ರಾಮ ಮಂದಿರದ ದೇಣಿಗೆ ಲೂಟಿ: ಕದ್ದ ಹಣದಲ್ಲಿ ಅವಿನಾಶ್ ಪ್ರೇಮ ಪುರಾಣ, ಲವರ್ಗೆ ಗಿಫ್ಟ್!
ಮುಖ್ಯಾಂಶಗಳು
- ಅಯೋಧ್ಯೆ ರಾಮಮಂದಿರ ಕಾಣಿಕೆ ಕಳ್ಳತನ ಪ್ರಕರಣ ದಿನಕ್ಕೊಂದು ತಿರುವು
- ಎಸ್ಐಟಿ ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲು
- ಲೂಟಿ ಹಣದಲ್ಲಿ ಹೈಫೈ ಜೀವನ ನಡೆಸ್ತಿದ್ದ ಕಿಂಗ್‌ಪಿನ್
ಅಯೋಧ್ಯೆ ರಾಮಮಂದಿರದಲ್ಲಿ ಭಕ್ತರು ಅರ್ಪಿಸಿದ್ದ ಕಾಣಿಕೆ, ಚಿನ್ನಾಭರಣ, ಹಾಗೂ 4 ಕೆ.ಜಿ. ಚಿನ್ನ ಲೇಪಿತ ರಾಮಚರಿತ ಮಾನಸ ಗ್ರಂಥ ಕಳ್ಳತನ ಪ್ರಕರಣ ತೀವ್ರ ಸ್ವರೂಪ ಪಡೆದಿದೆ. ಎಸ್ಐಟಿ ತನಿಖೆಯಲ್ಲಿ ಅವಿನಾಶ್ ಶುಕ್ಲಾ ಲೂಟಿ ಹಣದಲ್ಲಿ ಮೋಜು ಮಸ್ತಿ, ಪ್ರೇಮಪ್ರಕರಣ ಮತ್ತು ದುಬಾರಿ ವಸ್ತುಗಳ ಖರೀದಿ ಬಯಲಾಗಿದೆ.
ದೆಹಲಿ, ಜುಲೈ 05: ಅಯೋಧ್ಯೆ ರಾಮಮಂದಿರದಲ್ಲಿ ಭಕ್ತರು ಅರ್ಪಿಸಿದ್ದ ಕಾಣಿಕೆ, ದೇಣಿಗೆ ಮತ್ತು ಚಿನ್ನಾಭರಣಗಳ ಕಳ್ಳತನ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಎಸ್‌ಐಟಿ ಆರೋಪಿಗಳ ವಿಚಾರಣೆ ನಡೆಸಿದ್ದು, ಹಲವು ಆಘಾತಕಾರಿ ಸತ್ಯಗಳು ಹೊರಬರುತ್ತಿವೆ. ಕಾಣಿಕೆ ಹಣದಲ್ಲಿ ಹೈಫೈ ಜೀವನ ನಡೆಸ್ತಿದ್ದ ಕಿಂಗ್‌ಪಿನ್ ಅವಿನಾಶ್ ಶುಕ್ಲಾನಾ ಪ್ರೇಮ ಪುರಾಣವೂ ಬಯಲಾಗಿದೆ. ಮದ್ವೆ ನಿಶ್ಚಿತಾರ್ಥವಾಗಿದ್ದ ಗೆಳತಿಯ ಬ್ಯಾಂಕ್ ಖಾತೆಗೆ ಲಕ್ಷ ಲಕ್ಷ ಹಣ ಹಾಕಿದ್ದ. 2 ಲಕ್ಷ ಹಣ ಕ್ಯಾಶ್ ನೀಡಿದ್ದ. ದುಬಾರಿ ಮೊಬೈಲ್ ಫೋನ್ ಗಿಫ್ಟ್ ಕೊಟ್ಟಿದ್ದ. ತನ್ನ ಸಹೋದರ ಅಭಿಷೇಕ್ ಶುಕ್ಲಾ ಹೆಸ್ರಲ್ಲಿ ಹೊಸ ಬ್ರೆಝಾ ಕಾರನ್ನೂ ಖರೀದಿ ಮಾಡಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಸಹೋದರ ಅಭಿಷೇಕ್ ಶುಕ್ಲಾ ಹೆಸರಿನಲ್ಲಿ ಹೊಸ ಕಾರನ್ನು ಖರೀದಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಸದ್ಯ ಪ್ರಕರಣ ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದ್ದು, ಮಾಜಿ ಸಿಎಂ ಉದ್ಧವ್ ಠಾಕ್ರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅರವಿಂದ್ ಕೇಜ್ರಿವಾಲ್ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jul 05, 2026 10:52 PM
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ

