AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಕಾಯ್ದೆ ಮೂಲಕ RSS ಚಟುವಟಿಕೆಗಳಿಗೆ ಬ್ರೇಕ್ ಆರೋಪ: ವಿಧೇಯಕದ ಅಂಶಗಳನ್ನ ಬಿಚ್ಚಿಟ್ಟ ಗೃಹ ಸಚಿವ

ಹೊಸ ಕಾಯ್ದೆ ಮೂಲಕ RSS ಚಟುವಟಿಕೆಗಳಿಗೆ ಬ್ರೇಕ್ ಆರೋಪ: ವಿಧೇಯಕದ ಅಂಶಗಳನ್ನ ಬಿಚ್ಚಿಟ್ಟ ಗೃಹ ಸಚಿವ

ರಮೇಶ್ ಬಿ. ಜವಳಗೇರಾ
|

Updated on:Aug 14, 2026 | 5:09 PM

Share

ವಿಧೇಯಕದ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ವಿಪಕ್ಷಗಳು ವಿಧೇಯಕವನ್ನು ಓದಿದ್ದಾರಾ? ವಿಧೇಯಕದ ಚರ್ಚೆ ಮಾಡಲಿ, ಏನಾದರೂ ತಪ್ಪಿದ್ರೆ ನೋಡೋಣ. ಈ ವಿಧೇಯಕದಲ್ಲಿ ಆರ್​ಎಸ್​ಎಸ್ ಬಗ್ಗೆ ಇದೆಯಾ? ಸರ್ಕಾರಿ ಜಾಗವನ್ನು ಉಪಯೋಗಿಸುವುದಕ್ಕೆ ಅನುಮತಿ ಬೇಕಲ್ವಾ? ಇದರಲ್ಲಿ ಸಮಸ್ಯೆ ಏನಿದೆ? ನಮ್ಮ ಪಕ್ಷ 140 ವರ್ಷ ಹಳೆಯದ್ದು, ಆದ್ರೂ ಅನುಮತಿ ಪಡೆಯುತ್ತೇವೆ. ಈ ವಿಧೇಯಕಕ್ಕೂ ನೋಂದಣಿ ಆಗದಿರುವುದಕ್ಕೂ ಸಂಬಂಧವಿಲ್ಲ. ನೀವು ಸಲಹೆ ಕೊಡಿ ನಾವು ಸ್ವಾಗತ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು, (ಆಗಸ್ಟ್ 14): ಸರಕಾರಿ ಆವರಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನೋಂದಾಯಿತವಲ್ಲದ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ‘ಕರ್ನಾಟಕ ಸಾರ್ವಜನಿಕ ಪ್ರದೇಶ ಪ್ರವೇಶ ನಿಯಂತ್ರಣ ವಿಧೇಯಕ-2026’ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆರ್‌ಎಸ್‌ಎಸ್‌ನ ಪಥಸಂಚಲನ ಹಾಗೂ ಸಮಾವೇಶಗಳಿಗೆ ತಡೆ ಒಡ್ಡುವ ಉದ್ದೇಶ ಹೊಂದಿರುವ ಈ ವಿಧೇಯಕದಲ್ಲಿ ಸಾರ್ವಜನಿಕ ಸ್ಥಳ ಬಳಕೆಗೆ ಪೂರ್ವಾನುಮತಿ ಕಡ್ಡಾಯಗೊಳಿಸಲಾಗಿದೆ. ನಿಯಮ ಉಲ್ಲಂಘನೆಯನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲು ನಿರ್ಧರಿಸಲಾಗಿದೆ.ಇದಕ್ಕೆ ವಿಪಕ್ಷ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ಈ ವಿಧೇಯಕದ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ವಿಪಕ್ಷಗಳು ವಿಧೇಯಕವನ್ನು ಓದಿದ್ದಾರಾ? ವಿಧೇಯಕದ ಚರ್ಚೆ ಮಾಡಲಿ, ಏನಾದರೂ ತಪ್ಪಿದ್ರೆ ನೋಡೋಣ. ಈ ವಿಧೇಯಕದಲ್ಲಿ ಆರ್​ಎಸ್​ಎಸ್ ಬಗ್ಗೆ ಇದೆಯಾ? ಸರ್ಕಾರಿ ಜಾಗವನ್ನು ಉಪಯೋಗಿಸುವುದಕ್ಕೆ ಅನುಮತಿ ಬೇಕಲ್ವಾ? ಇದರಲ್ಲಿ ಸಮಸ್ಯೆ ಏನಿದೆ? ನಮ್ಮ ಪಕ್ಷ 140 ವರ್ಷ ಹಳೆಯದ್ದು, ಆದ್ರೂ ಅನುಮತಿ ಪಡೆಯುತ್ತೇವೆ. ಈ ವಿಧೇಯಕಕ್ಕೂ ನೋಂದಣಿ ಆಗದಿರುವುದಕ್ಕೂ ಸಂಬಂಧವಿಲ್ಲ. ನೀವು ಸಲಹೆ ಕೊಡಿ ನಾವು ಸ್ವಾಗತ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಹೊಸ ಕಾಯ್ದೆಯೊಂದಿಗೆ ಕರ್ನಾಟಕದಲ್ಲಿ RSS ಚಟುವಟಿಕೆಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದ್ಯಾ?

Published on: Aug 14, 2026 03:44 PM

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More