ಯಾರಾದ್ರೂ ಎರಡು ಮಾತು ಹೇಳಿದ್ರೆ ಅಳುತ್ತಾ ಕೂರುತ್ತೀಯ: ಶಾಸ್ತ್ರಿ ಮುಖವಾಡ ಬಯಲು ಮಾಡಿದ ಜಗ್ಗ
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವೇಳೆ ಕಿರಣ್ ಶಾಸ್ತ್ರಿ ನಡವಳಿಕೆಯನ್ನು ಅನೇಕರು ಖಂಡಿಸಿದ್ದಾರೆ. ಜಗ್ಗ ಕೂಡ ನೇರವಾಗಿಯೇ ಎಲ್ಲವನ್ನೂ ಹೇಳಿದ್ದಾರೆ. ಈ ಹಿಂದೆ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾಗ ಕಿರಣ್ ಶಾಸ್ತ್ರಿ ನಡೆದುಕೊಂಡ ರೀತಿ ಸರಿ ಇರಲಿಲ್ಲ ಎಂದು ಜಗ್ಗ ಟೀಕಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವೇಳೆ ಕಿರಣ್ ಶಾಸ್ತ್ರಿ ನಡವಳಿಕೆಯನ್ನು ಅನೇಕರು ಖಂಡಿಸಿದ್ದಾರೆ. ಜಗ್ಗ ಕೂಡ ನೇರವಾಗಿಯೇ ಎಲ್ಲವನ್ನೂ ಹೇಳಿದ್ದಾರೆ. ಈ ಹಿಂದೆ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾಗ ಕಿರಣ್ ಶಾಸ್ತ್ರಿ ನಡೆದುಕೊಂಡ ರೀತಿ ಸರಿ ಇರಲಿಲ್ಲ ಎಂದು ಜಗ್ಗ ಟೀಕಿಸಿದ್ದಾರೆ. ಆರಂಭದಿಂದಲೂ ಕಿರಣ್ ಶಾಸ್ತ್ರಿ ಒಂದು ವರ್ತನೆ ಪುನರಾವರ್ತಿಸುತ್ತಿದ್ದಾರೆ. ಅದೇನೆಂದರೆ, ಮೊದಲು ನಾನೇ ತಪ್ಪಾಗಿ ನಡೆದುಕೊಳ್ಳುವುದು, ನಂತರ ಯಾರಾದರೂ ಬೈಯ್ದರೇ ಅಳುತ್ತಾ ಕೂರುವುದು. ಈ ವರ್ತನೆಯನ್ನು ಜಗ್ಗ ಅವರು ಗುರುತಿಸಿ ಹೇಳಿದ್ದಾರೆ. ನಾಮಿನೇಷನ್ ವೇಳೆ ಅವರು ಈ ಮಾತನ್ನು ಹೇಳಿದ್ದಾರೆ. ಜಗ್ಗ ಮಾತ್ರವಲ್ಲದೇ, ಗಾನವಿ ಗೌಡ, ಮಂಜ, ಸಂಗೀತಾ ಭಟ್ ಸೇರಿದಂತೆ ಅನೇಕರು ಕಿರಣ್ ಶಾಸ್ತ್ರಿ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

