AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SIR ವೇಳೆ ಕುಸಿದುಬಿದ್ದ BLO, ಅಧಿಕಾರಿಗಳಿಗೆ ಎಷ್ಟು ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು

SIR ವೇಳೆ ಕುಸಿದುಬಿದ್ದ BLO, ಅಧಿಕಾರಿಗಳಿಗೆ ಎಷ್ಟು ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು

ಮಂಜುನಾಥ ಕೆಬಿ
| Edited By: |

Updated on:Jul 05, 2026 | 4:46 PM

Share

ಮುಖ್ಯಾಂಶಗಳು

  • ಎಸ್​​ಐಆರ್​​ ಪ್ರಕ್ರಿಯೆ ವೇಳೆ ಅಸ್ವಸ್ಥಗೊಂಡು ಕುಸಿದುಬಿದ್ದ ಶಿಕ್ಷಕಿ
  • ಹಾಸನ ಜಿಲ್ಲೆ ಬೇಲೂರು ಪಟ್ಟಣದ ಚನ್ನೇಗೌಡರ ಬೀದಿಯಲ್ಲಿ ಘಟನೆ
  • ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡ ಶಿಕ್ಷಕಿ ಪಾರ್ವತಿ

ಕರ್ನಾಟಕದಲ್ಲೂ ಸಹ ಮತದಾರರ ಪಟ್ಟಿ ಪರಿಷ್ಕರಣೆ (ಎಸ್​​ಐಆರ್​) ಪ್ರಕ್ರಿಯೆ ನಡೆದಿದ್ದ, ಕೆಲವು ಬಿಎಲ್​​ಓಗಳು ಮನೆ ಮನೆಗೆ ತೆರಳಿ ಅರ್ಜಿ ನಮೂನೆ ನೀಡುತ್ತಿದ್ದಾರೆ. ಆದ್ರೆ, ಕೆಲವಡೆ ಒಂದೇ ಸ್ಥಳದಲ್ಲಿ ಕುಳಿತು ಪರಿಷ್ಕರಣ ಮಾಡುತ್ತಿರುವುದು ಕಂಡುಬರುತ್ತಿವೆ. ಇದರ ನಡುವೆ ಎಸ್​​​ಐಆರ್ ವೇಳೆ ಕೆಲ ದುರಂತ ಸಂಭವಿಸಿತ್ತಿವೆ. ಹೌದು....ತುಮಕೂರಿನಲ್ಲಿ SIR ಕರ್ತವ್ಯಕ್ಕೆ ತೆರಳುವಾಗ ರಸ್ತೆ ಅಪಘಾತದಲ್ಲಿ ವಿಎಒ ಭುವನಾ ಮೃತಪಟ್ಟಿದ್ದರೆ, ಇನ್ನೊಂದೆಡೆ ಬೀದರ್‌ನಲ್ಲಿ ಕಂದಾಯ ನೌಕರ. ಎಸ್‌ಐಆರ್ ಕರ್ತವ್ಯದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಹಾಸನದಲ್ಲಿ ಎಸ್‌ಐಆರ್ ಕರ್ತವ್ಯದ ವೇಳೆ ಶಿಕ್ಷಕಿಯೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ಘಟನೆ ನಡೆದಿದೆ.

ಹಾಸನ, (ಜುಲೈ 05): ಕರ್ನಾಟಕದಲ್ಲೂ ಸಹ ಮತದಾರರ ಪಟ್ಟಿ ಪರಿಷ್ಕರಣೆ (ಎಸ್​​ಐಆರ್​) ಪ್ರಕ್ರಿಯೆ ನಡೆದಿದ್ದ, ಕೆಲವು ಬಿಎಲ್​​ಓಗಳು ಮನೆ ಮನೆಗೆ ತೆರಳಿ ಅರ್ಜಿ ನಮೂನೆ ನೀಡುತ್ತಿದ್ದಾರೆ. ಆದ್ರೆ, ಕೆಲವಡೆ ಒಂದೇ ಸ್ಥಳದಲ್ಲಿ ಕುಳಿತು ಪರಿಷ್ಕರಣ ಮಾಡುತ್ತಿರುವುದು ಕಂಡುಬರುತ್ತಿವೆ. ಇದರ ನಡುವೆ ಎಸ್​​​ಐಆರ್ ವೇಳೆ ಕೆಲ ದುರಂತ ಸಂಭವಿಸಿತ್ತಿವೆ. ಹೌದು….ತುಮಕೂರಿನಲ್ಲಿ SIR ಕರ್ತವ್ಯಕ್ಕೆ ತೆರಳುವಾಗ ರಸ್ತೆ ಅಪಘಾತದಲ್ಲಿ ವಿಎಒ ಭುವನಾ ಮೃತಪಟ್ಟಿದ್ದರೆ, ಇನ್ನೊಂದೆಡೆ ಬೀದರ್‌ನಲ್ಲಿ ಕಂದಾಯ ನೌಕರ. ಎಸ್‌ಐಆರ್ ಕರ್ತವ್ಯದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಹಾಸನದಲ್ಲಿ ಎಸ್‌ಐಆರ್ ಕರ್ತವ್ಯದ ವೇಳೆ ಶಿಕ್ಷಕಿಯೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆ ಬೇಲೂರು ಪಟ್ಟಣದ ಚನ್ನೇಗೌಡರ ಬೀದಿಯಲ್ಲಿ ಶಿಕ್ಷಕಿ ಪಾರ್ವತಿ ಎನ್ನುವರು ಗಣತಿಗೆ ತೆರಳಿದ್ದ ವೇಳೆ ಅಸ್ವಸ್ಥಗೊಂಡು ಕುಸಿದುಬಿದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕಿ ಪಾರ್ವತಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ತಾನು ಅನಾರೋಗ್ಯ ಪೀಡಿತಳು ಎಂದು ಹೇಳಿದರೂ ಗಣತಿಗೆ ನೇಮಕ ಮಾಡಲಾಗಿದೆ. ಅಧಿಕಾರಿಗಳಿಗೆ ಎಷ್ಟೇ ಮನವಿ‌ ಮಾಡಿದರೂ ನನ್ನ ಮಾತು ಕೇಳಿಲ್ಲ. ಈಗ ವೈದ್ಯರು ಒಂದು ವಾರ ವಿಶ್ರಾಂತಿ ಪಡೆಯುವಂತೆ ಹೇಳಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತ್ತೊಂದು ದುರಂತ: ಹೃದಯಾಘಾತದಿಂದ ಬೀದರ್​​ನಲ್ಲಿ BLO ಸಾವು

Published on: Jul 05, 2026 04:46 PM

Follow Us