AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನದ ಪಾಕ್ ಗಡಿ ಬಳಿ ಹೈವೇ ಮೇಲೆಯೇ ಲ್ಯಾಂಡ್ ಆದ ಭಾರತೀಯ ಸೇನಾ ಹೆಲಿಕಾಪ್ಟರ್‌!

ರಾಜಸ್ಥಾನದ ಪಾಕ್ ಗಡಿ ಬಳಿ ಹೈವೇ ಮೇಲೆಯೇ ಲ್ಯಾಂಡ್ ಆದ ಭಾರತೀಯ ಸೇನಾ ಹೆಲಿಕಾಪ್ಟರ್‌!

ಸುಷ್ಮಾ ಚಕ್ರೆ
|

Updated on: Sep 29, 2026 | 9:16 PM

Share

ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ರಾಜಸ್ಥಾನದ ದಾಂಟೋರ್ ಬಳಿಯ 'ರಾಷ್ಟ್ರೀಯ ಹೆದ್ದಾರಿ 911'ರ ಒಂದು ಭಾಗವನ್ನು ಭಾರತೀಯ ಸೇನೆಯು ತಾತ್ಕಾಲಿಕ ಹೆಲಿಪ್ಯಾಡ್ ಆಗಿ ಪರಿವರ್ತಿಸಿತು. ಕಾರ್ಯಾಚರಣೆಯ ಸಮರಾಭ್ಯಾಸದ ಭಾಗವಾಗಿ ಸೇನಾ ಹೆಲಿಕಾಪ್ಟರ್‌ಗಳು ಹೆದ್ದಾರಿಯ ಮೇಲೆಯೇ ಯಶಸ್ವಿಯಾಗಿ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ನಡೆಸಿದವು. 2016ರ ಸೆಪ್ಟೆಂಬರ್​ನಲ್ಲಿ ಎಲ್​ಒಸಿ ಬಳಿ ಭಾರತೀಯ ಸೇನೆ ನಡೆಸಿದ 'ಸರ್ಜಿಕಲ್ ಸ್ಟ್ರೈಕ್' ದಾಳಿಗೆ 10 ವರ್ಷಗಳು ಪೂರೈಸಿದ ನೆನಪಿಗಾಗಿ ಈ ಸಮರಾಭ್ಯಾಸವನ್ನು ಆಯೋಜಿಸಲಾಗಿತ್ತು. 19 ಭಾರತೀಯ ಯೋಧರನ್ನು ಬಲಿ ಪಡೆದ ಉರಿ ಸೇನಾ ನೆಲೆ ಮೇಲಿನ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು.

ನವದೆಹಲಿ, ಸೆಪ್ಟೆಂಬರ್ 29: ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ರಾಜಸ್ಥಾನದ ದಾಂಟೋರ್ ಬಳಿಯ ‘ರಾಷ್ಟ್ರೀಯ ಹೆದ್ದಾರಿ 911’ರ ಒಂದು ಭಾಗವನ್ನು ಭಾರತೀಯ ಸೇನೆಯು ತಾತ್ಕಾಲಿಕ ಹೆಲಿಪ್ಯಾಡ್ ಆಗಿ ಪರಿವರ್ತಿಸಿತು. ಕಾರ್ಯಾಚರಣೆಯ ಸಮರಾಭ್ಯಾಸದ ಭಾಗವಾಗಿ ಸೇನಾ ಹೆಲಿಕಾಪ್ಟರ್‌ಗಳು ಹೆದ್ದಾರಿಯ ಮೇಲೆಯೇ ಯಶಸ್ವಿಯಾಗಿ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ನಡೆಸಿದವು. 2016ರ ಸೆಪ್ಟೆಂಬರ್​ನಲ್ಲಿ ಎಲ್​ಒಸಿ ಬಳಿ ಭಾರತೀಯ ಸೇನೆ ನಡೆಸಿದ ‘ಸರ್ಜಿಕಲ್ ಸ್ಟ್ರೈಕ್’ ದಾಳಿಗೆ 10 ವರ್ಷಗಳು ಪೂರೈಸಿದ ನೆನಪಿಗಾಗಿ ಈ ಸಮರಾಭ್ಯಾಸವನ್ನು ಆಯೋಜಿಸಲಾಗಿತ್ತು. 19 ಭಾರತೀಯ ಯೋಧರನ್ನು ಬಲಿ ಪಡೆದ ಉರಿ ಸೇನಾ ನೆಲೆ ಮೇಲಿನ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು.

ಈ ಕವಾಯತಿನಲ್ಲಿ ರುದ್ರ, ಧ್ರುವ ಮತ್ತು ಚೇತಕ್ ಹೆಲಿಕಾಪ್ಟರ್‌ಗಳನ್ನು ಬಳಸಲಾಗಿತ್ತು. ಸಾಂಪ್ರದಾಯಿಕ ಏರ್‌ಫೀಲ್ಡ್ ಅಥವಾ ಸೇನಾ ಹೆಲಿಪ್ಯಾಡ್ ಬಳಕೆಯ ಬದಲಿಗೆ, ಪೈಲಟ್‌ಗಳು ನೇರವಾಗಿ ರಾಷ್ಟ್ರೀಯ ಹೆದ್ದಾರಿಯ ಮೇಲೆಯೇ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ತರಬೇತಿ ಪಡೆದರು. ಯುದ್ಧ ಅಥವಾ ತುರ್ತು ಸಂದರ್ಭಗಳಲ್ಲಿ ಮುಖ್ಯ ಏರ್‌ಬೇಸ್‌ಗಳು ಅಥವಾ ಏರ್‌ಫೀಲ್ಡ್‌ಗಳು ಲಭ್ಯವಿಲ್ಲದಿದ್ದಾಗ ಹೆದ್ದಾರಿಗಳನ್ನು ಪರ್ಯಾಯ ಏರ್‌ಫೀಲ್ಡ್‌ಗಳಾಗಿ ಹೇಗೆ ಬಳಸಬಹುದು ಎಂಬುದನ್ನು ಪರೀಕ್ಷಿಸುವುದು ಈ ಕವಾಯತಿನ ಪ್ರಮುಖ ಉದ್ದೇಶವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More