೆಗೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಅಕ್ರಮವಾಗಿ ಸೈಟ್ ಪಡೆದವರು ತಪ್ಪಿತಸ್ಥರಾದರೂ, ಅವರಿಂದ ಕಾನೂನುಬದ್ಧವಾಗಿ ಖರೀದಿಸಿದ ಪ್ರಾಮಾಣಿಕರಿಗೆ ಈಗ ಆತಂಕ ಎದುರಾಗಿದೆ.
ಮೈಸೂರು, ಸೆಪ್ಟೆಂಬರ್ 29: ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) 50:50 ಅನುಪಾತದ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ, ಅಕ್ರಮವಾಗಿ ಹಂಚಿಕೆಯಾದ ಸೈಟ್‌ಗಳ ಪಟ್ಟಿಯನ್ನು ಪ್ರಕಟಿಸಲು ಸರ್ಕಾರ ಮುಂದಾಗಿದೆ. ಶಾಸಕ ಶ್ರೀವತ್ಸ ಅವರ ಮನವಿಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕ್ರಮವು ಕಾನೂನುಬದ್ಧವಾಗಿ ಸೈಟ್‌ಗಳನ್ನು ಖರೀದಿಸಿದ ಅಮಾಯಕ ಬಡ ಮತ್ತು ಮಧ್ಯಮ ವರ್ಗದವರಲ್ಲಿ ಆತಂಕ ಮೂಡಿಸಿದೆ. ಅನೇಕರು ಈ ನಿವೇಶನಗಳನ್ನು ಖರೀದಿಸಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅವರು ಈಗ ಹಣಕಾಸಿನ ನಷ್ಟ ಮತ್ತು ಮನೆ ಕಳೆದುಕೊಳ್ಳುವ ಭಯದಲ್ಲಿದ್ದಾರೆ. 50:50 ಅನುಪಾತದಲ್ಲಿ ಅಕ್ರಮವಾಗಿ ನಿವೇಶನ ಪಡೆದವರು ತಪ್ಪಿತಸ್ಥರಾದರೂ, ಅದರಿಂದ ಖರೀದಿಸಿದವರು ಸಂತ್ರಸ್ತರಾಗುವ ಭಯದಲ್ಲಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 29, 2026 05:55 PM
Follow Us

