ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್‌ಗೆ ಮದುವೆ ಫಿಕ್ಸ್: ಹುಡುಗಿ ಯಾರು?
ಚಿತ್ರದುರ್ಗದ ಮಂಕಿ ಮ್ಯಾನ್ ಜ್ಯೋತಿರಾಜ್ ಅವರ ವಿವಾಹ ನಿವೇದಿತಾ ಅವರೊಂದಿಗೆ ಆಗಸ್ಟ್ 22 ಮತ್ತು 23ರಂದು ನೆರವೇರಲಿದೆ. ಇದು ಪ್ರೀತಿ ಮತ್ತು ಅರೇಂಜ್ ಮದುವೆಯ ಮಿಶ್ರಣವಾಗಿದ್ದು, ವಧು ಚಿಕ್ಕಂದಿನಿಂದಲೇ ಜ್ಯೋತಿರಾಜ್ ಅವರೊಂದಿಗೆ ಪರಿಚಿತರಾಗಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲೂ ನಿರತರಾಗಿರುವ ಜ್ಯೋತಿರಾಜ್‌ಗೆ ವಧು ಸಂಪೂರ್ಣ ಬೆಂಬಲ ನೀಡಲಿದ್ದಾರೆ.
ಚಿತ್ರದುರ್ಗ, ಆಗಸ್ಟ್ 14: ಕರ್ನಾಟಕದ ‘ಸ್ಪೈಡರ್‌ಮ್ಯಾನ್’ ಎಂದೇ ಜನಪ್ರಿಯರಾಗಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರ ವಿವಾಹ ಮುಹೂರ್ತ ನಿಶ್ಚಯವಾಗಿದ್ದು, ಚಿತ್ರದುರ್ಗ ಸಮೀಪದ ಚಳ್ಳಕೆರೆಯ ದೊಡ್ಡಉಳ್ಳಾರ್ತಿ ಗ್ರಾಮದ ನಿವೇದಿತಾ ಎಂಬುವವರೊಂದಿಗೆ ಆಗಸ್ಟ್ 22 ಮತ್ತು 23ರಂದು ವೈಭವ ಗಾರ್ಡನ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಹಿಂದೆ 2018-19ರಲ್ಲಿ ಜೋಗ್‌ಫಾಲ್ಸ್‌ನಲ್ಲಿ ಬಿದ್ದು ಗಾಯಗೊಂಡಿದ್ದ ಸಂದರ್ಭದಲ್ಲಿ ನಿಶ್ಚಯವಾಗಿದ್ದ ಮದುವೆ ರದ್ದಾಗಿತ್ತು. ಇದೀಗ ಬಾಲ್ಯದಿಂದಲೂ ಪರಿಚಿತವಿರುವ ನಿವೇದಿತಾರನ್ನು ಇಷ್ಟಪಟ್ಟು ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಅರೇಂಜ್ಡ್-ಕಮ್-ಲವ್ ಮ್ಯಾರೇಜ್ ಆಗುತ್ತಿರುವುದಾಗಿ ಜ್ಯೋತಿರಾಜ್ ತಿಳಿಸಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಸ್ನೇಹಿತರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಭಿಮಾನಿಗಳ ಪ್ರೀತಿ-ಬೆಂಬಲದಿಂದ ಸರಳವಾಗಿ ವಿವಾಹ ಕಾರ್ಯಕ್ರಮ ನೆರವೇರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಪ್ರಬಲ ಸಂದೇಶ ರವಾನಿಸಿದೆ; ರಾಷ್ಟ್ರಪತಿ
'ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ
ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಸೆಟ್ ಹಾಕಲು ಅಂದಾಜು 75 ಕೋಟಿ ರೂಪಾಯಿ ಬಜೆಟ್
ಮನೆ ಮುಂದೆ ವಾಹನ ಪಾರ್ಕಿಂಗ್ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ
