AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಮರು ಬಸವಕಲ್ಯಾಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಲ್ಲು ತೂರಿದ್ಯಾಕೆ? ಅಸಲಿ ಕಾರಣ ಬಿಚ್ಚಿಟ್ಟ ಎಸ್ಪಿ

ಶರಣರ ನಾಡು ಬಸವಕಲ್ಯಾಣದಲ್ಲಿ ಮುಸ್ಲಿಂ ಸಮುದಾಯದ ಶಿಕ್ಷಕರಿಬ್ಬರ ಮೇಲಿನ ಹಲ್ಲೆ ಆರೋಪ ಪ್ರಕರಣ ಉದ್ವಿಗ್ನಕ್ಕೆ ಕಾರಣವಾಗಿದೆ. ಹಿಂದೂ ಸಮುದಾಯದ ಯುವಕರು‌ ಹಲ್ಲೆ ಮಾಡಿದ್ದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದು, ಪೊಲೀಸ್ ವಾಹನದ ಮೇಲೆ ಕಲ್ಲು ತೂರಿದ್ದಾರೆ. ಅಲ್ಲದೇ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿದ್ಯಾಕೆ? ಎನ್ನುವ ಬಗ್ಗೆ ಬೀದರ್ ಎಸ್ಪಿ ಮಾಹಿತಿ ನೀಡಿದ್ದಾರೆ.

ಮುಸ್ಲಿಮರು ಬಸವಕಲ್ಯಾಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಲ್ಲು ತೂರಿದ್ಯಾಕೆ? ಅಸಲಿ  ಕಾರಣ ಬಿಚ್ಚಿಟ್ಟ ಎಸ್ಪಿ
Basavakalyana Muslims protest
ಸುರೇಶ ನಾಯಕ
| Edited By: |

Updated on: Mar 05, 2026 | 7:39 PM

Share

ಬೀದರ್, (ಮಾರ್ಚ್ 05): ಜಿಲ್ಲೆಯ ಬಸವಕಲ್ಯಾಣ ಪೊಲೀಸ್ ಠಾಣೆಗೆ ( basavakalyana police station) ಸಾವಿರಾರು ಮುಸ್ಲಿಮರು (Muslim) ಮುತ್ತಿಗೆ ಯತ್ನಿಸಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ಶಿಕ್ಷಕರ ಮೇಲೆ ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಾರ್ಚ್ 3ರಂದು ಸಹಸ್ರಾರು ಮುಸ್ಲಿಮರು ಬಸವಕಲ್ಯಾಣ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದು, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಇದೇ ವೇಳೆ ಕೆಲವರು ಪೊಲೀಸ್ ವ್ಯಾನ್​ ಮೇಲೆ ಕಲ್ಲು ತೂರಿದ್ದರು. ಇದರಿಂದ ಭಾರೀ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಈ ಘಟನೆ ಸಂಬಂಧ ಪೊಲೀಸರು, 49 ಜನರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು, ಈ ಪೈಕಿ 20 ಜನರನ್ನ ಬಂಧಿಸಿದ್ದಾರೆ.

ಖಡಕ್ ಎಚ್ಚರಿಕೆ ನೀಡಿದ ಎಸ್ಪಿ

ಇನ್ನು ಈ ಬಗ್ಗೆ ಬೀದರ್ ನಲ್ಲಿ ಎಸ್ಪಿ ಪ್ರದೀಪ್ ಗುಂಟೆ ಪ್ರತಿಕ್ರಿಯಿಸಿದ್ದು, ಮಾರ್ಚ 3 ರಂದು ವಾಕಿಂಗ್ ಮಾಡುತ್ತಿದ್ದಾಗ ಯುವಕರು ರಸ್ತೆ ಬದಿ ನಿಂತುಕೊಂಡ ಅಸಭ್ಯ ವರ್ತನೆ ಮಾಡಿದ್ದಾರೆ. ಅಲ್ಲದೇ 6 ಜನ ಅನ್ಯಕೋಮಿನ ಯುವಕರು ಇಬ್ಬರನ್ನು ಥಳಿಸಿದ್ದಾರೆ. ಅವರಿಗೆ ಬುದ್ದಿ ಹೇಳಲು ಹೋದ ಇಬ್ಬರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದವರು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ಬಂದು ಕಂಪ್ಲೀಟ್ ಕೊಟ್ಟಿದ್ದಾರೆ.ಅವರ ಕಂಪ್ಲೀಟ್ ಕೊಟ್ಟ ನಂತರ ಹಲ್ಲೆ ಮಾಡಿದ 6 ಯುವಕರನ್ನ ಬಂಧಿಸಲು ಹೋಗುತ್ತಿದ್ದಾಗ ಒಂದು ಸಮುದಾಯಕ್ಕೆ ಸೇರಿದ ಜನರ ನಮ್ಮ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ನಮ್ಮ ವಾಹನವನ್ನು ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಸಂಬಂಧ ಸಿಸಿಟಿವಿ ಆಧಾರದ ಮೇಲೆ 49 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಈ ಪೈಕಿ 22 ಜನರನ್ನ ಬಂಧಿಸಿದ್ದೇವೆ. ಇದ್ಯಾವುದು ಕೋಮ ಗಲಭೆ ಅಲ್ಲ. ಹಿಂಸೆಗೆ ಸಪೋರ್ಟ್ ಮಾಡುವ ರೀತಿ ಪೋಸ್ಟ್‌ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ನೋಡಿ: ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಸಾವಿರಾರು ಮುಸ್ಲಿಮರಿಂದ ಬೃಹತ್ ಪ್ರತಿಭಟನೆ, ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನ

ಘಟನೆ ಹಿನ್ನೆಲೆ

ಮಾರ್ಚ್ 3ರಂದು ಸಂಜೆ ಮುಸ್ಲಿಂ ಸಮುದಾಯದ ಶಿಕ್ಷಕರಾದ ಸೈಯದ್ ಇಮ್ರಾನ್ ಮತ್ತು ಮಹ್ಮದ್ ಆರೀಫ್ ವಾಯು ವಿಹಾರಕ್ಕೆ ತೆರಳಿದ್ದರು. ಈ ವೇಳೆ ಆರು ಜನ ಅಪರಿಚಿತ ಹಿಂದೂ ಯುವಕರು ಶಿಕ್ಷರಿಬ್ಬರ ಮೇಲೆ ಹಲ್ಲೆ ಮಾಡಿದ್ದು, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಮುಸ್ಲಿಂ ಶಿಕ್ಷಕ ಸೈಯದ್ ಇಮ್ರಾನ್ ಪ್ರಕರಣ ದಾಖಲಿಸಿದ್ದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಹರುತ್ತಿದ್ದಂತೆಯೇ ಸಾವಿರಾರು ಮುಸ್ಲಿಮರು ಬಸವಕಲ್ಯಾಣ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದು, ಹಲ್ಲೆಕೋರರನ್ನ ಬಂಧಿಸಬೇಕು ಜೊತೆಗೆ ಬಂಧಿತರನ್ನ ನಮ್ಮ ವಶಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

ಅಲ್ಲದೇ ಪೊಲೀಸ್ ಠಾಣೆ‌ ಮುತ್ತಿಗೆಗೆ ಯತ್ನ ನಡೆಸಿದ್ದರು. ಪರಿಸ್ಥಿತಿ ಕೈ ಮೀರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಪೊಲೀಸರು, ಆರೋಪಿಗಳನ್ನ ಬಂಧಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ. ನೀವು ಇಲ್ಲಿಂದ ತೆರಳಿ ಎಂದು ಸಿಪಿಐ ಅಲಿಸಾಬ್ ಮನವಿ ಮಾಡಿದ್ದರು. ಎಷ್ಟೇ ಮನವಿ ಮಾಡಿದರೂ ಸಹ ಸ್ಥಳದಿಂದ ಹೋಗಲಿಲ್ಲ. ಕೊನೆಗೆ ಅನಿವಾರ್ಯವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿ ಉದ್ರಿಕ್ತರ ಗುಂಪು ಚದುರಿಸಿದ್ದಾರೆ. ಈ ವೇಳೆ ಉದ್ರಿಕ್ತರ ಗುಂಪು ಪೊಲೀಸರ ಸಮವಸ್ತ್ರ ಹಿಡಿದು ಎಳೆದಾಡಿದ್ದಲ್ಲದೇ ಕಲ್ಲು ತೂರಾಟ‌ ಮಾಡಿ ಪೊಲೀಸ್ ವಾಹನಗಳಿಗೆ ಹಾನಿ ಮಾಡಿದ್ದಾರೆ. ಘಟನೆಯಲ್ಲಿ ಎಎಸ್‌ಐ ಮುಕ್ತಾರ್ ಪಟೇಲ್ ಎಂಬುವವರಿಗೆ ಗಾಯಗೊಂಡಿದ್ದಾರೆ.

ಉದ್ರಿಕ್ತ ಗುಂಪಿನ 49 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಿಕ್ಷಕರ ಮೇಲಿನ ಹಲ್ಲೆ ಕುರಿತಂತೆ ಐವರು, ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಆರೋಪದಡಿ ಸುಮಾರು 21 ಜನರನ್ನ ಬಂಧಿಸಿದ್ದಾರೆ. ಅಲ್ಲದೇ, ಘಟನೆಯ ದಿನ ವಿಡಿಯೋದಲ್ಲ ಸೆರೆಯಾಗಿರುವವರನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸುರೇಶ ನಾಯಕ
ಸುರೇಶ ನಾಯಕ

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
‘ಕಾಕ್ರೂಚ್’ಗಳ ಪ್ರತಿಭಟನೆಗೆ ನಟ ಪ್ರಕಾಶ್ ರೈ ಸಾಥ್: ವಿಡಿಯೋ
‘ಕಾಕ್ರೂಚ್’ಗಳ ಪ್ರತಿಭಟನೆಗೆ ನಟ ಪ್ರಕಾಶ್ ರೈ ಸಾಥ್: ವಿಡಿಯೋ
ರಸ್ತೆ ಬದಿ ಅಂಗಡಿಯಲ್ಲಿ 1 ಟೀ ಕುಡಿದು 2 ಸಾವಿರ ರೂ. ಕೊಟ್ಟ DCM ಪರಮೇಶ್ವರ್
ರಸ್ತೆ ಬದಿ ಅಂಗಡಿಯಲ್ಲಿ 1 ಟೀ ಕುಡಿದು 2 ಸಾವಿರ ರೂ. ಕೊಟ್ಟ DCM ಪರಮೇಶ್ವರ್
ಗೃಹಲಕ್ಷ್ಮೀ, ಗೃಹಜ್ಯೋತಿಗೆ ಹೊಸ ಅರ್ಜಿಗೆ ಏನೇನು ದಾಖಲೆ ಬೇಕು?
ಗೃಹಲಕ್ಷ್ಮೀ, ಗೃಹಜ್ಯೋತಿಗೆ ಹೊಸ ಅರ್ಜಿಗೆ ಏನೇನು ದಾಖಲೆ ಬೇಕು?
ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ಸಾಹುಕಾರ್ ಹೇಳಿದ್ದೇನು?
ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ಸಾಹುಕಾರ್ ಹೇಳಿದ್ದೇನು?
ಕುಮಾರಸ್ವಾಮಿಯ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್ ಶಾಸಕ, ವಿಡಿಯೋನಲ್ಲೇನಿದೆ?
ಕುಮಾರಸ್ವಾಮಿಯ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್ ಶಾಸಕ, ವಿಡಿಯೋನಲ್ಲೇನಿದೆ?
ಕಿರುಕುಳ ತಾಳಲಾರದೇ ಅಧಿಕಾರಿಯ ಮುಖಕ್ಕೆ ರಾಜೀನಾಮೆ ಬಿಸಾಕಿದ ಲೇಡಿ ಸಿಬ್ಬಂದಿ
ಕಿರುಕುಳ ತಾಳಲಾರದೇ ಅಧಿಕಾರಿಯ ಮುಖಕ್ಕೆ ರಾಜೀನಾಮೆ ಬಿಸಾಕಿದ ಲೇಡಿ ಸಿಬ್ಬಂದಿ
ಬೆಂಗಳೂರಿನಲ್ಲಿ ಒಂದೇ ಒಂದು ಮಳೆಗೆ ತುಂಬಿ ಹರಿಯುತ್ತಿರೋ ಹಳ್ಳ ಕೊಳ್ಳಗಳು!
ಬೆಂಗಳೂರಿನಲ್ಲಿ ಒಂದೇ ಒಂದು ಮಳೆಗೆ ತುಂಬಿ ಹರಿಯುತ್ತಿರೋ ಹಳ್ಳ ಕೊಳ್ಳಗಳು!
ಮಂಡ್ಯದಲ್ಲಿ ಮುನಿಸು ಮರೆತ ಮೈತ್ರಿ ನಾಯಕರು
ಮಂಡ್ಯದಲ್ಲಿ ಮುನಿಸು ಮರೆತ ಮೈತ್ರಿ ನಾಯಕರು
ರಾಯಚೂರಿನಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು!
ರಾಯಚೂರಿನಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು!
ಗೃಹಲಕ್ಷ್ಮಿ ಅಲ್ಲ ಚುನಾವಣಾ ಲಕ್ಷ್ಮೀ: ವಿಜಯೇಂದ್ರ ವ್ಯಂಗ್ಯ
ಗೃಹಲಕ್ಷ್ಮಿ ಅಲ್ಲ ಚುನಾವಣಾ ಲಕ್ಷ್ಮೀ: ವಿಜಯೇಂದ್ರ ವ್ಯಂಗ್ಯ