Fact Check: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕತ್ತಿವರಸೆ ಮಾಡುತ್ತಿರುವುದು ನಿಜವೇ?: ವೈರಲ್ ವಿಡಿಯೋದ ಸತ್ಯಾಂಶ ಏನು?
Rekha Guptha Fact Check: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ದೆಹಲಿ ಸಿಎಂ ರೇಖಾ ಗುಪ್ತಾ ಅವರ ಹಳೆಯ ವಿಡಿಯೋ ಎಂದು ಅನೇಕ ಬಳಕೆದಾರರು ಹೇಳಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ, ಈ ವಿಡಿಯೋದಲ್ಲಿ ಇರುವವರು ನಿಜಕ್ಕೂ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರೆನಾ?. ಇಲ್ಲಿದೆ ನೋಡಿ ಸತ್ಯಾಂಶ.

ರೇಖಾ ಗುಪ್ತಾ ಅವರು ಫೆಬ್ರವರಿ 19, 2025 ರಂದು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರ ಬೆನ್ನಲ್ಲೇ ಇವರ ಕುರಿತ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಮಹಿಳೆಯೊಬ್ಬರು ಕತ್ತಿ ಮತ್ತು ಕೋಲಿನಿಂದ ಸಮರಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ದೆಹಲಿ ಸಿಎಂ ರೇಖಾ ಗುಪ್ತಾ ಅವರ ಹಳೆಯ ವಿಡಿಯೋ ಎಂದು ಅನೇಕ ಬಳಕೆದಾರರು ಹೇಳಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ, ಈ ವಿಡಿಯೋದಲ್ಲಿ ಇರುವವರು ನಿಜಕ್ಕೂ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರೆನಾ?. ಇಲ್ಲಿದೆ ನೋಡಿ ಸತ್ಯಾಂಶ.
ಏನು ವೈರಲ್ ಆಗುತ್ತಿರುವುದೇನು?
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಆರ್. ಎಸ್. ಎಸ್. ಕಾರ್ಯಕರ್ತೆ ರೇಖಾ ಗುಪ್ತಾ ಅವರ ಹಳೆಯ ವಿಡಿಯೋ, ಈಗ ದೆಹಲಿ ಸಿಎಂ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೋದಲ್ಲಿ ಕಾಣುತ್ತಿರುವ ಮಹಿಳೆ ರೇಖಾ ಗುಪ್ತಾ ಅಲ್ಲ, ಬದಲಾಗಿ ಮರಾಠಿ ನಟಿ ಪಾಯಲ್ ಜಾಧವ್ ಆಗಿದ್ದಾರೆ.
ವೈರಲ್ ಆಗಿರುವ ಈ ಹಕ್ಕಿನ ಸತ್ಯವನ್ನು ಕಂಡುಹಿಡಿಯಲು, ನಾವು ವಿಡಿಯೋದ ಪ್ರಮುಖ ಚೌಕಟ್ಟುಗಳನ್ನು ಹೊರತೆಗೆದು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಅವುಗಳನ್ನು ಸರ್ಚ್ ಮಾಡಿದ್ದೇವೆ. ಆಗ ಫೆಬ್ರವರಿ 19, 2025 ರಂದು ಮರಾಠಿ ನಟಿ ಪಾಯಲ್ ಜಾಧವ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದೇ ವೈರಲ್ ವಿಡಿಯೋ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ.
Fact Check: ಕಾರು ಅಪಘಾತದಲ್ಲಿ ವಿರಾಟ್ ಕೊಹ್ಲಿ ನಿಧನ ಎಂದು ಸಾಮಾಜಿಕ ತಾಣದಲ್ಲಿ ವಿಡಿಯೋ ವೈರಲ್
ಈ ವಿಡಿಯೋವನ್ನು ಹಂಚಿಕೊಳ್ಳುವಾಗ, ಅವರು ಇದನ್ನು ಶಿವಾಜಿ ಮಹಾರಾಜರಿಗೆ ಅರ್ಪಿಸಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಈ ವೀಡಿಯೊ ಮಾಡಲು ಸಹಾಯ ಮಾಡಿದ ಜನರನ್ನು ಸಹ ಟ್ಯಾಗ್ ಮಾಡಿದ್ದಾರೆ.
View this post on Instagram
ಪಾಯಲ್ ಜಾಧವ್ 2023 ರಲ್ಲಿ “ಬಾಪ್ಲ್ಯೋಕ್” ಚಿತ್ರದ ಮೂಲಕ ಮರಾಠಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಮೂಲಕ ಟಿವಿ9 ಕನ್ನಡ ತನಿಖೆ ನಡೆಸಿ ಈ ವಿಡಿಯೋದಲ್ಲಿರುವ ಕತ್ತಿವರಸೆ ಮಾಡುತ್ತಿರುವ ಮಹಿಳೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅಲ್ಲ, ಬದಲಿಗೆ ನಟಿ ಪಾಯಲ್ ಜಾಧವ್ ಎಂದು ಖಚಿತವಾಗಿ ಹೇಳುತ್ತೇವೆ.
ಪ್ರಧಾನಿ ಮೋದಿಯನ್ನು ಭೇಟಿಯಾದ ದೆಹಲಿ ಸಿಎಂ ರೇಖಾ ಗುಪ್ತಾ:
ಪ್ರಧಾನಿ ನರೇಂದ್ರ ಮೋದಿಯವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾದ ದೆಹಲಿ ಸಿಎಂ ರೇಖಾ ಗುಪ್ತಾ ಮೋದಿಯವರಿಗೆ ಪುಷ್ಪ ಗುಚ್ಛ ನೀಡಿದರು. ದೆಹಲಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ ರೇಖಾ ಗುಪ್ತಾ ಪ್ರಧಾನಿಯನ್ನು ಭೇಟಿಯಾಗುತ್ತಿರುವುದು ಇದೇ ಮೊದಲು. ಇಬ್ಬರೂ ನಾಯಕರು ಪ್ರಧಾನ ಮಂತ್ರಿಯವರ ನಿವಾಸದಲ್ಲಿ ಭೇಟಿಯಾದರು. ಪ್ರಧಾನಿ ಮೋದಿಯವರೊಂದಿಗಿನ ಭೇಟಿಯ ಬಳಿಕ ಮಾತನಾಡಿದ ಸಿಎಂ ರೇಖಾ ಗುಪ್ತಾ , ‘‘ಈ ದೆಹಲಿಯ ಮಗಳಿಗೆ ಮುಖ್ಯಮಂತ್ರಿಯಾಗಿ ಜನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಮೋದಿಯವರಿಗೆ ಧನ್ಯವಾದ’’ ಎಂದು ಹೇಳಿದ್ದಾರೆ. ಇಂದಿನ ಮಾತುಕತೆ ವೇಳೆ ದೆಹಲಿ ಮುಖ್ಯಮಂತ್ರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ದೆಹಲಿ ಸರ್ಕಾರವು ಸಾರ್ವಜನಿಕರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ವೇಗವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ದೆಹಲಿಯನ್ನು ಸ್ಮಾರ್ಟ್ ಮತ್ತು ಉತ್ತಮ ನಗರವನ್ನಾಗಿ ಮಾಡಲು ತಮ್ಮ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ